ಕನ್ನಡಪ್ರಭ ವಾರ್ತೆ ಬೈಲಹೊಂಗಲ
ನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ವಿಜಯದಶಮಿ ಉತ್ಸವ ಅಂಗವಾಗಿ ಶನಿವಾರ ನಡೆದ ಆರ್.ಎಸ್.ಎಸ್. ಪಥಸಂಚಲನ ಬಳಿಕ ನಗರಸಭೆ ಕ್ರೀಡಾಂಗಣದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದರು.ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶಿಸ್ತು, ಸಂಘಟನಾ ಮನೋಭಾವ ಮತ್ತು ಪರಸ್ಪರ ಸಹಕಾರ ಅತ್ಯಂತ ಅಗತ್ಯವಾಗಿದೆ. ವ್ಯಕ್ತಿಯ ನಿರ್ಮಾಣದ ಮೂಲಕ ಸದೃಢ ಸಮಾಜ ನಿರ್ಮಾಣ ಸಾಧ್ಯವಿದೆ. ಸಮಾಜದ ಹಿತವನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಬೇಕು. ಸಂಘಟನೆಯ ಶಿಸ್ತು, ಸಂಘಟನಾ ಮನೋಭಾವ, ಸಮಾಜಮುಖಿ ಕಾರ್ಯಗಳ ಮಹತ್ವದ ಕುರಿತು ವಿವರಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹ ಕಾರ್ಯವಾಹಕ ಕಿರಣ ಗುಡ್ಡದಕೇರಿ ಮಾತನಾಡಿ, ವಿಜಯದಶಮಿ ಉತ್ಸವವು ಶಕ್ತಿ, ಸಾಮರ್ಥ್ಯ, ಸಂಘಟನೆ ಹಾಗೂ ಉತ್ತಮ ಸಂಕಲ್ಪದ ಸಂಕೇತವಾಗಿದೆ. ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಶಿಸ್ತು, ಸೇವಾ ಮನೋಭಾವಕ್ಕೆ ವಿಶೇಷ ಮಹತ್ವವಿದೆ. ವ್ಯಕ್ತಿಯ ವ್ಯಕ್ತಿತ್ವ ವಿಕಸನದ ಜೊತೆಗೆ ಸಮಾಜದಲ್ಲಿ ಒಗ್ಗಟ್ಟು, ಸಾಮರಸ್ಯ ಬೆಳೆಸುವ ಕಾರ್ಯದಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಬೇಕು ಎಂದರು.ವೀರರಾಣಿ ಕಿತ್ತೂರು ಚನ್ನಮ್ಮ ಸಮಾಧಿ ಸ್ಥಳದಿಂದ ಆರಂಭಗೊಂಡ ಪಥಸಂಚಲನ ಬಜಾರ ರಸ್ತೆ, ಜವಳಿ ಕೂಟ, ಗೊಂಬಿಗುಡಿ, ಬೆಲ್ಲದಕೂಟ, ಉಪ್ಪಿನಕೂಟ, ಹೊಸೂರ ಗಲ್ಲಿ, ಇಂಚಲ ಗಲ್ಲಿ, ಹಳೇ ಹನುಮಂತದೇವರ ಗುಡಿ, ದೊಡ್ಡಾದೇವರ ಗುಡಿ, ಭಟ್ಟನ ಕೂಟ, ಹುಡೇದ ಭಾವಿ, ರೇಶ್ಮಿ ಬಜಾರ ರಸ್ತೆ, ಬಸ್ ನಿಲ್ದಾಣ ರಸ್ತೆ, ಮಯೂರ ಹೋಟೆಲ್, ಸೋಮವಾರ ಪೇಟೆ, ಗಣಪತಿ ದೇವಸ್ಥಾನ, ಹರಳಯ್ಯ ಕಾಲನಿ, ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ಹೊಸೂರ ರಸ್ತೆ ಮೂಲಕ ಸಂಚರಿಸಿ ನಗರಸಭೆ ಕ್ರೀಡಾಂಗಣ ತಲುಪಿತು.
ಪಥ ಸಂಚಲನವು ಪ್ರಮುಖ ರಸ್ತೆಗಳಲ್ಲಿ ಶಿಸ್ತುಬದ್ಧವಾಗಿ ಸಾಗಿತು. ಗಣವೇಷಧಾರಿ ಸ್ವಯಂಸೇವಕರು ಘೋಷ್ ವಾದ್ಯದೊಂದಿಗೆ ಹೆಜ್ಜೆ ಹಾಕುತ್ತಾ ಸಾಗಿದ ದೃಶ್ಯ ಸಾರ್ವಜನಿಕರ ಗಮನ ಸೆಳೆಯಿತು.ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಉದ್ಯಮಿ ವಿಜಯ ಮೆಟಗುಡ್ಡ, ವಿಎಚ್‌ಪಿ ಜಿಲ್ಲಾಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ, ತಾಲೂಕಾಧ್ಯಕ್ಷ ಕಾಶಿನಾಥ ಬಿರಾದಾರ, ವಕೀಲ ಎಫ್.ಎಸ್.ಸಿದ್ದಮಗೌಡರ, ಮಹಾಂತೇಶ ತುರಮರಿ, ಮುರುಳಿಧರ ಮಾಳೋದೆ, ಮುಕುಂದ ಕುಲಕರ್ಣಿ, ಯಲ್ಲಪ್ಪ ದೇವರಹುಬ್ಬಳ್ಳಿ, ಪ್ರಹ್ಲಾದ ದೇವರಹುಬ್ಬಳ್ಳಿ, ಅಶೋಕ ಸವದತ್ತಿ, ವಿವೇಕಾನಂದ ಪೂಜೇರ, ಚಿದಂಬರ ಮೇಟಿ, ತಾಲೂಕು ಕಾರ್ಯವಾಹಕ ರಮೇಶ ನೇಗಿನಹಾಳ ಸೇರಿದಂತೆ ಅನೇಕರು ಇದ್ದರು. ವಿಶಾಲ ಹೋಮಕರ ಸ್ವಾಗತಿಸಿದರು.