ಧರ್ಮ ಸಮಾಜದ ಪ್ರಗತಿಗೆ ಪೂರಕವಾಗಲಿ: ಡಾ. ಅನ್ನದಾನೀಶ್ವರ ಸ್ವಾಮೀಜಿ

KannadaprabhaNewsNetwork |  
Published : Nov 05, 2025, 12:30 AM IST
ಕಾರ್ಯಕ್ರಮದಲ್ಲಿ ಡಾ. ಅನ್ನದಾನ ಸ್ವಾಮೀಜಿ ಮಾತನಾಡಿದರು. | Kannada Prabha

ಸಾರಾಂಶ

ಧರ್ಮವು ಸಮಾಜದ ಬೆಳವಣಿಗೆಗೆ ಪೂರಕವಾಗಿರಬೇಕು. ಸಮಾಜದಲ್ಲಿ ಇರುವ ಪ್ರತಿಯೊಬ್ಬರೂ ಧಾರ್ಮಿಕ ಕಾರ್ಯಗಳಿಗೆ ದಾನ ನೀಡುವ ಗುಣ ಬೆಳೆಸಿಕೊಳ್ಳಬೇಕು.

ಲಕ್ಷ್ಮೇಶ್ವರ: ಧರ್ಮ ಕಾರ್ಯಗಳು ಸಮಾಜದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ನಡೆಯುತ್ತಿರಬೇಕು. ಸಮಾಜದ ಏಳ್ಗೆಗೆ ಧರ್ಮಗಳು ಕೈಜೋಡಿಸಬೇಕು ಎಂದು ಮುಂಡರಗಿಯ ಡಾ. ಅನ್ನದಾನೀಶ್ವರ ಸ್ವಾಮೀಜಿ ತಿಳಿಸಿದರು.

ಮಂಗಳವಾರ ಪಟ್ಟಣದ ಶಿಗ್ಲಿ ಮಾರ್ಗದ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ಹತ್ತಿರ ದಿ. ಬಸವರಾಜ ಗೂಳಪ್ಪ ಉಪನಾಳ ಇವರು ಹೂವಿನಶಿಗ್ಲಿ ವಿರಕ್ತಮಠಕ್ಕೆ ಭೂದಾನ ಮಾಡಿರುವ ೧ ಎಕರೆ ಜಮೀನಿನಲ್ಲಿ ಧಾರ್ಮಿಕ ಪಾಠಶಾಲಾ ಕಟ್ಟಡದ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಧರ್ಮವು ಸಮಾಜದ ಬೆಳವಣಿಗೆಗೆ ಪೂರಕವಾಗಿರಬೇಕು. ಸಮಾಜದಲ್ಲಿ ಇರುವ ಪ್ರತಿಯೊಬ್ಬರೂ ಧಾರ್ಮಿಕ ಕಾರ್ಯಗಳಿಗೆ ದಾನ ನೀಡುವ ಗುಣ ಬೆಳೆಸಿಕೊಳ್ಳಬೇಕು. ದಾನದಿಂದ ಮನಸ್ಸಿಗೆ ನೆಮ್ಮದಿ ಜತೆಗೆ ಒಳ್ಳೆಯ ಕಾರ್ಯ ಮಾಡಿದ ತೃಪ್ತಿ ದೊರಕುತ್ತದೆ. ಇಂದಿನ ದಿನಗಳಲ್ಲಿ ದಾನ- ಧರ್ಮಗಳಿಂದ ಧರ್ಮ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಬೆಳೆಯುತ್ತಿವೆ ಎಂದರು.

ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಜಿ.ಎಂ. ಮಹಾಂತಶೆಟ್ಟರ ಅವರು ಮಾತನಾಡಿ, ಉಪನಾಳ ಕುಟುಂಬದವರು ಈ ಭಾಗದಲ್ಲಿ ಅನೇಕ ಧಾರ್ಮಿಕ ಕಾರ್ಯಗಳಿಗೆ ಭೂಮಿಯ ದಾನ ಮಾಡಿರುವ ಅನೇಕ ಉದಾಹರಣೆಗಳಿವೆ. ಹೂವಿನಶಿಗ್ಲಿ ವಿರಕ್ತಮಠದಿಂದ ಆರಂಭವಾಗುವ ಧಾರ್ಮಿಕ ಪಾಠಶಾಲೆ ಮತ್ತೊಂದು ಮೈಲಿಗಲ್ಲಾಗಲಿದೆ ಎಂದರು.

ಹೂವಿನಶಿಗ್ಲಿಯ ಚನ್ನವೀರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಕುಂದಗೋಳ ಕಲ್ಯಾಣಪುರಮಠದ ಅಭಿನವ ಬಸವಣ್ಣಜ್ಜನವರು ನೇತೃತ್ವ ವಹಿಸಿದ್ದರು. ಮಹಾಂತದೇವರು ಉಪಸ್ಥಿತರಿದ್ದರು. ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಪಾರ್ವತಿ ಬಸವರಾಜ ಉಪನಾಳ, ಎಸ್.ಪಿ. ಬಳಿಗಾರ, ಪುಲಕೇಶಿ ಉಪನಾಳ, ಮಹೇಶ ಉಪನಾಳ, ಸೋಮೇಶ ಉಪನಾಳ, ರಮೇಶ ಉಪನಾಳ, ನಂದಾ ಧರ್ಮಾಯತ, ಡಿ.ಬಿ. ಬಳಿಗಾರ, ಚಂಬಣ್ಣ ಬಾಳಿಕಾಯಿ, ಡಾ. ವಿನೋದ ಹೊನ್ನಿಕೊಪ್ಪ, ಎಲ್.ಎಸ್. ಅರಳಹಳ್ಳಿ, ಡಾ. ಆರ್.ಜಿ. ಚಿಕ್ಕಮಠ, ನಿಂಗಪ್ಪ ಹೆಬಸೂರ, ಮಂಜುನಾಥ ಮಾಗಡಿ, ಹೊನ್ನಪ್ಪ ಒಡ್ಡರ, ನಾಗರಾಜ ಚಿಂಚಲಿ, ರಾಮಣ್ಣ ಲಮಾಣಿ(ಶಿಗ್ಲಿ), ಪುರಸಭೆ ಸದಸ್ಯರು ಇದ್ದರು. ಈ ವೇಳೆ ಭೂದಾನಿ ದಿ. ಬಸವರಾಜ ಉಪನಾಳ ಕುಟುಂಬದವರನ್ನು ಸನ್ಮಾನಿಲಾಯಿತು. ಸಿದ್ದಯ್ಯಶಾಸ್ತ್ರಿ ಹಿರೇಮಠ ನಿರೂಪಿಸಿದರು, ಅಶೋಕ ಶಿರಹಟ್ಟಿ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ