ಶಿಗ್ಗಾಂವಿ: ಮನುಷ್ಯರು ಚೈತನ್ಯವಂತರಾಗಬೇಕು. ಮನಸ್ಸು ಮತ್ತು ಹೃದಯವನ್ನು ವಿಶಾಲವಾಗಿರಬೇಕು ಎಂದು ಗಂಜೀಗಟ್ಟಿ ಮಠದ ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.
ತಾಲೂಕಿನ ವನಹಳ್ಳಿ ಪ್ಲಾಟ್‌ನಲ್ಲಿ ಆಂಜನೇಯ ದೇವಸ್ಥಾನ ಸೇವಾ ಕಮಿಟಿಯಿಂದ ಆಂಜನೇಯ ದೇವರ ನೂತನ ಶಿಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಹಾಗೂ ನೂತನ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮ, ಪ್ರಥಮ ಹನುಮ ಜಯಂತಿ ಹಾಗೂ ಧರ್ಮಸಭೆ, ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಸತತ ೨೫ ವರ್ಷಗಳ ಶ್ರಮದ ಫಲವಾಗಿ ಇಲ್ಲಿನ ಭಕ್ತರು ಆಂಜನೇಯ ಸ್ವಾಮಿ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. ಜತೆಗೆ ತಮ್ಮ ಮನಸನ್ನು ಸುಂದರವಾಗಿಟ್ಟುಕೊಂಡು, ಹೃದಯದಲ್ಲಿ ಆಂಜನೇಯ ಸ್ವಾಮಿ ನೆಲೆಸುವಂತೆ ಬಾಳಬೇಕು ಎಂದರು.
ಬಂಕಾಪುರದ ರೇವಣಸಿದ್ಧೇಶ್ವರ ಸ್ವಾಮಿಗಳು ಮಾತನಾಡಿ, ಗ್ರಾಮಸ್ಥರಿಗೆ ಆಂಜನೇಯಸ್ವಾಮಿ ಸಮೃದ್ಧಿ ನೀಡಲಿ. ಮಳೆ ಬೆಳೆ ಉತ್ತಮವಾಗಿ ಆಗಲಿ. ಯುವಕರು ದುಶ್ಚಟಗಳಿಂದ ದೂರವಾಗಲಿ. ಗ್ರಾಮ ಅಭಿವೃದ್ಧಿ ಹೊಂದಲಿ. ಧರ್ಮ ಕಾರ್ಯಗಳು ನಡೆಯಲಿ ಎಂದರು.ವಿರಕ್ತಮಠದ ಸಂಗನಬಸವ ಸ್ವಾಮಿಗಳು ಮಾತನಾಡಿ, ನಾಡಿನಲ್ಲಿ ಇಂತಹ ಧರ್ಮ ಕಾರ್ಯಗಳು ನಡೆಯಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಮೌಢ್ಯತೆಯಿಂದ ಹೊರಬರಬೇಕು. ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸಬೇಕು ಎಂದರು.
ಬೆಂಗಳೂರಿನ ಯುವ ವಾಗ್ಮಿ ಕುಮಾರಿ ಹಾರಿಕಾ ಮಂಜುನಾಥ ದಿಕ್ಸೂಚಿ ಭಾಷಣ ಮಾಡಿ, ಹನುಮಂತ, ರಾಮನ ಧರ್ಮದ ಹಾದಿಯಲ್ಲಿ ನಡೆಯಬೇಕು. ಧರ್ಮ ಕಾರ್ಯವನ್ನು ಮುಂದುವರಿಸಬೇಕು ಎಂದರು.ಆಂಜನೇಯ ದೇವಸ್ಥಾನ ಸೇವಾ ಕಮಿಟಿಯ ಗೌರವಾಧ್ಯಕ್ಷ ಅರ್ಜುನ ಹಂಚಿನಮನಿ, ಅಧ್ಯಕ್ಷ ಹನುಮಂತಪ್ಪ ಬಡ್ನಿ, ಉಪಾಧ್ಯಕ್ಷ ತಿಮ್ಮಣ್ಣ ವಡ್ಡರ, ಕಾರ್ಯದರ್ಶಿ ಶೆಟ್ಟೆಪ್ಪ ವಡ್ಡರ, ಪದಾಧಿಕಾರಿಗಳಾದ ಬಸವರಾಜ ವಡ್ಡರ, ರಡ್ಡೆಪ್ಪ ವಡ್ಡರ, ಮಂಜಪ್ಪ ವಡ್ಡರ, ಸಂತೋಷ ಬಂಡಿವಡ್ಡರ, ಫಕ್ಕಿರಪ್ಪ ವಡ್ಡರ, ಹನುಮಂತಪ್ಪ ವಡ್ಡರ, ಮಂಜಪ್ಪ ವಡ್ಡರ, ರಾಜಪ್ಪ ವಡ್ಡರ, ಸಣ್ಣರಾಮಣ್ಣ ವಡ್ಡರ, ಮಂಜುನಾಥ ವಡ್ಡರ, ರುದ್ರಪ್ಪ ದ್ಯಾವಕ್ಕನವರ, ಕ್ರಿಷ್ಣಪ್ಪ ವಡ್ಡರ, ರಮೇಶ ಭೋವಿವಡ್ಡರ, ಕೃಷ್ಣ ದೊಡ್ಮನಿ, ಯಲ್ಲಪ್ಪ ವಡ್ಡರ, ಪ್ರಸನ್ನ ಹೊಂಬಳ, ಪರಶುರಾಮ ವಾಲಿಕಾರ, ಹಾಲಪ್ಪ ವಡ್ಡರ, ಹನುಮಂತಪ್ಪ ವಡ್ಡರ, ಯಲ್ಲಪ್ಪ ವಡ್ಡರ, ಪರಸಪ್ಪ ವಡ್ಡರ, ಮಹಾಂತೇಶ ವಡ್ಡರ, ಶಿವರಾಜ ಭಜಂತ್ರಿ ಸೇರಿದಂತೆ ಯುವಕರು ಉಪಸ್ಥಿತರಿದ್ದರು.ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಜಾತ್ಯತೀತತೆ ಅಗತ್ಯ
ಶಿಗ್ಗಾಂವಿ: ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಜಾತ್ಯತೀತತೆ ಅಗತ್ಯ. ಅದರಿಂದಾಗಿ ಎಲ್ಲರೂ ಭಾರತೀಯರು ಎಂಬ ಭಾವ ಮೂಡುತ್ತದೆ ಎಂದು ಹತ್ತಿಮತ್ತೂರಿನ ವಿರಕ್ತಮಠದ ನಿಜಗುಣ ಶಿವಯೋಗಿ ಸ್ವಾಮೀಜಿ ತಿಳಿಸಿದರು.ತಾಲೂಕಿನ ಬಂಕಾಪುರದ ಸುಂಕದಕೇರಿ ಹೊಂಡದ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ದುರ್ಗಾದೇವಿ, ವಿಘ್ನೇಶ್ವರ, ಮಾತಂಗೆಮ್ಮದೇವಿ ಮತ್ತು ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಇತ್ತೀಚೆಗೆ ನಡೆದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.ದೇಸಾಯಿಮಠದ ಮಹಾಂತ ಸ್ವಾಮೀಜಿ ಸಾನ್ನಿಧ್ಯ, ಸೇವಾ ಸಮಿತಿ ಅಧ್ಯಕ್ಷ ವಿರೂಪಾಕ್ಷಪ್ಪ ಹುರಳಿ ಅಧ್ಯಕ್ಷತೆ ವಹಿಸಿದ್ದರು. ಹಾವೇರಿ ಸಿಂದಗಿ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ರೇಣುಕಾಚಾರ್ಯ ಆಸ್ಪತ್ರೆಯ ವೈದ್ಯ ಆರ್.ಎಸ್. ಅರಳೆಲೆಮಠ, ಬಸವರಾಜ ನರೆಗಲ್ಲ, ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಅಜ್ಜನವರ, ಬಿ.ಎಸ್. ಗಿಡ್ಡಣ್ಣವರ ಮಾತನಾಡಿದರು.
ಪಿಎಸ್ಐ ನಿಂಗರಾಜ ಕರಕಣ್ಣವರ, ಡಿ.ಎನ್. ಕೂಡಲ, ಪೀರಜಾದೆ, ಹುಬ್ಬಳ್ಳಿಯ ವೈದ್ಯ ಮುಗದೂರ, ಕಲಾವಿದ ಗುರುರಾಜ ಚಲವಾದಿ ಇದ್ದರು.ದೇವಸ್ಥಾನದಲ್ಲಿ ದುರ್ಗಾದೇವಿ, ವಿಘ್ನೇಶ್ವರ, ಆಂಜನೇಯ ಮಾತಂಗೆಮ್ಮ ದೇವಿಗೆ ಅಭಿಷೇಕ, ಕುಂಕುಮಾರ್ಚಣೆ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ನಂತರ ಚಿತ್ತರಗಿ ಕುಮಾರವಿಜಯ ನಾಟಕ ಸಂಘದಿಂದ ‘ಸಂದಿಮನಿ ಸಂಗವ್ವ’ ನಾಟಕ ಪ್ರದರ್ಶನ ನಡೆಯಿತು.