ಮತ ಪಟ್ಟಿಯಲ್ಲಿನ ಲೋಪಗಳ ತಿದ್ದುಪಡಿಗೆ ಸರ್ವರ್ ಅಡ್ಡಿ

KannadaprabhaNewsNetwork |  
Published : Sep 14, 2026, 01:45 AM IST
ದಿ.12-ಅರ್.ಪಿ.ಟಿ.2ಪಿ: ಬಾಳೂರು ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2026  ಮತದಾರ ನೋಂದಣೆ ಆಧಿಕಾರಿ ಡಾ.ಧನಂಜಯ  ಮತ್ತು ಸಿಬ್ಬಂದಿವರ್ಗ ತೊಡಗಿರುವುದು. | Kannada Prabha

ಸಾರಾಂಶ

ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2026 ಸಂಬಂಧ ಹಕ್ಕು ಮತ್ತು ಆಕ್ಷೇಪಣೆಗಳ ಸಲ್ಲಿಕೆ ಹಾಗೂ ಪಟ್ಟಿಯಲ್ಲಿನ ಲೋಪದೋಷಗಳನ್ನು ಸರಿಪಡಿಸುವ ಪ್ರಕ್ರಿಯೆಗೆ ಸರ್ವರ್ ಅಡ್ಡಿಯಾಗಿದ್ದು ಜನರು ದಿನಗಟ್ಟಲೆ ಕಾಯುವ ಶಿಕ್ಷೆ.!

ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ

ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2026 ಸಂಬಂಧ ಹಕ್ಕು ಮತ್ತು ಆಕ್ಷೇಪಣೆಗಳ ಸಲ್ಲಿಕೆ ಹಾಗೂ ಪಟ್ಟಿಯಲ್ಲಿನ ಲೋಪದೋಷಗಳನ್ನು ಸರಿಪಡಿಸುವ ಪ್ರಕ್ರಿಯೆಗೆ ಸರ್ವರ್ ಅಡ್ಡಿಯಾಗಿದ್ದು ಜನರು ದಿನಗಟ್ಟಲೆ ಕಾಯುವ ಶಿಕ್ಷೆ.!

ಸಮೀಪದ ಬಾಳೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮತದಾರರ ಪಟ್ಟಿಯ ಮ್ಯಾಪಿಂಗ್ ಆಗದೇ ಇರುವ ಹಾಗೂ ಮತದಾರರ ವಿವರಗಳು ತಪ್ಪಾಗಿರುವ ಮತದಾರರ ಪಟ್ಟಿಯ ಲೋಪದೋಷ ತಿದ್ದುಪಡಿಗೆ ಸಂಬಂಧಿಸಿದಂತೆ ನೋಟಿಸ್‍ಗಳನ್ನು ಸೃಜಿಸಲಾಗಿದ್ದು ಅದರಂತೆ ಮತದಾರರ ಭಾವಚಿತ್ರ ಹೊಂದಾಣಿಕೆ ಇಲ್ಲದೆ ಲೋಪದೋಷ ಕಂಡುಬಂದಿರುವ ಮತದಾರರಿಗೆ ನೋಟಿಸ್‍ಗಳನ್ನು ತಲುಪಿಸಲಾಗಿದ್ದು ಅದರನ್ವಯ ಸೆ. 9 ರಿಂದ ವಿಚಾರಣೆ ಆರಂಭಗೊಂಡಿದ್ದು ಸರ್ವರ್ ಸಮಸ್ಯೆಯಿಂದಾಗಿ ಮತದಾರರು ಕೆಲಸ ಬಿಟ್ಟುಕೊಂಡು ದಿನಗಟ್ಟಲೆ ಅಲೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಬಾಳೂರುಗಿಂತ ರಿಪ್ಪನ್‍ಪೇಟೆಯ ಹೋಬಳಿ ಕೇಂದ್ರದಲ್ಲಿ ಈ ವ್ಯವಸ್ಥೆ ಮಾಡಿದ್ದರೆ ಸರ್ವರ್ ಸಮಸ್ಯೆಯಿಲ್ಲದೆ ಮತದಾರರು ತಕ್ಷಣ ಲೋಪದೋಷವನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಗುವುದೆಂದು ತಾಲೂಕು ಪಂಚಾಯತ್ ಮಾಜಿ ಸದಸ್ಯೆ ನಿರ್ಮಲ ನಿಂಗಪ್ಪ ಮಾಧ್ಯಮದವರ ಬಳಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಬಾಳೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2026 ಮತದಾರ ನೋಂದಣೆ ಆಧಿಕಾರಿ ಡಾ.ಧನಂಜಯ ಮಾಧ್ಯಮದವರೊಂದಿಗೆ ಮಾತನಾಡಿ ಮತಗಟ್ಟೆಗಳ ವಿಭಾಗ ಮತ್ತು ಮತದಾರರ ಕ್ರಮಾಂಕದ ಮರುಹೊಂದಿಕೆ ಕಾರಣದಿಂದಾಗಿ ಭಾಗ ಸಂಖ್ಯೆ ಮತ್ತು ಕ್ರಮ ಸಂಖ್ಯೆ ಬದಲಾಗಿರುವ ಸಾಧ್ಯತೆ ಇದೆ ಎಂದು ಸ್ಪಷ್ಟಪಡಿಸಿದ ಅವರು ಮತದಾರರು ತಮ್ಮ ಲೋಪದೋಷಗಳನ್ನು ಈಗಲೇ ಸರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಿದ್ದು ಈ ಸೌಲಭ್ಯದ ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು. ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳಾದ ಉಮೇಶ್ ಮತ್ತು ಬಿ.ಎಲ್.ಓ ಅಧಿಕಾರಿಗಳು ಸರ್ವೇರ್ ಸಮಸ್ಯೆಯಿಂದಾಗಿ ನೋಟಿಸ್ ನೀಡಲಾಗಿರುವ ಲೋಪದೋಷಗಳಿರುವ ಮತದಾರರು ಕಾಯುವಂತಾಗಿದೆ ಎಂದು ವಿವರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಣಪ ಉತ್ಸವಕ್ಕೆ ಖರೀದಿ ಭರಾಟೆ ರಂಗು
ಭದ್ರಾವತಿಯಲ್ಲಿ ಗೌರಿ ಹಬ್ಬಕ್ಕೆ ಖರೀದಿ ಜೋರು