ಕಾರ್ಯಕರ್ತರಲ್ಲಿ ಸದಾ ಪಕ್ಷನಿಷ್ಠೆ ಇರಬೇಕು. ಪಕ್ಷದ ಒಟ್ಟಾರೆ ವ್ಯವಸ್ಥೆಯಲ್ಲಿ ಸದಾ ಚಟುವಟಿಕೆಯಿಂದಿರಬೇಕು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿ.ಎಸ್.ಅರುಣ್ ಹೇಳಿದರು.
ಶಿವಮೊಗ್ಗ: ಕಾರ್ಯಕರ್ತರಲ್ಲಿ ಸದಾ ಪಕ್ಷನಿಷ್ಠೆ ಇರಬೇಕು. ಪಕ್ಷದ ಒಟ್ಟಾರೆ ವ್ಯವಸ್ಥೆಯಲ್ಲಿ ಸದಾ ಚಟುವಟಿಕೆಯಿಂದಿರಬೇಕು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿ.ಎಸ್.ಅರುಣ್ ಹೇಳಿದರು.ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಏಕತಾ ನಡಿಗೆ ಜಿಲ್ಲಾ ಕಾರ್ಯಾಗಾರ ಸರ್ದಾರ್ -150 ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರ ಮನೆಯಲ್ಲಿ ರಾಜಕೀಯ, ಸಿನಿಮಾ, ಕ್ರಿಕೆಟ್ ಈ ಮೂರು ವಿಚಾರಗಳ ಬಗ್ಗೆ ಆಸಕ್ತಿ ಇರುತ್ತದೆ. ಈ ಬಗ್ಗೆ ಮಾತನಾಡುತ್ತಿರುತ್ತಾರೆ ಅದರಲ್ಲೂ ರಾಜಕೀಯದ ಬಗ್ಗೆ ವಿಶೇಷ ಆಸಕ್ತಿ ಇರುತ್ತದೆ. ಸಂಘಟನೆ ಗಟ್ಟಿಯಾಗಬೇಕಾದರೆ ಅಧಿಕಾರ ಬೇಕು. ಅಧಿಕಾರ ಇದ್ದರೆ ದೇಶದ ಅಭಿವೃದ್ಧಿ ಮಾಡಿ ಬದಲಾವಣೆ ತರಲು ಸಾಧ್ಯ. ಅಧಿಕಾರ ವೊಂದೇ ಅಲ್ಲ ನಿರಂತರವಾಗಿ ಕಾರ್‍ಯಕರ್ತರು ಪಕ್ಷದ ಚಟುವಟಿಕೆಯಲ್ಲಿರಬೇಕು ಎಂದರು.ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲೂ ಅನೇಕ ಬದಲಾವಣೆಗಳಾಗಲಿದೆ. ಈ ಸರ್ಕಾರದ ನಡೆಗಳನ್ನು ಜನ ಗಮನಿಸುತ್ತಿದ್ದು, ಸರ್ಕಾರದ ಬಗ್ಗೆ ಅಸಹನೆ ತೋರಿಸುತ್ತಿದ್ದಾರೆ. ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹಾಗೂ ದೇಶದ ಅಭಿವೃದ್ಧಿಗಾಗಿ ಹೋರಾಟ ಮಾಡಿದ ತ್ಯಾಗಮಾಡಿದ ದಾರ್ಶನಿಕರ ಬಗ್ಗೆ ಯುವಕರಲ್ಲಿ ಅರಿವು ಮೂಡಿಸಬೇಕಾದ ಕರ್ತವ್ಯವಿದೆ. ಅಂತಹ ಮಹಾನ್ ವ್ಯಕ್ತಿತ್ವಗಳ ಬಗ್ಗೆ ದೇಶ ಕಟ್ಟಿದವರ ಬಗ್ಗೆ ಗೌರವ ಸೂಚಿಸಬೇಕು ಅವರಿಗಾಗಿ ಕನಿಷ್ಠ ಒಂದು ಗಂಟೆಯನ್ನಾದರೂ ಶಾಲಾ - ಕಾಲೇಜುಗಳಲ್ಲಿ ಅವರ ಜನ್ಮದಿನದಂದು ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸವಾಗಬೇಕು. ಕಾಟಾಚಾರಕ್ಕೆ ದಾರ್ಶನಿಕರ ಜಯಂತಿಗಳು ಆಗಬಾರದು ಎಂದರು.ಅವರ ಬಗ್ಗೆ ತಿಳಿದುಕೊಳ್ಳದಿದ್ದರೆ ಪ್ರೇರಣೆ ಸಿಗುವುದು ಹೇಗೆ? 2014ರ ನಂತರ ಭಾರತದ ಬೆಳವಣಿಗೆ ಯಾವ ರೀತಿಯಲ್ಲಿ ಆಗಿದೆ ಅದರ ಮುಂಚೆ ಯಾವ ನಾಯಕರು ಆಳಿದ್ದರೂ, ದೇಶದ ಸ್ಥಿತಿ ಹೇಗಿತ್ತು ಎಂಬುದರ ಬಗ್ಗೆ ಯುವಶಕ್ತಿಗೆ ತಿಳಿಸಬೇಕಾಗಿದೆ. ಉಕ್ಕಿನ ಮನುಷ್ಯ ದೇಶದ ಮಾಜಿ ಗೃಹ ಸಚಿವ ಸರ್ದಾರ್ ಪಟೇಲ್ ಯುವಕರಿಗೆ ರೋಲ್ ಮಾಡೆಲ್ ಆಗಬೇಕು. ಸರ್ದಾರ್ ಪಟೇಲ್ ಅವರನ್ನು ನಾವು ಮೊದಲು ತಿಳಿದುಕೊಳ್ಳಬೇಕು. ಭಾರತ ನಿರ್ಮಾಣ ಅಂದರೆ ವ್ಯಕ್ತಿ ನಿರ್ಮಾಣ ಮೊದಲು ಆಗಬೇಕು ಅದಕ್ಕಾಗಿ ಸರ್ದಾರ್ ಅವರ ಬಗ್ಗೆ ತಿಳಿಯಲು ‘ಏಕತಾ ನಡಿಗೆ’, ಪರಿಸರ ಜಗೃತಿ ಪ್ರಬಂಧ ಮತ್ತು ಭಾಷಣ ಸ್ಪರ್ಧೆ, ರೀಲ್ ಮೂಲಕ ಏಕತಾ ಪ್ರತಿಮೆಯ ಬಗ್ಗೆ ಮಾಹಿತಿ ನೀಡುವ ಸ್ಪರ್ಧೆ ಸೇರಿದಂತೆ ಅನೇಕ ಕಾರ್‍ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕರ್ತರ ಮತ್ತು ನಾಯಕರ ಸಮಿತಿಯನ್ನು ರಚನೆ ಮಾಡಲಾಗಿದ್ದು, ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಅವರು ಕರೆ ನೀಡಿದರು.ಈ ಸಂದರ್ಭದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ಪ್ರಮುಖರಾದ ಮಾಲತೇಶ್, ಅಭಿಯಾನದ ಸಂಚಾಲಕ ಮಾಜಿ ಶಾಸಕ ಕೆ.ಜಿ.ಕುಮಾರ ಸ್ವಾಮಿ, ಬಿಜೆಪಿ ನಗರ ಅಧ್ಯಕ್ಷ ಮೋಹನ್ ರೆಡ್ಡಿ, ಪದ್ಮಿನಿರಾವ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಗಾಯತ್ರಿ ಮಲ್ಲಪ್ಪ, ಪದ್ಮಿನಿ ರಾವ್, ಕುಪೇಂದ್ರ, ಅಣ್ಣಪ್ಪ, ಮಂಗಳ ನಾಗೇಂದ್ರ, ಸುಮಾ ಭೂಪಾಳಂ, ಸಂತೋಷ್, ಸತೀಶ್ ರಾಮಿನಕೊಪ್ಪ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.