ವಾಲ್ಮೀಕಿ ಆದರ್ಶಗಳು ದಾರಿದೀಪವಾಗಲಿ

KannadaprabhaNewsNetwork |  
Published : Nov 01, 2026, 02:45 AM IST
  31 ಜೆ.ಜಿ.ಎಲ್.1)‌ ಜಗಳೂರು ತಾಲ್ಲೂಕಿನ  ಚಿಕ್ಕಮಲ್ಲನಹೊಳೆ ಗ್ರಾಮದಲ್ಲಿ ವಾಲ್ಮೀಕಿ ನಾಮಫಲಕವನ್ನು ಕೆ.ಪಿ. ಪಾಲಯ್ಯ ಅನಾವರಣಗೊಳಿಸಿದರು. | Kannada Prabha

ಸಾರಾಂಶ

ಮಹರ್ಷಿ ವಾಲ್ಮೀಕಿ ಅವರ ಜೀವನದ ಪರಿವರ್ತನೆ, ತತ್ವಾದರ್ಶಗಳು ಹಾಗೂ ಸಮಾಜಕ್ಕೆ ನೀಡಿದ ಅಮೂಲ್ಯ ಕೊಡುಗೆಗಳು ಯುವಜನತೆಗೆ ಸದಾ ದಾರಿದೀಪವಾಗಬೇಕು. ಯುವಕರು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಮೌಲ್ಯಗಳೊಂದಿಗೆ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಪಿ.ಪಾಲಯ್ಯ ಹೇಳಿದ್ದಾರೆ.

- ಚಿಕ್ಕಮಲ್ಲನಹೊಳೆಯಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲಯ್ಯ ಆಶಯ

- - -

ಕನ್ನಡಪ್ರಭ ವಾರ್ತೆ ಜಗಳೂರು

ಮಹರ್ಷಿ ವಾಲ್ಮೀಕಿ ಅವರ ಜೀವನದ ಪರಿವರ್ತನೆ, ತತ್ವಾದರ್ಶಗಳು ಹಾಗೂ ಸಮಾಜಕ್ಕೆ ನೀಡಿದ ಅಮೂಲ್ಯ ಕೊಡುಗೆಗಳು ಯುವಜನತೆಗೆ ಸದಾ ದಾರಿದೀಪವಾಗಬೇಕು. ಯುವಕರು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಮೌಲ್ಯಗಳೊಂದಿಗೆ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಪಿ.ಪಾಲಯ್ಯ ಹೇಳಿದರು.

ತಾಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಹಾಗೂ ವಾಲ್ಮೀಕಿ ನಾಮಫಲಕ ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ಕಾಲದಲ್ಲಿ ಕಟುಕನಾಗಿದ್ದ ವಾಲ್ಮೀಕಿ ಮಹರ್ಷಿ ತಮ್ಮ ಜೀವನದಲ್ಲಿ ಮಹತ್ತರ ಪರಿವರ್ತನೆ ಮಾಡಿಕೊಂಡು ರಾಮಾಯಣದಂತಹ ಮಹಾಕಾವ್ಯ ರಚಿಸಿ, ಇತಿಹಾಸದಲ್ಲಿ ಅಜರಾಮರರಾಗಿದ್ದಾರೆ. ವ್ಯಕ್ತಿಯ ಹಿನ್ನೆಲೆಗಿಂತ ಆತನಲ್ಲಿ ಮೂಡುವ ಪರಿವರ್ತನೆ, ಸಾಧನೆ ಮತ್ತು ಸಮಾಜಕ್ಕೆ ನೀಡುವ ಕೊಡುಗೆಗಳು ಮುಖ್ಯವಾಗುತ್ತವೆ. ಆದ್ದರಿಂದ ಯುವಕರು ಕೆಟ್ಟ ಗುಣಗಳನ್ನು ತೊರೆದು ಉತ್ತಮ ನಡವಳಿಕೆ, ಶಿಸ್ತು ಮತ್ತು ಮೌಲ್ಯಗಳನ್ನು ರೂಢಿಸಿಕೊಂಡು ಜೀವನದಲ್ಲಿ ಉನ್ನತ ಸ್ಥಾನಕ್ಕೇರಬೇಕು ಎಂದರು.

ಚಿಕ್ಕಮಲ್ಲನಹೊಳೆ ಗ್ರಾಮದ ಇತಿಹಾಸದಲ್ಲಿ ಸಿದ್ದಬಸಪ್ಪ ನಾಯಕರ ಹೆಸರು ವಿಶೇಷವಾಗಿ ಗುರುತಿಸಿಕೊಂಡಿದೆ. ಗ್ರಾಮದಲ್ಲಿ ಸಾಮರಸ್ಯದ ಬದುಕಿಗೆ ಮಾದರಿಯಾಗಿದ್ದರು. ಅನೇಕರು ಬದುಕು ಕಟ್ಟಿಕೊಳ್ಳಲು ನೆರವಾಗಿದ್ದರು. ಅನ್ಯಾಯ ಸಹಿಸದ ಅವರ ವ್ಯಕ್ತಿತ್ವಕ್ಕೆ ಸಮಾಜದಲ್ಲಿ ವಿಶೇಷ ಗೌರವವಿತ್ತು. ಅವರು ನೀಡುತ್ತಿದ್ದ ತೀರ್ಮಾನಗಳಿಗೆ ಜನರು ಮನ್ನಣೆ ನೀಡುತ್ತಿದ್ದರು. ಕಸ್ತೂರಿ ಪಾಲಯ್ಯ, ಬುಳ್ಳಳ್ಳಿ ನಾಗೇಂದ್ರಪ್ಪ ಸೇರಿದಂತೆ ಅನೇಕ ಸಮಾಜದ ಮುಖಂಡರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇಂತಹ ಹಿರಿಯರ ಮಾರ್ಗದರ್ಶನ ಮತ್ತು ಆದರ್ಶಗಳನ್ನು ಮುಂದಿನ ಪೀಳಿಗೆ ಪಾಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸ್ಮರಿಸಿದರು.

ನಾಯಕ ಸಮಾಜದ ಯುವ ಮುಖಂಡ ಬಿಜೆಪಿಯ ಬಿಸ್ತುವಳ್ಳಿ ಬಾಬು ಮಾತನಾಡಿದರು. ಇದಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದೊಂದಿಗೆ ಅದ್ಧೂರಿ ಮೆರವಣಿಗೆ ನಡೆಯಿತು. ಬಳಿಕ ವಾಲ್ಮೀಕಿ ನಾಮಫಲಕ ಅನಾವರಣಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ವಕೀಲರ ಸಂಘದ ಅಧ್ಯಕ್ಷ ಬಸವರಾಜ್, ವಕೀಲ ತಿಪ್ಪೇಸ್ವಾಮಿ, ಮಾಜಿ ಗ್ರಾ.ಪಂ. ಅಧ್ಯಕ್ಷರಾದ ಶಿವರುದ್ರಮ್ಮ ಕಲ್ಲೇದೇವರಪುರ, ವಸಂತ ತಿಪ್ಪೇಸ್ವಾಮಿ, ಮಹಾತ್ಮಮಯ್ಯ, ನಾಗರಾಜಯ್ಯ, ರಘು, ದಿಬದಹಳ್ಳಿ ಗಂಗಾಧರಪ್ಪ, ಶರಣಪ್ಪ, ತಿಪ್ಪೇಸ್ವಾಮಿ, ಲಕ್ಷ್ಮಣ ನಾಯಕ, ಅಂಗಡಿ ಲಕ್ಷಣ್ಣ, ಕಾಂತಣ್ಣ, ಬಸವರಾಜಪ್ಪ, ವಿನಾಯಕ, ಶಿವಣ್ಣ, ಕೆ.ಬಿ. ತಿಪ್ಪೇಸ್ವಾಮಿ, ತಾಯಿಟೋಣಿ ಪಾಟೇಲ್, ಡ್ರೈವರ್ ತಿಪ್ಪೇಸ್ವಾಮಿ, ಆಶಾ ಕಾರ್ಯಕರ್ತೆ ಆಶಮ್ಮ, ತಿಪ್ಪಕ್ಕ, ಬಸಮ್ಮ, ರೇಖಾ, ಶಾರದಮ್ಮ ಸೇರಿದಂತೆ ನಾಯಕ ಸಮಾಜದ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

- - -

-31ಜೆ.ಜಿ.ಎಲ್.1: ಜಗಳೂರು ತಾಲೂಕಿನ ಚಿಕ್ಕಮಲ್ಲನಹೊಳೆಯಲ್ಲಿ ಕೆ.ಪಿ. ಪಾಲಯ್ಯ ವಾಲ್ಮೀಕಿ ನಾಮಫಲಕ ಅನಾವರಣಗೊಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಹೋಟೆಲ್‌ ಈಜು ಕೊಳದಲ್ಲಿ 2 ವಿದೇಶಿಗರ ಸಾವು
ಪ್ರಜ್ವಲ್‌ ಜೀವಾವಧಿಗೆ ಕಾರಣ ಆದ ಮೂವರಿಗೆ ಕೇಂದ್ರ ಗೃಹ ಪ್ರಶಸ್ತಿ