ಶತಮಾನೋತ್ಸವದೊಳಗೆ ಆಂತರಿಕ ನೋವುಗಳು ದೂರಾಗಲಿ; ರಂಭಾಪುರಿ ಶ್ರೀ

KannadaprabhaNewsNetwork |  
Published : Aug 17, 2025, 01:43 AM IST
೧೫ಬಿಹೆಚ್‌ಆರ್ ೧: ಬಾಳೆಹೊನ್ನೂರಿನ ರಂಭಾಪುರಿ ಪೀಠದ ರುದ್ರಮುನೀಶ್ವರ ವಸತಿ ಪ್ರೌಢಶಾಲೆಯಲ್ಲಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಗುರುಶಾಂತೇಶ್ವರ ಶಿವಾಚಾರ್ಯರು, ಜಗದೀಶ್ಚಂದ್ರ, ಮಹೇಶ್ ಆಚಾರ್ಯ, ವೀರೇಶ ಕುಲಕರ್ಣಿ ಇದ್ದರು. | Kannada Prabha

ಸಾರಾಂಶ

ಬಾಳೆಹೊನ್ನೂರು, ಭಾರತ ಪ್ರಸ್ತುತ ಹಲವಾರು ಆಂತರಿಕ ನೋವುಗಳನ್ನು ಅನುಭವಿಸುತ್ತಿದ್ದು, ಸ್ವಾತಂತ್ರ್ಯದ ಶತಮಾನೋತ್ಸವ ಬರುವುದರೊಳಗೆ ಆಂತರಿಕ ನೋವುಗಳು ದೂರಾಗಬೇಕು ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ನುಡಿದರು.

ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ರಂಭಾಪುರಿ ಜಗದ್ಗುರುಗಳ ಅಭಿಮತಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಭಾರತ ಪ್ರಸ್ತುತ ಹಲವಾರು ಆಂತರಿಕ ನೋವುಗಳನ್ನು ಅನುಭವಿಸುತ್ತಿದ್ದು, ಸ್ವಾತಂತ್ರ್ಯದ ಶತಮಾನೋತ್ಸವ ಬರುವುದರೊಳಗೆ ಆಂತರಿಕ ನೋವುಗಳು ದೂರಾಗಬೇಕು ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ನುಡಿದರು. ರಂಭಾಪುರಿ ಪೀಠದ ಜಗದ್ಗುರು ರುದ್ರಮುನೀಶ್ವರ ವಸತಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಶುಕ್ರವಾರ ರಾಷ್ಟ್ರಧ್ವಜಾರೋಹಣ ಮಾಡಿ ಆಶೀರ್ವಚನ ನೀಡಿದರು. ಆಂತರಿಕ ನೋವುಗಳಿಂದ ಮುಕ್ತವಾಗಿ ಸಶಕ್ತ, ಸದೃಢ ದೇಶ ಕಟ್ಟುವಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಬೇಕಿದೆ. ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಲಕ್ಷಾಂತರ ಜನ ಬಲಿದಾನದ ಘಟನೆಗಳನ್ನು ಯಾರೂ ಮರೆಯಲಾಗದು. ಹುತಾತ್ಮರಾದವರ ತ್ಯಾಗ, ಬಲಿದಾನ, ಪರಿಶ್ರಮದಿಂದ ಸಿಕ್ಕ ಸ್ವಾತಂತ್ರ್ಯವನ್ನು ಜನತೆ ಅರಿತು ಸನ್ಮಾರ್ಗದಲ್ಲಿ ನಡೆದರೆ ಸ್ವಾತಂತ್ರ್ಯಕ್ಕೆ ನಿಜವಾದ ಬೆಲೆ ದೊರೆಯಲು ಸಾಧ್ಯವಿದೆ.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಭಬಾಯಿ ಪಟೇಲ್, ಸುಭಾಶ್ಚಂದ್ರ ಭೋಸ್, ಜವಾಹರ ಲಾಲ್ ನೆಹರು, ಬಿಪಿಲ್ ಚಂದ್ರಪಾಲ್, ಬಾಲಗಂಗಾಧರನಾಥ ತಿಲಕ್, ಸರೋಜಿನಿದೇವಿ ನಾಯ್ಡ್ ಸೇರಿದಂತೆ ಅನೇಕ ಮುತ್ಸದ್ಧಿಗಳು ಮುತುವರ್ಜಿ ವಹಿಸಿ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಸ್ವಾತಂತ್ರ್ಯದ ನಂತರದ ದಿನಗಳಲ್ಲಿ ಭಾರತಕ್ಕೆ ಸುಭದ್ರ ಸಂವಿಧಾನ ರಚಿಸಿದ ಡಾ. ಬಾಬಾಸಾಹೇಬ್ ಅಂಬೇಡ್ಕರ್‌ ಅವರ ವಿಚಾರಧಾರೆ ಕೂಡ ಸಮಾಜಕ್ಕೆ ದಿಕ್ಸೂಚಿ. ಭವಿಷ್ಯ ಈ ನಾಡಿನ ಸಮಸ್ತ ಅಭ್ಯುದಯ, ಏಳಿಗೆ ಆಗಿರುವುದನ್ನು ನಾವೆಲ್ಲ ಗಮನಿಸಬಹುದು ಎಂದರು.

ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕವಾಗಿ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ದೇಶ ಅಭಿವೃದ್ಧಿಪಥದಲ್ಲಿ ನಡೆಯುತ್ತಿದೆ.ಬೆಳೆಯುವ ಯುವಜನಾಂಗದಲ್ಲಿ ಮತ್ತು ಮಕ್ಕಳಲ್ಲಿ ದೇಶಾಭಿಮಾನ ಬೆಳೆಸುವ ಅವಶ್ಯಕತೆ ಬಹಳಷ್ಟಿದೆ. ದೇಶ ನನ್ನದು ಎನ್ನುವ ಸ್ವಾಭಿಮಾನ ಎಲ್ಲರಲ್ಲಿಯೂ ಬೆಳೆದು ಬಂದಾಗ ಅಭಿವೃದ್ಧಿ ತನ್ನಿಂದ ತಾನೇ ಆಗಲು ಸಾಧ್ಯ. ಭಾರತ ದೇಶದಲ್ಲಿ ಹಲವಾರು ಜಾತಿ, ಮತಗಳಿದ್ದರೂ ನಾವೆಲ್ಲರೂ ಭಾರತ ಮಾತೆ ಮಕ್ಕಳು ಎಂಬ ಉದಾತ್ತ ಭಾವನೆಯಿಂದ ನಡೆದಾಗ ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ಸಾಮರಸ್ಯ ಕಾಣಲು ಸಾಧ್ಯ ಎಂದರು.ಸಮಾಜದಲ್ಲಿ ಸೌಹಾರ್ಧ ವಾತಾವರಣ ಉಂಟು ಮಾಡುವಂತಹ ಮಹತ್ಕಾರ್ಯ ನಡೆಯಬೇಕಿದೆ. ಈ ವ್ಯವಸ್ಥೆಯಲ್ಲಿ ಎಲ್ಲರೂ ಜ್ಯಾತ್ಯಾತೀತ, ಪಕ್ಷಾತೀತ ದೇಶ ಕಟ್ಟುವಂತಹ ಕೆಲಸ ಮಾಡಬೇಕಿದೆ. ಸ್ವಾತಂತ್ರ್ಯದ ನಂತರ ರಾಷ್ಟ್ರ ಪ್ರಗತಿ, ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿರುವುದು ಶುಭೋದಯದ ಸಂಕೇತ. ದೇಶದ ಸುಭದ್ರತೆ, ಭದ್ರತೆ ಹಿತದೃಷ್ಟಿಯಿಂದ ರಾಷ್ಟ್ರದ ಎಲ್ಲಾ ಜನತೆ ಒಂದಾಗಿ ಒಗ್ಗಟ್ಟಾಗಿ ಶ್ರಮಿಸಬೇಕಾಗಿರುವುದು ಎಲ್ಲರ ಕರ್ತವ್ಯ. ವೈಯುಕ್ತಿಕ ಹಿತಾಸಕ್ತಿಗೆ ದೇಶದ ಸುಭದ್ರತೆಗೆ ಧಕ್ಕೆಯಾಗಬಾರದು. ದೇಶದ ಬಗ್ಗೆ ಸ್ವಾಭಿಮಾನ ಇರಬೇಕು ಎಂದರು.

ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿ, ಬಿ.ಕಣಬೂರು ಗ್ರಾಪಂ ಸದಸ್ಯ ಬಿ.ಜಗದೀಶ್ಚಂದ್ರ, ಎಂ.ಜೆ.ಮಹೇಶ್ ಆಚಾರ್ಯ, ವಸತಿ ಪ್ರೌಢಶಾಲೆ ಪ್ರಭಾರಿ ಮುಖ್ಯಶಿಕ್ಷಕ ವೀರೇಶ ಕುಲಕರ್ಣಿ, ಶಿಕ್ಷಕ ಎನ್.ಎಂ.ಕಟ್ಟೇಗೌಡ ಮತ್ತಿತರರು ಹಾಜರಿದ್ದರು.೧೫ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ರಂಭಾಪುರಿ ಪೀಠದ ರುದ್ರಮುನೀಶ್ವರ ವಸತಿ ಪ್ರೌಢಶಾಲೆಯಲ್ಲಿ ಡಾ.ವೀರಸೋಮೇಶ್ವರ ಜಗದ್ಗುರು ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಗುರುಶಾಂತೇಶ್ವರ ಶಿವಾಚಾರ್ಯರು, ಜಗದೀಶ್ಚಂದ್ರ, ಮಹೇಶ್ ಆಚಾರ್ಯ, ವೀರೇಶ ಕುಲಕರ್ಣಿ ಇದ್ದರು.

PREV

Recommended Stories

79 ವರ್ಷಗಳ ನಂತ್ರ ಅಥಣಿಗೆ ಸರ್ಕಾರಿ ಪ್ರೌಢಶಾಲೆ!
ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ ಅನಿವಾರ್ಯ