ಕನ್ನಡಪ್ರಭ ವಾರ್ತೆ ಕೊರಟಗೆರೆ
ತಾಲೂಕಿನ ಸಿದ್ಧರಬೆಟ್ಟ ಶ್ರೀ ಬಾಳೆಹೊನ್ನೂರು ಖಾಸಾ ಶಾಖಾ ಮಠದ ೧೯ನೇ ವಾರ್ಷಿಕೋತ್ಸವ ಅಂಗವಾಗಿ ಉಚಿತ ಸಾಮೂಹಿಕ ವಿವಾಹ, ಸಿದ್ದಶ್ರೀ ಪ್ರಶಸ್ತಿ ಪ್ರಧಾನ ಹಾಗೂ ಜನಜಾಗೃತಿ ಧರ್ಮ ಸಮಾವೇಶ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಸಾಮೂಹಿಕ ವಿವಾಹಕ್ಕೆ ಅರ್ಜಿ ಸಲ್ಲಿಸುವಂತೆ ಶ್ರೀ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.ತಾಲೂಕಿನ ಸಸ್ಯ ಕಾಶಿ ಸಂಜೀವಿನಿ ಕ್ಷೇತ್ರವಾದ್ದ ಸಿದ್ದರಬೆಟ್ಟದ ಶ್ರೀ ಮಠದಲ್ಲಿ ಏರ್ಪಡಿಸಿದ್ದ ಶ್ರೀ ಬಾಳೆಹೊನ್ನೂರು ಖಾಸಾ ಶಾಖಾ ಮಠದ ೧೯ನೇ ವಾರ್ಷಿಕೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಬೆಯ ದಿವ್ಯ ಸಾನಿದ್ಯವಹಿಸಿ ಮಾತನಾಡಿದರು.ಶ್ರೀ ಮಠದ ವಾರ್ಷಿಕೋತ್ಸವ ಕಾರ್ಯಕ್ರಮ ಜೂ.೮ ರಂದು ರಂಭಾಪುರಿ ವೀರಸಿಂಹಾಸನಾಧೀಶ್ವರ ಜಗದ್ಗುರು ಪ್ರಸನ್ನರೇಣುಕಾ ಡಾ,ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರ ದಿವ್ಯ ಸಾನಿದ್ಯದಲ್ಲಿ ಏರ್ಪಡಿಸಿದ್ದು. ಈ ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ, ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತ್ಯುತ್ಸವ, ವೀರಶೈವ ವಟುಗಳಿಗೆ ಉಚಿತ ದೀಕ್ಷಾ ಸಂಸ್ಕಾರ ಮತ್ತು ಉಚಿತ ಸಾಮೂಹಿ ಆದರ್ಶ ವಿವಾಹ ಹಾಗೂ ಜನಜಾಗೃತಿ ಧರ್ಮ ಸಮಾವೇಶದೊಂದಿಗೆ ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಸಾಧಕರಿಗೆ ಸಿದ್ದಶ್ರೀ ಪ್ರಶಸ್ತಿ ಪ್ರದಾನ ಮಾಡಲು ತೀರ್ಮಾನಿಸಲಾಗಿದೆ. ಉಚಿತ ಸಾಮೂಹಿಕ ವಿವಾಹದಲ್ಲಿ ಪಾಲ್ಗೂಳುವ ವಧು-ವರರು ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವಂತೆ ತಿಳಿಸಿದರು.ಉಚಿತ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳಲು ಬಯಸುವ ವಧುವಿಗೆ ೧೮ ವರ್ಷ, ವರನಿಗೆ ೨೧ ವರ್ಷ ಕಡ್ಡಾಯವಾಗಿ ತುಂಬಿರಬೇಕು, ಅಂತಹ ವಧು-ವರರು ಸಂಬಂಧಿಸಿದ ಪೋಷಕರುಗಳ ಮಾತಾಪಿತರು ೩೧-೫-೨೦೨೫ ಶನಿವಾರದೊಳಗೆ ಅಗತ್ಯ ದಾಖಲಾತಿಗಳನ್ನು ಶ್ರೀಮಠದಲ್ಲಿ ಸಲ್ಲಿಸಿ ನೊಂದಾಯಿಸಿಕೊಳ್ಳುಬೇಕು. ನಂತದಲ್ಲಿ ಬರುವ ದಾಖಲಾತಿಗಳನ್ನು ಪರಿಗಣಿಸಲಾಗುವುದಿಲ್ಲ, ವಧು-ವರರಿಗೆ ವಿವಾಹಸಮಯದಲ್ಲಿ ಮಾಂಗಲ್ಯ, ಮೂಗುತಿ ಹಾಗೂ ಸಮವಸ್ತ ನೀಡಲಾಗುವುದು.ಮಧು-ವರರ ಪ್ರತ್ಯೇಕ ೩ ಭಾವಚಿತ್ರಗಳು, ಜನನ ಪ್ರಮಾಣಪತ್ರ, ಅಥವಾ ಶಾಲಾ ದಾಖಲಾತಿ ಸರ್ಟಿಫೀಕೆಟ್, ವಾಸಸ್ಥಳದ ಬಗ್ಗೆ ಆಧಾರ್ ಕಾರ್ಡ್, ಪಡಿತರ ಚೀಟಿ, ಮಧು-ವರನದು ಪ್ರಥಮ ವಿವಾಹ ಎಂಬ ಬಗ್ಗೆ ಮತಾ-ಪಿತರಿಂದ ದೃಡೀಕರಣ ಪತ್ರ ನೀಡಬೇಕು, ಹೆಚ್ಚಿನ ವಿವರಗಳಿಗಾಗಿ ಶ್ರೀಮಠದ ಡಿ.ದೊಡ್ಡೇಗೌಡ್ರು(೯೪೮೨೭೨೧೭೮೯), ರಾಮಯ್ಯ ಮಾಸ್ಟರ್(೯೪೮೦೪೯೭೩೨೨), ವೇ, ಬಿ.ಎಸ್.ಜಗದೀಶ್ ಮಾಸ್ಟರ್(೯೭೩೧೮೦೧೦೪೮), ಶಿವಶಂಕರ್(೯೩೫೩೭೭೯೩೭೭) ರವರನ್ನು ಸಂಪರ್ಕಿಸಲು ತಿಳಿಸಿದರು. ಪೂರ್ವಬಾವಿ ಸಭೆಯಲ್ಲಿ ವೀರಶೈವ ಲಿಂಗಾಯಿತ ಮಹಾಸಭಾ ತಾಲೂಕು ಅಧ್ಯಕ್ಷ ಭದ್ರಯ್ಯ, ಪರ್ವತಯ್ಯ, ಸದಾಶಿವಯ್ಯ, ಉಮೇಶ್, ಶಿವಣ್ಣ, ಪುಟ್ಟನರಸಪ್ಪ, ರಘು, ಮಮತಾದಿವಾಕರ್, ಆರ್.ಎಸ್.ರಾಜಣ್ಣ, ಅರವಿಂದ್, ಪ್ರೇಮ್ ಕುಮಾರ್, ಗೀತಾ ನಾಗರಾಜು, ನಂಜಮ್ಮಸಿದ್ದಪ್ಪ, ಶಿವಕುಮಾರ್, ಸಿದ್ದಪ್ಪ, ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಪುರುಷೋತ್ತಮ್ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.