ಮೋದಿ ನೇತೃತ್ವ ವಿಕಸಿತ ಭಾರತ ಬಲಿಷ್ಠಗೊಳ್ಳಲಿ: ಸಂಸದ ರಾಘವೇಂದ್ರ

KannadaprabhaNewsNetwork |  
Published : Jun 11, 2026, 02:00 AM IST
ಕಾನೂರು ಬಸವೇಶ್ವರ ದೇವಸ್ಥಾನದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾದ ಪೂಜೆ ನಂತರದಲ್ಲಿ ಸಂಸದ ರಾಘವೇಂದ್ರ ಮಾತನಾಡಿದರು | Kannada Prabha

ಸಾರಾಂಶ

ನರೇಂದ್ರ ಮೋದಿ ಪ್ರಧಾನಿಯಾಗಿ ಸ್ವಾತಂತ್ರ್ಯ ನಂತರದಲ್ಲಿನ ಎಲ್ಲ ಪ್ರಧಾನಮಂತ್ರಿಗಳಿಗಿಂತ ಹೆಚ್ಚು ಕಾಲ ದೇಶದ ಚುಕ್ಕಾಣಿ ಹಿಡಿದ ಹಿರಿಮೆಯನ್ನು ಹೊಂದಿದ್ದಾರೆ. ಅವರ ನೇತೃತ್ವದಲ್ಲಿ ವಿಕಸಿತ ಭಾರತ ಸಂಕಲ್ಪ ಹೆಚ್ಚು ಬಲಿಷ್ಠವಾಗಿ ಸಾಕಾರಗೊಳ್ಳಲಿ ಎಂದು ಸಂಸದ ರಾಘವೇಂದ್ರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ನರೇಂದ್ರ ಮೋದಿ ಪ್ರಧಾನಿಯಾಗಿ ಸ್ವಾತಂತ್ರ್ಯ ನಂತರದಲ್ಲಿನ ಎಲ್ಲ ಪ್ರಧಾನಮಂತ್ರಿಗಳಿಗಿಂತ ಹೆಚ್ಚು ಕಾಲ ದೇಶದ ಚುಕ್ಕಾಣಿ ಹಿಡಿದ ಹಿರಿಮೆಯನ್ನು ಹೊಂದಿದ್ದಾರೆ. ಅವರ ನೇತೃತ್ವದಲ್ಲಿ ವಿಕಸಿತ ಭಾರತ ಸಂಕಲ್ಪ ಹೆಚ್ಚು ಬಲಿಷ್ಠವಾಗಿ ಸಾಕಾರಗೊಳ್ಳಲಿ ಎಂದು ಸಂಸದ ರಾಘವೇಂದ್ರ ತಿಳಿಸಿದರು.

ಪಟ್ಟಣದ ರಥಬೀದಿಯಲ್ಲಿನ ಕಾನೂರು ಬಸವೇಶ್ವರ ದೇವಸ್ಥಾನದಲ್ಲಿ ಬುಧವಾರ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ಅತಿ ಹೆಚ್ಚು ಅವಧಿ ಪೂರೈಸಿದ ಹಿನ್ನೆಲೆಯಲ್ಲಿ ತಾ.ಬಿಜೆಪಿ ವಿವಿಧ ಘಟಕದ ವತಿಯಿಂದ ಆಯೋಜಿಸಲಾಗಿದ್ದ ವಿಶೇಷ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದರು.

ಕಳೆದ 12 ವರ್ಷಗಳಿಂದ ದೇಶವನ್ನು ಜಾಗತಿಕ ಮಟ್ಟದಲ್ಲಿ ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ದು, ಕೋಟ್ಯಂತರ ಭಾರತೀಯರ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿರುವ ಪ್ರಧಾನಿ ನರೇಂದ್ರ ಮೋದಿರವರ ನೇತೃತ್ವದಲ್ಲಿ ''''''''ವಿಕಸಿತ ಭಾರತ''''''''ದ ಸಂಕಲ್ಪವು ಇನ್ನಷ್ಟು ಬಲಿಷ್ಠವಾಗಿ ಸಾಕಾರಗೊಳ್ಳಲಿ ಎಂದ ಅವರು ಪ್ರಧಾನಿಯಾಗಿ 4399 ದಿನ ಪೂರೈಸಿ ಯಶಸ್ವಿಯಾಗಿ ದೇಶವನ್ನು ಮುನ್ನಡೆಸುತ್ತಿರುವ ಈ ಶುಭ ಸಂದರ್ಭದಲ್ಲಿ ಉತ್ತಮ ಆರೋಗ್ಯ,ಆಯುಷ್ಯ ಹಾಗೂ ದೇಶದ ನಿರಂತರ ಅಭಿವೃದ್ಧಿಗಾಗಿ ಭಗವಂತ ಹೆಚ್ಚಿನ ಶಕ್ತಿ ನೀಡಲಿ ಎಂದು ಹಾರೈಸಿ ಪ್ರಧಾನಿಯವರ ಜನಪರ ಹಾಗೂ ದೇಶಭಕ್ತಿಯ ನಾಯಕತ್ವವು ನಮಗೆಲ್ಲರಿಗೂ ಸದಾ ದೇಶಸೇವೆಯಲ್ಲಿ ತೊಡಗಿಸಿಕೊಳ್ಳಲು ನಿರಂತರ ಪ್ರೇರಣೆಯಾಗಿದೆ ಎಂದರು.

ಈ ಧಾರ್ಮಿಕ ಕಾರ್ಯದಲ್ಲಿ ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ,ತಾ.ಬಿಜೆಪಿ ಅಧ್ಯಕ್ಷ ಹನುಮಂತಪ್ಪ ಸಂಕ್ಲಾಪುರ,ಅಶೋಕ್,ಸಿದ್ದಲಿಂಗಪ್ಪ,ಪ್ರಶಾಂತ್‌ ಸಾಳಂಕೆ,ಫಕೀರಪ್ಪ ಸಹಿತ ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು, ನಿಷ್ಠಾವಂತ ಕಾರ್ಯಕರ್ತ ಬಂಧುಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದು ಪ್ರಾರ್ಥನೆಯಲ್ಲಿ ಪಾಲ್ಗೊಂಡರು.

ಆರಂಭದಲ್ಲಿ ಪಟ್ಟಣದ ಪ್ರಮುಖ ಬೀದಿಯಲ್ಲಿ ಬೈಕ್‌ ರ್ಯಾಲಿ ನಡೆಸಿ ಪ್ರಧಾನಿ ಮೋದಿಗೆ ಜೈಕಾರ ಹಾಕಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಈಶ್ವರಪ್ಪರಿಗೆ ಸರ್ಕಾರದ ನೇತೃತ್ವ ಭಾಗ್ಯ ದೊರಕಲಿ: ಪೇಜಾವರ ಶ್ರೀ
ಹಕ್ಕುಪತ್ರ ನೀಡಲು ನೇರಲಗಿ ನಿವಾಸಿಗಳ ಮನವಿ