ಬಣ್ಣದಾಟದಲ್ಲಿ ಪರಿಚಯ ಇದ್ದವರಿಗೆ ಮಾತ್ರ ಬಣ್ಣ ಹಚ್ಚಿ. ವಾಹನ ನಿಲ್ಲಿಸಿ ದಬಾಯಿಸಿ ಹಣ ಕೇಳಬಾರದು.
ಕನ್ನಡಪ್ರಭವಾರ್ತೆ ಕೆರೂರ
ಹಬ್ಬಗಳಿರುವುದು ಸಂಭ್ರಮಿಸುವುದಕ್ಕಾಗಿಯೇ ಹೊರತು ಕಿಡಿಗೇಡಿತನಕ್ಕಲ್ಲ. ಹಬ್ಬದ ಉದ್ದೇಶ ಸಂದೇಶ ಅರ್ಥ ಮಾಡಿಕೊಂಡು ನಡೆಯಬೇಕೆಂದು ಡಿ.ಎಸ್.ಪಿ. ವಿಶ್ವನಾಥರಾವ ಕುಲಕರ್ಣಿ ಹೇಳಿದರು. ಕೆರೂರ ಪಟ್ಟಣದಲ್ಲಿ ಹೋಳಿ ಹಾಗೂ ರಂಜಾನ್ ಆಚರಣೆಯ ಕುರಿತು ನಡೆದ ಶಾಂತಿ ಪಾಲನಾ ಸಭೆಯಲ್ಲಿ ಮಾತನಾಡಿದ ಅವರು, ಈಗ ವಿದ್ಯಾರ್ಥಿಗಳ ಪರೀಕ್ಷೆ ನಡೆಯುತ್ತಿವೆ. ಅವರಿಗೆ ತೊಂದರೆಯಾಗದಂತೆ ಮತ್ತು ಬಣ್ಣದಾಟದಲ್ಲಿ ಪರಿಚಯ ಇದ್ದವರಿಗೆ ಮಾತ್ರ ಬಣ್ಣ ಹಚ್ಚಿ. ವಾಹನ ನಿಲ್ಲಿಸಿ ದಬಾಯಿಸಿ ಹಣ ಕೇಳಬಾರದು. ಇವೆಲ್ಲ ಕಾನೂನು ಬಾಹಿರವಾಗಿದ್ದು ಕಿಡಿಗೇಡಿಗಳು ಏನಾದರೂ ದಾಂದಲೆ ಮಾಡಿದರೆ ಕಠಿಣ ಕ್ರಮ ಕೈಕೊಳ್ಳಲಾಗುವುದೆಂದರು.
ಬಾದಾಮಿ ಸಿಪಿಐ ಕರಿಯಪ್ಪ ಬನ್ನೆ ಮಾತನಾಡಿದರು. ಪಿಎಸ್ಐ ಸ್ವಾಗತಿಸಿ, ನಿರೂಪಿಸಿದರು. ನೌಜವಾನ ಸಿರತ್ ಕಮಿಟಿ ಕಾರ್ಯದರ್ಶಿ ಉಮರ್ ಪಾರೂಖ್ ಪೆಂಡಾರಿ ಮಾತನಾಡಿದರು. ಉಸ್ಮಾನ್ ಮುಲ್ಲಾ, ವೈ.ಸಿ. ಕಾಂಬಳೆ, ಗುಂಡಣ್ಣ ಬೋರಣ್ಣವರ, ಹನುಮಂತ ಪ್ರಭಾಕರ ಸೇರಿದಂತೆ ಅನೇಕ ಗಣ್ಯರು ಸಲಹೆ ಸೂಚನೆ ನೀಡಿದರು. ಸಭೆಯಲ್ಲಿ ಭೀಮಸೇನ ದೇಸಾಯಿ, ಅಶೋಕ ಜಿಗಳೂರ, ಇಬ್ರಾಹಿಂಸಾಬ ಖಾಜಿ, ಉಸ್ಮಾನ್ ಅತ್ತಾರ, ಮಹಾಂತೇಶ ಅಂಬಿಗೇರ, ವಿನಾಯಕ ದಾಸಮನಿ, ರಾಘು ಕಲಾದಗಿ, ಶ್ರೀಧರ ಚಂದರಗಿ, ಶಿವಯ್ಯ ವಜ್ರಮಟ್ಟಿ, ರಾಚಪ್ಪ ಮುದಕವಿ, ಬಸವರಾಜ ಹರಣಶಿಕಾರಿ, ರಾಜು ಚೋರಗಸ್ತಿ, ಮೋದಿನಸಾಬ ದೊಡಕಟ್ಟಿ, ಗೋವಿದಂಪ್ಪ ಬೆಳಗಂಟಿ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.