ಚರ್ಚೆಗಳು ಆಯುರ್ವೇದ ಪ್ರಗತಿಗೆ ಫಲಿತಾಂಶ ತರಲಿ

KannadaprabhaNewsNetwork |  
Published : Jun 27, 2026, 03:15 AM IST
(ಫೋಟೊ26ಬಿಕೆಟಿ6, 2 ದಿನಗಳ ಕಾಲ ಆಯೋಜಿಸಿರುವ ಅಂತರರಾಷ್ಟ್ರೀಯ ಸಮ್ಮೇಳನಕ್ಕೆ ಶುಕ್ರವಾರ ಚಾಲನೆ ನೀಡಿದ ಮಾಜಿ ಸಚಿವರು ಹಾಗೂ ರಾಜ್ಯ ಬಿಜೆಪಿಯ ಉಪಾಧ್ಯಕ್ಷರಾದ ಡಾ. ಮುರುಗೇಶ್ ನಿರಾಣಿ) | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ಜೊತೆಯಾಗಿಯೇ ಸಾಗಲಿ ಎಂಬ ಧ್ಯೇಯದೊಂದಿಗೆ ಶೈಕ್ಷಣಿಕ ಜ್ಞಾನವನ್ನು ವೃದ್ಧಿಸಲು ಮತ್ತು ಪುರಾವೆ ಆಧಾರಿತ ಆಯುರ್ವೇದ ಅಭ್ಯಾಸವನ್ನು ಉತ್ತೇಜಿಸಲು ಪ್ರತಿವರ್ಷ ಸಮ್ಮೇಳನಗಳನ್ನು ಆಯೋಜಿಸಲಾಗುತ್ತಿದೆ ಎಂದು ಮಾಜಿ ಸಚಿವರು ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಡಾ.ಮುರುಗೇಶ್ ನಿರಾಣಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ಜೊತೆಯಾಗಿಯೇ ಸಾಗಲಿ ಎಂಬ ಧ್ಯೇಯದೊಂದಿಗೆ ಶೈಕ್ಷಣಿಕ ಜ್ಞಾನವನ್ನು ವೃದ್ಧಿಸಲು ಮತ್ತು ಪುರಾವೆ ಆಧಾರಿತ ಆಯುರ್ವೇದ ಅಭ್ಯಾಸವನ್ನು ಉತ್ತೇಜಿಸಲು ಪ್ರತಿವರ್ಷ ಸಮ್ಮೇಳನಗಳನ್ನು ಆಯೋಜಿಸಲಾಗುತ್ತಿದೆ ಎಂದು ಮಾಜಿ ಸಚಿವರು ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಡಾ.ಮುರುಗೇಶ್ ನಿರಾಣಿ ಹೇಳಿದರು.ತೇಜಸ್ ಇಂಟರ್‌ ನ್ಯಾಷನಲ್‌ ಎಜುಕೇಷನಲ್ ಇನ್ಸ್‌ಟಿಟ್ಯೂಷನ್‌ನ ಎಂಆರ್‌ಎನ್ ಆಯುರ್ವೇದ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಿಂದ ನವದೆಹಲಿಯ ಎನ್‌ಸಿಐಎಸ್ಎಂ ಹಾಗೂ ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಶಾಸ್ತ್ರೀಯ ಮೂಲಗಳಿಂದ ಪ್ರಾಯೋಗಿಕ ಅನುಭವದವರೆಗೆ ಎಂಬ ವಿಷಯದ ಕುರಿತು 2 ದಿನ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ಕಳೆದ ಕೆಲವು ವರ್ಷಗಳಲ್ಲಿ ರಾಷ್ಟ್ರೀಯ ಮಟ್ಟದ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ಈ ವರ್ಷ ಜಾಗತಿಕ ತಜ್ಞರನ್ನು ಒಗ್ಗೂಡಿಸಿ ಅಂತಾರಾಷ್ಟ್ರೀಯ ಮಟ್ಟಕ್ಕೆ ನಮ್ಮ ವ್ಯಾಪ್ತಿಯನ್ನು ವಿಸ್ತರಿಸಿರುವುದು ಆಯುರ್ವೇದವನ್ನು ಜಾಗತಿಕ ಶೈಕ್ಷಣಿಕ ಭೂಪಟದಲ್ಲಿ ನೆಲೆಗೊಳಿಸುವ ನಮ್ಮ ದೃಢಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.ತಮ್ಮ ಜ್ಞಾನದಿಂದ ಸಮ್ಮೇಳನವನ್ನು ಶ್ರೀಮಂತಗೊಳಿಸಿದ ಜಗತ್ತಿನ ವಿವಿಧ ಸಂಪನ್ಮೂಲ ವ್ಯಕ್ತಿಗಳಿಗೆ ಹಾಗೂ ಸಕ್ರಿಯವಾಗಿ ಭಾಗವಹಿಸಿದ ವಿವಿಧ ಆಯುರ್ವೇದ ಕಾಲೇಜುಗಳ ಪ್ರಾಂಶುಪಾಲರು, ಬೋಧಕರು, ಪಿ.ಹೆಚ್.ಡಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು. ಮುಂದಿನ ಕೆಲವು ದಿನಗಳಲ್ಲಿ ನಡೆಯುವ ವೈಜ್ಞಾನಿಕ ಚರ್ಚೆಗಳು ಜಾಗತಿಕವಾಗಿ ಆಯುರ್ವೇದದ ಪ್ರಗತಿಗೆ ಅರ್ಥಪೂರ್ಣ ಫಲಿತಾಂಶಗಳನ್ನು ತಂದುಕೊಡಲಿ ಎಂದು ಆಶಿಸಿ, ಯೋಗಕ್ಷೇಮಕ್ಕೆ ಕೊಡುಗೆ ನೀಡಲು ನಮ್ಮ ಸಂಸ್ಥೆ ಸದಾ ಬದ್ಧವಾಗಿದೆ ಎಂದು ಭರವಸೆ ನೀಡಿದರು.ಆರ್‌ಜಿಯುಹೆಚ್‌ಎಸ್‌ನ ಸ್ನಾತಕೋತ್ತರ ಅಧ್ಯಯನಗಳ ಬಿಒಎಸ್ ಅಧ್ಯಕ್ಷ ಡಾ.ಸಿದ್ದನಗೌಡ ಪಾಟೀಲ್ ಹಾಗೂ ಗೌರವ ಅತಿಥಿಗಳಾಗಿ ಪುಣೆಯ ಆರೋಗ್ಯವರ್ಧನಿ ಚಿಕಿತ್ಸಾಲಯ ಮತ್ತು ಪಂಚಕರ್ಮ ಕೇಂದ್ರದ ವೈದ್ಯ ಡಾ.ಹರೀಶ್ ಪಟಂಕರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಿಸ್. ಮಾಧುರಿ ಮುಧೋಳ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರು ಹಾಗೂ ಸಂಘಟನಾ ಸಮಿತಿಯ ಅಧ್ಯಕ್ಷ ಡಾ.ಶಿವಕುಮಾರ್ ಗಂಗಲ್, ಮುಖ್ಯ ಸಂಘಟನಾ ಕಾರ್ಯದರ್ಶಿ ಡಾ.ಮಹಾಂತೇಶ್ ಹಿರೇಮಠ, ಸಂಘಟನಾ ಕಾರ್ಯದರ್ಶಿ ಡಾ.ಎ.ಹಬೀಬ್ ಬಾಲಿಕಾಯಿ ಮತ್ತು ಸಂಘಟನಾ ಸಮಿತಿಯ ಸದಸ್ಯರಾದ ಡಾ. ಸೌಮ್ಯ ಮಂಗಳೂರೆ ಹಾಗೂ ಸಂಘಟನಾ ಸಮಿತಿ, ಸಿಬ್ಬಂದಿ ವರ್ಗ ಮತ್ತು ಸ್ವಯಂಸೇವಕರು, ಸಂಸ್ಥೆಯ ಪ್ರಮುಖರು, ಸಂಘಟಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.-------ಕೋಟ್‌ನಮ್ಮ ಸಂಸ್ಥೆಯು ತುಲನಾತ್ಮಕವಾಗಿ ಚಿಕ್ಕದಾಗಿದ್ದರೂ, ಅಲ್ಪಾವಧಿಯಲ್ಲಿಯೇ ಶಿಕ್ಷಣ, ಸಂಶೋಧನೆ ಹಾಗೂ ಆರೋಗ್ಯ ಸೇವೆಯಲ್ಲಿ ಮಹತ್ತರವಾದ ದಾಪುಗಾಲು ಹಾಕಿದೆ. ಮುಂದಿನ ವರ್ಷಗಳಲ್ಲಿ ಎಂಆರ್‌ಎನ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ವಿಶ್ವದರ್ಜೆಯ ಮೂಲಸೌಕರ್ಯ, ಅತ್ಯಾಧುನಿಕ ಪ್ರಯೋಗಾಲಯಗಳು ಹಾಗೂ ಆಧುನಿಕ ಬೋಧನಾ ಸೌಲಭ್ಯಗಳನ್ನು ಒಳಗೊಂಡ ಭವ್ಯವಾದ ಹೊಸ ಕ್ಯಾಂಪಸ್‌ಗೆ ಸ್ಥಳಾಂತರಿಸಲಾಗುವುದು. ಇದು 200 ಹಾಸಿಗೆಗಳ ಸಂಪೂರ್ಣ ಸುಸಜ್ಜಿತ ಮಲ್ಟಿಸ್ಪೆಷಾಲಿಟಿ ಆಯುರ್ವೇದ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸಲಿದ್ದು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಂಆರ್‌ಎನ್ ಸಂಸ್ಥೆಯನ್ನು ಶ್ರೇಷ್ಠತೆಯ ಕೇಂದ್ರವಾಗಿ ಸ್ಥಾಪಿಸುವ ದೃಷ್ಟಿಕೋನವನ್ನು ಹೊಂದಿದೆ.ಮುರುಗೇಶ ನಿರಾಣಿ, ಮಾಜಿ ಸಚಿವರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉದ್ಯೋಗಪತಿಗಳಾಗಿ ಸಮಾಜಕ್ಕೆ ಕೊಡುಗೆ ನೀಡಿ
ಮಹಿಳಾ ವಿವಿಯಲ್ಲಿ ನೇಮಕಾತಿ ಮರು ಪರಿಶೀಲಿಸಲು ಮನವಿ