ಹಿಂದೂಗಳೆಲ್ಲರೂ ಒಂದು ಎಂಬಂತೆ ನಗರದ ಹೈಸ್ಕೂಲ್ ಮೈದಾನದಲ್ಲಿ ಪ್ರತಿಷ್ಠಾಪಿಸುವ ಹಿಂದೂ ಮಹಾಗಣಪತಿ ಉತ್ಸವ ಯಾವ ಅಡೆತಡೆ ಇಲ್ಲದೇ ಸಂಭ್ರಮದಿಂದ ನೆರವೇರಲಿ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಆಶಯ ವ್ಯಕ್ತಪಡಿಸಿದರು.
- ಹೈಸ್ಕೂಲ್ ಮೈದಾನದಲ್ಲಿ ಹಂದರ ಕಂಬ ಪೂಜೆ, ಪ್ರಮುಖ ಸಿದ್ಧತೆಗಳಿಗೆ ಚಾಲನೆ
ಮೂವರ ಶೂಟೌಟ್ ಖಂಡನೀಯ: ಎಸ್.ಎಸ್. ಮಲ್ಲಿಕಾರ್ಜುನ
- - -
ಕನ್ನಡಪ್ರಭ ವಾರ್ತೆ ದಾವಣಗೆರೆ
ಹಿಂದೂಗಳೆಲ್ಲರೂ ಒಂದು ಎಂಬಂತೆ ನಗರದ ಹೈಸ್ಕೂಲ್ ಮೈದಾನದಲ್ಲಿ ಪ್ರತಿಷ್ಠಾಪಿಸುವ ಹಿಂದೂ ಮಹಾಗಣಪತಿ ಉತ್ಸವ ಯಾವ ಅಡೆತಡೆ ಇಲ್ಲದೇ ಸಂಭ್ರಮದಿಂದ ನೆರವೇರಲಿ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಆಶಯ ವ್ಯಕ್ತಪಡಿಸಿದರು.
ಪ್ರತಿವರ್ಷ ಸಾರ್ವಜನಿಕ ಹಿಂದೂ ಮಹಾಗಣಪತಿ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗುವ ಗಣೇಶೋತ್ಸವದ ಹಂದರ ಕಂಬ ಪೂಜೆ ಮತ್ತು ಪ್ರಮುಖ ಸಿದ್ಧತೆಗಳಿಗೆ ಸೋಮವಾರ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು. ಎಲ್ಲ ಧರ್ಮದವರು ಸಂಭ್ರಮದಿಂದ ಗಣೇಶೋತ್ಸವ ಆಚರಿಸುವಂತಾಗಲಿ. ಯಾವುದೇ ವಿಘ್ನಗಳಿಲ್ಲದೇ ಸರಾಗವಾಗಿ ಜರುಗಲಿ. ಸಣ್ಣಪುಟ್ಟ ಸಮಸ್ಯೆಗಳಿದ್ದವು. ಎಲ್ಲವನ್ನೂ ಬಗೆಹರಿಸಲಾಗಿದೆ. ಹಿಂದೂ ಮಹಾಗಣಪತಿ ವಿಜೃಂಭಣೆಯು ಎಲ್ಲಾ ಸಮಾಜದವರು ಸೇರಿ ಮಾಡಬೇಕು. ಸರಾಗವಾಗಿ ಹಬ್ಬ ಆಚರಿಸುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.
ಡಿ.ಜೆ. ಸಂಗೀತ ಬಳಕೆಗೆ ಅನುಮತಿ ಬಗ್ಗೆ ಸ್ಪಷ್ಟವಾಗಿ ಹೇಳದ ಸಚಿವರು, ಇನ್ನೂ ಒಂದು ತಿಂಗಳು ಇದೆ. ನೋಡೋಣ. ಕಳೆದ ಬಾರಿ ರಾಜ್ಯ ಸರ್ಕಾರವೇ ಡಿಜೆ ಸಂಗೀತ ಬಳಸೋದನ್ನು ಬ್ಯಾನ್ ಮಾಡಿತ್ತು. ಈ ಬಾರಿಯೂ ಆದೇಶ ಇದೆ. ಸರ್ಕಾರದ ಮಟ್ಟದಲ್ಲಿ ಮಾತನಾಡೋಣ ಎಂದು ಹೇಳಿದರು.
ಈ ಸಂದರ್ಭ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿ ಸ್ವಾಮಿ, ದೂಡಾ ಅದ್ಯಕ್ಷ ದಿನೇಶ್ ಕೆ. ಶೆಟ್ಟಿ, ಟ್ರಸ್ಟಿನ ಜೊಳ್ಳಿ ಗುರು, ಜಯಪ್ರಕಾಶ್ ಮಾಗಿ, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಎ.ನಾಗರಾಜ್, ಮಲ್ಲಿಕಾರ್ಜುನ್, ಗಡಿಗುಡಾಳ್ ಮಂಜುನಾಥ್, ಚೇತನಾ ಶಿವಕುಮಾರ್ ಮತ್ತಿತರರು ಹಾಜರಿದ್ದರು.
- - -
* ಮೂವರ ಶೂಟೌಟ್ ಖಂಡನೀಯ: ಎಸ್.ಎಸ್. ಮಲ್ಲಿಕಾರ್ಜುನ
ದಾವಣಗೆರೆ: ಚಾಮರಾಜ ನಗರ ಜಿಲ್ಲೆಯಲ್ಲಿ ನಡೆದ ಮೂವರ ಶೂಟೌಟ್ ಖಂಡನೀಯವಾಗಿದ್ದು, ಯಾರು ಏನೇ ಮಾಡಿದ್ದರೂ ಸೂಕ್ತ ತನಿಖೆ ನಡೆಸಿ, ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದ್ದಾರೆ.ನಗರದ ಹೈಸ್ಕೂಲ್ ಮೈದಾನದಲ್ಲಿ ಸೋಮವಾರ 9ನೇ ವರ್ಷದ ಸಾರ್ವಜನಿಕ ಹಿಂದೂ ಮಹಾಗಣಪತಿ ಪ್ರತಿಷ್ಟಾಪನೆಯ ಮಂಟಪ ನಿರ್ಮೂಣದ ಹಂದರಗಂಬ ಪೂಜೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೂಟೌಟ್ ನಂತಹ ಘಟನೆ ನಡೆಯಬಾರದಿತ್ತು. ಆದರೆ, ನಡೆದು ಹೋಗಿದೆ ಎಂದರು.
ಮನುಷ್ಯರು ಹಾಗೂ ಪ್ರಾಣಿಗಳನ್ನು ಒಂದೇ ರೀತಿಯಲ್ಲಿ ನೋಡುವುದು ಸರಿಯಲ್ಲ. ಈ ಬಗ್ಗೆ ಅರಣ್ಯ ಸಚಿವರು ಈಗಾಗಲೇ ಪ್ರತಿಕ್ರಿಯೆ ನೀಡಿದ್ದಾರೆ. ಜಿಂಕೆ ಮಾಂಸ ಹಾಗೂ ರೈಫಲ್ ತೆಗೆದುಕೊಂಡು ಹೋಗುತ್ತಿದ್ದರೆಂಬ ಮಾಹಿತಿ ಸಿಕ್ಕಿದೆ. ತನಿಖೆ ನಂತರವಷ್ಟೇ ಇಡೀ ಪ್ರಕರಣದ ಸತ್ಯಾಸತ್ಯತೆ ಹೊರ ಬರಲಿದೆ ಎಂದು ತಿಳಿಸಿದರು.ಭದ್ರಾ ಡ್ಯಾಂನಿಂದ ಮಳೆಗಾಲದ ಬೆಳೆಗೆ ನೀರು ಬಿಡುವ ಬಗ್ಗೆ ಚರ್ಚಿಸಲು ಆ.18ರಂದು ನೀರಾವರಿ ಸಲಹಾ ಸಮಿತಿ ಸಭೆ ಕರೆಯಲಾಗಿದೆ. ಭದ್ರಾ ಡ್ಯಾಂ ಹಾಗೂ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ಜಿಲ್ಲೆಗಳ ಸಚಿವರು, ಎಲ್ಲಾ ರೈತ ಮುಖಂಡರು ಸಭೆಯಲ್ಲಿ ಭಾಗವಹಿಸುವರು. ಡ್ಯಾಂನ ನೀರಿನ ಲಭ್ಯತೆ ಆದರಿಸಿ, ಕೂಲಂಕುಷವಾಗಿ ಚರ್ಚಿಸಿ, ರೈತರಿಗೆ ಅನಾನುಕೂಲ ಆಗದ ರೀತಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮಾಜಿ ಸಚಿವ ಎಸ್.ಎ. ರವೀಂದ್ರನಾಥ, ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ ಜೊಳ್ಳಿ ಗುರು, ಪಾಲಿಕೆ ಮಾಜಿ ಮೇಯರ್ ಅನಿತಾಬಾಯಿ ಮಾಲತೇಶ, ಮಾಜಿ ಸದಸ್ಯರಾದ ಎ.ನಾಗರಾಜ, ಜಿ.ಎಸ್.ಮಂಜುನಾಥ ಗಡಿಗುಡಾಳ, ವೀಣಾ ನಂಜಪ್ಪ, ಕಾಂಗ್ರೆಸ್ ಮುಖಂಡರಾದ ಮುದೇಗೌಡ್ರು ಗಿರೀಶ, ಎಸ್.ಮಲ್ಲಿಕಾರ್ಜುನ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಚೇತನಾ ಶಿವಕುಮಾರ, ಸುಶೀಲಮ್ಮ, ಪೂಜಾ, ಜೆಡಿಎಸ್ ಮಹಿಳಾ ಜಿಲ್ಲಾಧ್ಯಕ್ಷೆ ಗಾಯತ್ರಿ ಹಾಲೇಶ ಇತರರು ಇದ್ದರು.- - -
(ಫೋಟೋ: ಎಸ್.ಎಸ್. ಮಲ್ಲಿಕಾರ್ಜುನ)- - -
-17ಕೆಡಿವಿಜಿ52, 53.ಜೆಪಿಜಿ:
ದಾವಣಗೆರೆಯಲ್ಲಿ ಸೋಮವಾರ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸಾರ್ವಜನಿಕ ಹಿಂದೂ ಮಹಾಗಣಪತಿ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗುವ ಗಣೇಶೋತ್ಸವದ ಹಂದರ ಕಂಬ ಪೂಜೆ ನೆರವೇರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.