ಸಾ.ರಾ.ಮಹೇಶ್‌ ಬಹುಮತದೊಂದಿಗೆ ಗೆದ್ದು ನಿಮ್ಮೆಲ್ಲರ ಸೇವೆ ಮಾಡುವಂತಾಗಲಿ: ಎಚ್.ಡಿ. ರೇವಣ್ಣ

KannadaprabhaNewsNetwork |  
Published : Aug 13, 2026, 01:15 AM IST
50 | Kannada Prabha

ಸಾರಾಂಶ

ಶಾಸಕರಾಗುವ ಮೊದಲಿನಿಂದಲೂ ಜನಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜ ದೇವೋಭವ ಕಾರ್ಯಕ್ರಮದೊಂದಿಗೆ ಜನತೆಯ ಬಡ ಜನರಿಗೆ ಸಹಾಯಹಸ್ತ ಚಾಚುತ್ತಾ ಇಂದಿಗೂ ಪರಾಭವಗೊಂಡರೂ ಸೇವಾಕಾರ್ಯ ನಿಲ್ಲಿಸಿಲ್ಲ, ಇವರ ಜನಸೇವೆ ಶ್ಲಾಘನೀಯವಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ನಗರ

ಸಾ.ರಾ.ಮಹೇಶ್ ಹಿಂದಿನಿಂದಲೂ ತಮ್ಮ ಸ್ವಂತ ಹಣದೊಂದಿಗೆ ಜನಸೇವೆಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಮುಂದಿನ ಚುನಾವಣೆಯಲ್ಲಿ ನಿಮ್ಮೆಲ್ಲರ ಪ್ರೀತಿಯಿಂದ ಬಹುಮತದೊಂದಿಗೆ ಗೆದ್ದು ಬಂದು ನಿಮ್ಮೆಲ್ಲರ ಸೇವೆ ಮಾಡುವಂತಾಗಲಿ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.

ಪಟ್ಟಣದ ಪುರಸಭಾ ಬಯಲುರಂಗಮಂದಿರ ಮೈದಾನದಲ್ಲಿ ನಡೆದ ಮಾಜಿ ಸಚಿವ ಸಾ.ರಾ.ಮಹೇಶ್‌ರ 60ನೇ ಹುಟ್ಟುಹಬ್ಬ ಆಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಶಾಸಕರಾಗುವ ಮೊದಲಿನಿಂದಲೂ ಜನಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜ ದೇವೋಭವ ಕಾರ್ಯಕ್ರಮದೊಂದಿಗೆ ಜನತೆಯ ಬಡ ಜನರಿಗೆ ಸಹಾಯಹಸ್ತ ಚಾಚುತ್ತಾ ಇಂದಿಗೂ ಪರಾಭವಗೊಂಡರೂ ಸೇವಾಕಾರ್ಯ ನಿಲ್ಲಿಸಿಲ್ಲ, ಇವರ ಜನಸೇವೆ ಶ್ಲಾಘನೀಯವಾಗಿದೆ ಎಂದರು.

ಹರಸಿ, ಹಾರೈಸಿ- ನಿಖಿಲ್‌:

ಜೆಡಿಎಸ್‌ ಯುವ ನಾಯಕ ನಿಖಿಲ್‌ ಕುಮಾರಸ್ವಾಮಿ ಮಾತನಾಡಿ, ಜನಸೇವೆಯನ್ನು ತಮ್ಮ ಬದುಕಾಗಿಸಿಕೊಂಡಿರುವ ಸಾ.ರಾ. ಮಹೇಶ್ ಇಂದಿನ ಸಮಾಜದೇವೋಭವ ಕಾರ್ಯಕ್ರಮದಲ್ಲಿ ಸಾವಿರಾರು ಜನ ಪಾಲ್ಗೊಂಡು ಹರಸಿ ಹಾರೈಸಿದ್ದು, ಮುಂದಿನ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಜನತೆಯೆ ಸೇವೆಯಲ್ಲಿ ತೊಡಗಿಸಿಕೊಳ್ಳುವಂತಾಗಲಿ ಎಂದರು.

ನಾನು ಚಿರಋಣಿಯಾಗಿದ್ಧೇನೆ- ಸಾ.ರಾ. ಮಹೇಶ್‌;

ಮಾಜಿ ಸಚಿವ ಸಾ.ರಾ.ಮಹೇಶ್ ಮಾತನಾಡಿ, ನನ್ನ 50ನೇ ಹುಟ್ಟುಹಬ್ಬದ ಆಚರಣೆ ಸಂದರ್ಭ ಎಚ್.ಡಿ. ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಇನ್ನು ಮುಂದೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸುವುದಿಲ್ಲ ಎಂದು ನಿರ್ಧರಿಸಿದ್ದೆ. ಅದರಂತೆ ನಡೆದುಕೊಂಡಿದ್ದೆ, ಆದರೆ ನನಗೆ ಯಾವುದೆ ಅಧಿಕಾರವಿಲ್ಲದಿದ್ದರೂ ನನ್ನ 60ನೇ ಹುಟ್ಟುಹಬ್ಬದ ಪ್ರಯುಕ್ತ ನನ್ನ ಕ್ಷೇತ್ರದ ಜನರು ಅಭಿಮಾನದಿಂದ ಪ್ರೀತಿ ಆದರಗಳಿಂದ ಸಮಾಜದೇವೋಭವ ಕಾರ್ಯಕ್ರಮವನ್ನು ಹಮ್ಮಿಕೊಂಡು ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ.

ಇದಕ್ಕೆ ನಾನು ಚಿರಋಣಿಯಾಗಿದ್ಧೇನೆ. ಇನ್ನುಮುಂದೆ ಜೀವನಪರ್ಯಂತ ಯಾವುದೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದಿಗೂ ನಿಮ್ಮ ಆಶೀರ್ವಾದವಿರಲಿ ಎಂದರು.

ಮಾಜಿ ಸಚಿವ ಪುಟ್ಟರಾಜು, ಶಾಸಕ ಎ.ಮಂಜು, ಮಾಜಿ ಶಾಸಕ ಮಹದೇವ್, ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಮಾತನಾಡಿದರು. ಗಾವಡಗೆರೆ ಮಠದ ಶ್ರೀ ನಟರಾಜ ಸ್ವಾಮೀಜಿ ಆಶೀರ್ವಚನ ನೀಡಿದರು.

ಅನಿತಾ ಸಾ.ರಾ. ಮಹೇಶ್, ನವನಗರ ಬ್ಯಾಂಕ್ ಅಧ್ಯಕ್ಷ ಕೆ.ಎನ್. ಬಸಂತ್, ಜಿಪಂ ಮಾಜಿ ಸದಸ್ಯ ಎ.ಎಸ್. ಚನ್ನಬಸಪ್ಪ, ಅಚ್ಚುತಾನಂದ, ದ್ವಾರಕೀಶ್, ಜೆಡಿಎಸ್‌ ಅಧ್ಯಕ್ಷ ಕುಮಾರ್, ಮೆಡಿಕಲ್‌ ರಾಜಣ್ಣ, ತಾಲೂಕು ವಕ್ತಾರ ಕೆ.ಎಲ್. ರಮೇಶ್, ಚಂದ್ರಶೇಖರ್, ಪುರಸಭೆ ಮಾಜಿ ಸದಸ್ಯ ಕೆ.ಎಲ್. ಜಗದೀಶ್, ಉಮೇಶ್, ಕಾಂತರಾಜ್, ತಮ್ಮಣ್ಣ, ಮುಖಂಡರು ಸಾವಿರಾರು ಸಂಖ್ಯೆಯ ಅಭಿಮಾನಿಗಳು, ಕಾರ್ಯಕರ್ತರು ಇದ್ದರು.

ಇದಕ್ಕೂ ಮುನ್ನ ಸಾ.ರಾ. ಮಹೇಶ್‌ ಅವರ ಪುತ್ರ ಡಾ.ಸಾ.ರಾ. ಧನುಷ್ ನೇತೃತ್ವದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸಾವಿರಾರು ಮಂದಿ ಪಾಲ್ಗೊಂಡು ಚಿಕಿತ್ಸೆ ಪಡೆದರಲ್ಲದೆ, ನೂರಾರು ಮಂದಿ ರಕ್ತದಾನ ಮಾಡಿದರು.

ಸಾ.ರಾ. ಮಹೇಶ್‌ ಪ್ರಸ್ತುತ ರಾಜಕಾರಣದಲ್ಲಿ ದಾರಿದೀಪವಾಗಿದ್ದಾರೆ: ಎಚ್.ಡಿ.ಕುಮಾರಸ್ವಾಮಿ

ಸಾ.ರಾ.ಮಹೇಶ್ ಚುನಾವಣೆಯಲ್ಲಿ ಸೋತಿರಲಿ, ಗೆದ್ದಿರಲಿ ತಾಲೂಕಿನ ಜನತೆಯ ಕುಟುಂಬದ ಮಗನಾಗಿ ಎಲ್ಲರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾ ಪ್ರಸ್ತುತ ರಾಜಕಾರಣದಲ್ಲಿ ದಾರಿದೀಪವಾಗಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.ಮಾಜಿ ಸಚಿವ ಸಾ.ರಾ. ಮಹೇಶ್‌ ಅವರ 60ನೇ ಹುಟ್ಟುಹಬ್ಬ ಆಚರಣೆ ಸಂದರ್ಭದಲ್ಲಿ ದೆಹಲಿಯಿಂದ ಮೊಬೈಲ್‌ ಮೂಲಕ ಅವರು ಮಾತನಾಡಿದರು. ನಾನು ಖುದ್ದಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರುವುದಕ್ಕೆ ನೋವಿದೆ, ಆದರೆ ನಾನು ಎಲ್ಲೆ ಇದ್ದರೂ ಸದಾ ಸಾ.ರಾ. ಮಹೇಶ್‌ ಅವರೊಂದಿಗೆ ಹಾಗೂ ನಿಮ್ಮೊಂದಿಗೆ ಇರುತ್ತೇನೆ ಎಂದರು.

ಹತ್ತು ಹಲವಾರು ಉತ್ತಮ ಕಾರ್ಯಕ್ರಮಗಳೊಂದಿಗೆ ಜನತೆಯೊಂದಿಗಿರುವ ಸಾ.ರಾ.ಮಹೇಶ್ ಜನಸೇವೆ ಶ್ಲಾಘನೀಯವಾಗಿದ್ದು, ಮುಂದೆಯೂ ನಾಡಿಗೆ ಒಬ್ಬ ಉತ್ತಮ ಜನಪ್ರತಿನಿಧಿಯನ್ನು ನೀಡಬೇಕಾದ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಫಿನಾಡಿನಲ್ಲಿ 100 ಮೀಟರ್‌ ಉದ್ದದ ತ್ರಿವರ್ಣ ಧ್ವಜ ಯಾತ್ರೆ
ಗ್ರಾಮೀಣ ಪ್ರದೇಶದಲ್ಲಿ ವಲಸೆ ತಡೆಗೆ ವಿಬಿ ಜಿ ರಾಮ್ ಜಿ ಆಸರೆ