ಭಾರತೀಯ ಸೇನಾಪಡೆಗೆ ದೇವರು ಹೆಚ್ಚಿನ ಶಕ್ತಿ ನೀಡಲಿ

KannadaprabhaNewsNetwork |  
Published : May 11, 2025, 11:47 PM IST
11ಎಚ್ಎಸ್ಎನ್8 : ನುಗ್ಗೇಹಳ್ಳಿ ಹೊಯ್ಸಳ ಕ್ರಿಕೆಟ್ ಕ್ಲಬ್ ನಿಂದ ಆಯೋಜಿಸಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಕಾರ್ಯಕ್ರಮದಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ ಅವರನ್ನು ಸಂಘದ ಸದಸ್ಯರುಗಳು ಅಭಿನಂದಿಸಿದರು. ದೊರೆಸ್ವಾಮಿ, ತೋಟಿ ನಾಗರಾಜ್, ಪುಟ್ಟಸ್ವಾಮಿ, ಸಂಪತ್ ಕುಮಾರ್, ವಿಕ್ಟರ್, ಮಧು, ನಟರಾಜ್, ಹೊನ್ನೇಗೌಡ, ಸುಮಂತ್, ಪ್ರದೀಪ್, ಚೇತನ್, ಹರ್ಷಿತ್, ಹೇಮಂತ್, ಇದ್ದರು. | Kannada Prabha

ಸಾರಾಂಶ

ಆಪರೇಷನ್ ಸಿಂದೂರದ ಮೂಲಕ ಉಗ್ರರ ನೆಲೆಗಳನ್ನು ಭಾರತೀಯ ಸೇನೆಯ ವಾಯುಪಡೆ ನಾಶಪಡಿಸಿ ಪಹಲ್ಗಾಮ್‌ ದಾಳಿಗೆ ತಕ್ಕ ಉತ್ತರ ನೀಡಿರುವ ಭಾರತೀಯ ಸೇನಾಪಡೆಗೆ ದೇವರು ಹೆಚ್ಚಿನ ಶಕ್ತಿ ನೀಡಲಿ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಪ್ರಾರ್ಥಿಸಿದರು.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ಆಪರೇಷನ್ ಸಿಂದೂರದ ಮೂಲಕ ಉಗ್ರರ ನೆಲೆಗಳನ್ನು ಭಾರತೀಯ ಸೇನೆಯ ವಾಯುಪಡೆ ನಾಶಪಡಿಸಿ ಪಹಲ್ಗಾಮ್‌ ದಾಳಿಗೆ ತಕ್ಕ ಉತ್ತರ ನೀಡಿರುವ ಭಾರತೀಯ ಸೇನಾಪಡೆಗೆ ದೇವರು ಹೆಚ್ಚಿನ ಶಕ್ತಿ ನೀಡಲಿ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಪ್ರಾರ್ಥಿಸಿದರು.

ಹೋಬಳಿ ಕೇಂದ್ರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಮೈದಾನದಲ್ಲಿ ಹೊಯ್ಸಳ ಕ್ರಿಕೆಟರ್ಸ್ ವಿಶ್ವ ತಾಯಂದಿರ ದಿನದ ಅಂಗವಾಗಿ ಆಯೋಜಿಸಿದ್ದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಭಾರತೀಯ ಸೇನೆಯು ಆಪರೇಷನ್ ಸಿಂದೂರ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿರುವುದರಿಂದ ದೇಶದಲ್ಲಿ ಜಾತ್ಯಾತೀತವಾಗಿ ಪಕ್ಷಾತೀತವಾಗಿ ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸೈನಿಕರಿಗೆ ಶಕ್ತಿ ತುಂಬುತ್ತಿದ್ದಾರೆ ಎಂದು ತಿಳಿಸಿದರು.

ದೇಶದ ಭದ್ರತೆ ಬಹಳ ಮುಖ್ಯ ಭಾರತವು ಪಾಕ್ ಅಕ್ರಮಿತ ಕಾಶ್ಮೀರದ ಭಯೋತ್ಪಾದಕ ಶಿಬಿರಗಳ ಮೇಲೆ ಆಪರೇಷನ್ ಸಿಂದೂರ ಹೆಸರಿನ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದರು. ಯುವಕರು ನಿತ್ಯ ಯೋಗ ವ್ಯಾಯಾಮ ಮಾಡುವುದರಿಂದ ಜೀವನದಲ್ಲಿ ಏನಾದರೂ ಸಾಧನೆ ಮಾಡಬಹುದು ಹೆಚ್ಚು ಶ್ರಮಪಡಬೇಕು. ಇಂಗ್ಲೆಂಡ್ ದೇಶದಲ್ಲಿ ಕ್ರಿಕೆಟ್ ಪ್ರಾರಂಭವಾದರೂ ಸಹ ಭಾರತ ದೇಶದಲ್ಲಿ ಕ್ರಿಕೆಟ್ ಪಂದ್ಯಾವಳಿಗಳು ಹೆಚ್ಚು ಪ್ರಸಿದ್ಧಿ ಪಡೆದಿವೆ ಐಪಿಎಲ್ ಪಂದ್ಯಾವಳಿಗಳು ಆಪರೇಷನ್ ಸಿಂದೂರದ ಕಾರಣ ರದ್ದಾಗಿವೆ ಕ್ರೀಡಾಭಿಮಾನಿಗಳು ಸಹಕರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಬಿ. ಆರ್. ದೊರೆಸ್ವಾಮಿ, ನಾಗರಿಕ ವೇದಿಕೆ ಅಧ್ಯಕ್ಷ ತೋಟಿ ನಾಗರಾಜ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬೆಳಗಿಹಳ್ಳಿ ಪುಟ್ಟಸ್ವಾಮಿ, ಕಾಂಗ್ರೆಸ್ ಮುಖಂಡ ಅವೇರಳ್ಳಿ ವೇಣುಗೋಪಾಲ್, ಮುಖಂಡರುಗಳಾದ ಉದ್ಯಮಿ ಜಗದೀಶ್, ಸಂಪತ್ ಕುಮಾರ್, ವಿಕ್ಟರ್, ಸೋಸಲ್ಗೆರೆ ಮಧು, ಸತೀಶ್, ಜಾವೇದ್, ಹಕ್, ಭುವನೇಶ್, ಗ್ರಾಮ ಪಂಚಾಯತಿ ಸದಸ್ಯರುಗಳಾದ ಶಿವಕುಮಾರ್, ಮಂಜುನಾಥ ಸ್ವಾಮಿ, ಹೊನ್ನೇಗೌಡ, ನಟರಾಜ್ ಯಾದವ್, ಚಂದ್ರು, ಸುಹೀಲ್, ಹೊಯ್ಸಳ ಕ್ರಿಕೆಟ್ ಕ್ಲಬ್ ನ ಸುಮಂತ್ (ಅಚ್ಚು) ಪ್ರದೀಪ್, ದಿಲೀಪ್, ಚೇತನ್, ಹರ್ಷಿತ್, ಹೇಮಂತ್, ಇದ್ದರು.

PREV

Recommended Stories

ಕಾರ್ಯಕ್ರಮಕ್ಕೆ ಸಾರಿಗೆ ಬಸ್ಸಲ್ಲಿ ಬಂದ ಹೈಕೋರ್ಟ್‌ ನ್ಯಾಯಾಧೀಶರು!
ಜಮೀನು ಖಾಲಿ ಮಾಡಲು ಧಮಕಿ : ಚಿತ್ರ ನಿರ್ಮಾಪಕನ ವಿರುದ್ಧ ಕೇಸ್‌