ಬೃಹತ್‌ ಕೃಷಿ ಮೇಳ ಪ್ರತಿ ವರ್ಷ ನಿರಂತರವಾಗಿರಲಿ

KannadaprabhaNewsNetwork | Published : Mar 14, 2025 12:34 AM

ಸಾರಾಂಶ

ಎಂ.ಎಸ್.ಸ್ವಾಮಿನಾಥನ ವರದಿಯಲ್ಲಿ ಏನು? ಇದೆ ಎಂಬುದರ ಬಗ್ಗೆ ಕೇಂದ್ರ ಸರಕಾರ ರೈತರಿಗೆ ತಿಳಿಸಬೇಕು.

ಕನ್ನಡಪ್ರಭ ವಾರ್ತೆ ಐಗಳಿ

ಮಾಣಿಕಪ್ರಭು ದೇವರ ಜಾತ್ರೆ ನಿಮಿತ್ತ ನಡೆಯುವ ಜಾನುವಾರು ಜಾತ್ರೆಯು ಉತ್ತರ ಕರ್ನಾಟಕದ ಅತಿದೊಡ್ಡ ಜಾತ್ರೆಯಾಗಿದೆ. ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವುದರಿಂದ ವ್ಯಾಪಾರಸ್ಥರಿಗೆ ಮತ್ತಷ್ಟು ಅನುಕೂಲರವಾಗಿದೆ. ರೈತರ ಮಾರಾಟದ ಗುರಿಗಿಂತ ಹೆಚ್ಚಿನ ಹಣ ಕೊಟ್ಟು ಖರೀದಿಸಲಾಗುತ್ತಿದ್ದು ರೈತರ ಮುಖ ಅರಳಿದೆ ಎಂದು ಯುವ ನಾಯಕ ಚಿದಾನಂದ ಸವದಿ ಹೇಳಿದರು.

ಮಾಣಿಕಪ್ರಭು ದೇವರ ಜಾತ್ರೆ ನಿಮಿತ್ತ ಬೃಹತ್ ಕೃಷಿ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ವರ್ಷ ಕೃಷಿ ಮೇಳ ನಿರಂತರವಾಗಿರಲಿ. ರೈತರು ಹೊಸ ಕೃಷಿ ಪದ್ಧತಿ, ನೂತನ ತಂತ್ರಜ್ಞಾನ ಬಳಕೆಯಿಂದ ಮುಂದೆ ಬರಲು ಸಾಧ್ಯ ಎಂದರು.

ಮಾಜಿ ಶಾಸಕ ಶಹಜಹಾನ ಡೊಂಗರಗಾಂವ ಮಾತನಾಡಿ, ರೈತನು ಒಂದಲ್ಲ ಒಂದು ರೀತಿ ಸಂಕಟದಿಂದ ಬದುಕು ನಡೆಸುತ್ತಿದ್ದಾನೆ. ಇಂದಿನ ದಿನಗಳಲ್ಲಿ ಹೆಚ್ಚು ಶಿಕ್ಷಣ ಪಡೆದವರೆ ಕೃಷಿ ಮಾಡುಲು ಸಾಧ್ಯ. ಎಂ.ಎಸ್.ಸ್ವಾಮಿನಾಥನ ವರದಿಯಲ್ಲಿ ಏನು? ಇದೆ ಎಂಬುದರ ಬಗ್ಗೆ ಕೇಂದ್ರ ಸರಕಾರ ರೈತರಿಗೆ ತಿಳಿಸಬೇಕು. ಅಲ್ಲದೇ ಅದನ್ನು ಅನುಷ್ಠಾನಕ್ಕೆ ತಂದರೆ ಮಾತ್ರ ರೈತರು ಬದುಕು ಹಸನಾಗಲು ಸಾಧ್ಯ ಎಂದರು.

ಅಭಿನವ ರಾಚೋಟೇಶ್ವರ ದೇವರು ಸಾನ್ನಿಧ್ಯ ವಹಿಸಿದ್ದರು. ಕೃಷಿ ತಜ್ಞರು ದ್ರಾಕ್ಷಿ, ದಾಳಿಂಬೆ, ಕಬ್ಬುಬೆಳೆಗಳ ಸುಧಾರಿತ ಕ್ರಮ ವಿವರಿಸಿದರು. ಪಶು ಸಂಗೋಪನಾ ಇಲಾಖೆ ಹಾಗೂ ಜಾತ್ರಾ ಕಮಿಟಿ ಆಶ್ರಯದಲ್ಲಿ ಪಶು ಚಿಕಿತ್ಸಾಲಯ ಕೇಂದ್ರ ಉದ್ಘಾಟಿಸಲಾಯಿತು.

ಕಾರ್ಯದರ್ಶಿ ಮಲ್ಲುಗೌಡ ಪಾಟೀಲ ಮಾತನಾಡಿ, ತಾಲೂಕು ಸಹಾಯಕ ನಿರ್ದೇಶಕ ವೈದ್ಯಾಧಿಕಾರಿ ನೇತೃತ್ವದಲ್ಲಿ ಪಶು ವೈದ್ಯಾಧಿಕಾರಿ ಡಾ.ವಿಸ್ವನಾಥ ಗಂಗಾದರ ಹಾಗೂ ಸಿಬ್ಬಂದಿಯು ಜಾತ್ರೆಯಲ್ಲಿ ಸೇರಿರುವ ಸಾವಿರಾರು ಸಂಖ್ಯೆಯ ಜಾನುವಾರುಗಳಿಗೆ ಯಾವುದೇ ತರಹ ರೋಗ ಹರಡದಂತೆ ಮುಂಜಾಗ್ರತಾ ಕ್ರಮಕೈಗೊಂಡಿದ್ದು, ವೈದ್ಯರ ಕಾರ್ಯ ಶ್ಲಾಘನೀಯ ಎಂದರು.

ಡಾ.ವಿಶ್ವನಾಥ ಗಂಗಾಧರ ಮಾತನಾಡಿ, ಜಾತ್ರೆಯಲ್ಲಿ ಇಲಾಖೆ ಸಿಬ್ಬಂದಿ ಸಾಗರ ನಾಯಿಕ, ಮಂಜು ರೋಗಿ, ದಕ್ಬಿರ ನಿಡೋಣಿ, ಮಹಾದೇವ ಖೋತ, ಮತ್ತು ಸುರೇಶ ನಿಡೋಣಿ ಎಲ್ಲರೂ ಸೇರಿ ಉತ್ತಮ ಸೇವೆ ಮಾಡುತ್ತಿದ್ದಾರೆ. ಜಾತ್ರಾ ಕಮಿಟಿಯವರು ಸಹಕಾರ ನೀಡಿದ್ದಾರೆ. ಇಲ್ಲಿಯವರೆಗೆ ಯಾವುದೇ ತರಹದ ರೋಗ ಹರಡಿಲ್ಲ ಒಳ್ಳೆಯ ವಾತಾವರಣ ಇದೆ ಎಂದರು.

ಈ ವೇಳೆ ಸಿ.ಎಸ್.ನೇಮಗೌಡ, ಬಸವರಾಜ ಬಿರಾದಾರ, ಜಾತ್ರಾ ಕಮಿಟಿ ಅಧ್ಯಕ್ಷ ಪ್ರಲ್ಹಾದ ಪಾಟೀಲ, ಸಚೀನ್ ಬುಟಾಳೆ, ನೂರಅಹ್ಮದ ಡೊಂಗರಗಾಂವ, ಅಪ್ಪಾಸಾಬ ಪಾಟೀಲ, ವೆಂಕಣ್ಣಾ ಅಸ್ಕಿ, ಸುರೇಶ ಬಿರಾದಾರ, ಮಲ್ಲಪ್ಪ ಚಂಡಕಿ, ಹಣಮಂತ ಕರಿಗಾರ, ಕೆ.ಎಸ್.ಬಿರಾದಾರ, ಅನ್ನದಾತ ಲಕ್ಷ್ಮಣ ಬಟಗಿ ಸೇರಿ ಅನೇಕರು ಇದ್ದರು.

Share this article