ಭಗವಂತ ಗ್ರಾಮಸ್ಥರ ಬೇಡಿಕೆ ಈಡೇರಿಸಲಿ: ನಿಶಾಂತ್

KannadaprabhaNewsNetwork |  
Published : Sep 05, 2024, 12:31 AM IST
4ಕೆಜಿಎಲ್18 ಕೊಳ್ಳೇಗಾಲ ತಾಲೂಕಿನ ಟಿಜಿದೊಡ್ಡಿಯಲ್ಲಿ ಅಯೋಜಿಸಿದ್ದ ಶಕ್ತಿ ವಿನಾಯಕ ಮತ್ತು ಶಕ್ತಿ ಮಾರಿಯಮ್ಮಾಳ್ ದೇಗುಲದಲ್ಲಿನ  ಕುಂಬಾಭೀಷೇಕ, ವಿಶೇಷ ಪೂಜಾ ಕಾಯ೯ಕ್ರಮಗಳಲ್ಲಿ ಪಾಲ್ಗೊಂಡ ಧಾನಿ ನಿಶಾಂತ್ ಅವರನ್ನು ಗ್ರಾಮಸ್ಥರು ಅಭಿನಂದಿಸಿದರು. ಈ ವೇಳೆ ಧನಗೆರೆ ಸುರೇಶ್, ತಿಮ್ಮರಾಜಿಪುರ ಪುಟ್ಟಣ್ಣ, ಬಸವರಾಜು, ಬಸಪ್ಪ ಇನ್ನಿತರಿದ್ದರು. | Kannada Prabha

ಸಾರಾಂಶ

ಕೊಳ್ಳೇಗಾಲ ತಾಲೂಕಿನ ಟಿಜಿದೊಡ್ಡಿಯಲ್ಲಿದ ಆಯೋಜಿಸಿದ್ದ ಶಕ್ತಿ ವಿನಾಯಕ ಮತ್ತು ಶಕ್ತಿ ಮಾರಿಯಮ್ಮಾಳ್ ದೇಗುಲದಲ್ಲಿನ ಕುಂಬಾಭೀಷೇಕ, ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ದಾನಿ ನಿಶಾಂತ್ ಅವರನ್ನು ಗ್ರಾಮಸ್ಥರು ಅಭಿನಂದಿಸಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ದೇವಸ್ಥಾನಗಳು ಮಾನವನ ನೆಮ್ಮದಿಯ ತಾಣಗಳು, ಇಲ್ಲಿಗೆ ಆಗಮಿಸಿ ಬೇಡಿಕೆ ಸಲ್ಲಿಸಿದರೆ ಇಷ್ಟಾರ್ಥ ಈಡೇರಲಿದೆ ಎಂಬ ನಂಬಿಕೆ ಅನಾದಿಕಾಲದಿಂದಲೂ ಇದೆ ಎಂದು ಹನೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ನಿಶಾಂತ್ ಹೇಳಿದರು. ತಾಲೂಕಿನ ಜಾಗೇರಿ ವ್ಯಾಪ್ತಿಯ ತಿಲ್ಲೆಗೌಡನದೊಡ್ಡಿಯಲ್ಲಿ ಆಯೋಜಿಸಿದ್ದ ಶಕ್ತಿ ವಿನಾಯಕ ಮತ್ತು ಶಕ್ತಿ ಮಾರಿಯಮ್ಮಾಳ್ ದೇವಸ್ಥಾನದ ಮಹಾ ಕುಂಬಾಭಿಷೇಕದ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡು ಮಾತನಾಡಿದರು.

ಇಲ್ಲಿನ ಜನರ ಪ್ರೀತಿಗೆ ನಾನು ಅಭಾರಿಯಾಗಿದ್ದೇನೆ. ಮೊದಲ ಬಾರಿಗೆ ಬಂದ ವೇಳೆ ನನಗೆ ಗಣಪತಿ ದೇಗುಲ ನಿರ್ಮಾಣಕ್ಕೆ ಮನವಿ ಸಲ್ಲಿಸಿದ್ದರು. ದೇಗುಲ ನಿರ್ಮಾಣಕ್ಕೆ ನನ್ನ ಕೈಲಾದ ಕೊಡುಗೆ ನೀಡಿದ್ದು ಇಂದಿನ ಪೂಜೆಯಲ್ಲಿ ಪಾಲ್ಗೊಂಡಿದ್ದು ಸಂತಸ ತಂದಿದೆ. ಗ್ರಾಮದಲ್ಲಿ ಹೆಚ್ಚು ಮಳೆ, ಬೆಳೆಯಾಗಲಿ, ಗ್ರಾಮ ಸಮೃದ್ಧಿಗಾಗಿ ಗ್ರಾಮಸ್ಥರ ಬಾಳು ಹಸನಾಗಲಿ ಎಂದರು. 2 ದಿನಗಳ ಕಾಲ ಹಬ್ಬದ ವಾತಾವರಣ: ಗ್ರಾಮದಲ್ಲಿ ಶಕ್ತಿ ಗಣಪತಿ ಮತ್ತು ಶಕ್ತಿ ದೇವತೆ ಮಾರಿಯಮ್ಮಾಳ್ ದೇಗುಲದ ಮಹಾ ಕುಂಬಾಭಿಷೇಕ, ವಿಶೇಷ ಪೂಜಾ ಕೈಂಕರ್ಯಗಳು ಪ್ರಧಾನ ಅರ್ಚಕ ರಂಗಸ್ವಾಮಿ ಮಾರ್ಗದರ್ಶನದಲ್ಲಿ ಜರುಗಿತು. ಮಂಗಳವಾರ ಬೆಳಗ್ಗೆ ಗಂಗೆ ಪೂಜೆ, ಬಳಿಕ ಕಳಸ ಪ್ರತಿಷ್ಠಾಪನೆ, ಹೋಮ, ವಿಶೇಷ ಪೂಜಾ ಕೈಂಕರ್ಯಗಳು ಸಾಂಘವಾಗಿ ಜರುಗಿತು.

ಬುಧವಾರ ಬೆಳಗ್ಗೆ ವಿನಾಯಕ ಪ್ರತಿಷ್ಠಾಪನೆ, ಮಾರಮ್ಮ ದೇಗುಲದಲ್ಲಿ ವಿಶೇಷ ಪೂಜೆ, ಕಳಸಾರೋಹಣ, ಮಹಾ ಮಂಗಳಾರತಿ ಬಳಿಕ ಅನ್ನ ಸಂತರ್ಪಣೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ತಾಲೂಕು ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ ತಿಮ್ಮರಾಜಿಪುರ ಪುಟ್ಟಣ್ಣ, ಹನೂರು ವೀರಶೈವ ಮಹಾಸಭೆ ತಾಲೂಕು ನಿರ್ದೇಶಕ ಬುಲೆಟ್ ಬಸವರಾಜು, ಗುಂಡೇಗಾಲ ಬಸಪ್ಪ, ಪಾಳ್ಯ ಬಸವರಾಜು ಸೇರಿದಂತೆ ಅನೇಕ ಗಣ್ಯರು ಪೂಜೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.

ಈ ವೇಳೆ ದಾನಿಗಳಾದ ಷಣ್ಮುಗರಾಜ, ಗ್ರಾಮದ ಮುಖಂಡರಾದ ಮಾದುಗೌಂಡರ್ ರತ್ನವೇಲುಗೌಂಡರ್, ಹಲಗಗೌಂಡರ್, ಸೇಠು, ಗಣೇಶಗೌಂಡರ್, ಮಾಜಿ ಗ್ರಾಪಂ ಸದಸ್ಯ ಮಾದುಗೌಡ, ಮಾಜಿ ಸೈನಿಕ ಶಿವಕುಮಾರ್, ಲಕ್ಷ್ಮಣ, ರಾಜೇಂದ್ರ, ಮಹೇಂದ್ರ, ಸತ್ತಿ ಚಿನ್ನಸ್ವಾಮಿ, ಪಳನಿಸ್ವಾಮಿ, ಹಲಗೇಶು,ರಾಜಕುಮಾರ್, ಶಕ್ತಿ, ಗಣೇಶನ್, ರತ್ನವೇಲು, ಮಹೇಂದ್ರ, ರಾಜ, ಮುರುಗನ್, ಮಯಿಲ್ ಸ್ವಾಮಿ, ಚೇತನ್, ಮುರುಗನ್, ಅಪ್ಪುಸ್ವಾಮಿ ಮಣಿ, ಅಯ್ಯನ್ ದೊರೈ, ಚೇತನ್, ಕುಪ್ಪುಸ್ವಾಮಿ, ಅಯ್ಯಪ್ಪ, ಕಣ್ಣನ್,ವಲ್ಲರಸು, ಆನಂದ್, ಅಪ್ಪುಸ್ವಾಮಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ