ಮಾಸಿಕ ಶಿವಾನುಭವ, ಏಕೀಕರಣ ಯೋಧರ ಯಶೋಗಾಥೆ
ನಿವೃತ್ತ ಮುಖ್ಯೋಪಾಧ್ಯಾಯ ವೀರಯ್ಯ ಸಾಲಿಮಠ ಮಾತನಾಡಿ, ಶಾಸನಗಳ ಪಿತಾಮಹ ಬಿ .ಎಲ್. ರೈಸ್ ವರ ಕುರಿತು ಉಪನ್ಯಾಸದ ಮೂಲಕ ಹಳೆಗನ್ನಡದಲ್ಲಿದ್ದ ಶಾಸನಗಳನ್ನು ವಿದ್ವಾಂಸರ ಸಹಾಯದಿಂದ ಅಧ್ಯಯನ ಮಾಡಿ ಕನ್ನಡ ಶಾಸನಗಳನ್ನು ರಕ್ಷಿಸಿದ ಕೀರ್ತಿ ರೈಸ್ ಅವರಿಗೆ ಸಲ್ಲುತ್ತದೆ. ಅವರು ಕನ್ನಡಕ್ಕೆ ನೀಡಿದ ಕೊಡುಗೆ ಅಪಾರವಾದುದು ಎಂದರು.
ಕನ್ನಡಕ್ಕೆ ದುಡಿದ ವಿದೇಶಿಯರಲ್ಲಿ ಅಗ್ರಗಣ್ಯರಾದ ರೈಸ್ ಅವರು ಕನ್ನಡದಲ್ಲಿಯೇ ಮಾತನಾಡಿ, ಕನ್ನಡ ಪ್ರೇಮವನ್ನು ಮರೆದಿದ್ದರು. ಇವರ ಶಾಸನಗಳ ಅಧ್ಯಯನದ ಆಧಾರದ ಮೇಲೆ ಬ್ರಿಟಿಷ್ ಸರ್ಕಾರ ಹಂಟರ್ ಶಿಕ್ಷಣ ಆಯೋಗವನ್ನು ರಚಿಸಿ ಭಾರತದಲ್ಲಿ ಶಿಕ್ಷಣ ವ್ಯವಸ್ಥೆಗೆ ಹೊಸ ಮೈಲುಗಲ್ಲನ್ನು ಸ್ಥಾಪಿಸಿದರು. ಶಾಸನಗಳ ಸಂಶೋಧನೆಯನ್ನು ಮೂಲಧಾರವಾಗಿಸಿಕೊಂಡು ಕನ್ನಡದ ನೈಜ ಇತಿಹಾಸವನ್ನು ತಿಳಿಸಿದ ರೈಸ್‌ರು ಈ ನಾಡನವರು ಎಂದೂ ಮರೆಯದ ಚೇತನ ಎಂದು ಹೇಳಿದರು.ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ನಡೆಸುವ ಸಹಪಠ್ಯ ಚಟುವಟಿಕೆ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಪ್ರಾಥಮಿಕ ವಿಭಾಗದಲ್ಲಿ ರಡ್ಡೇರ ನಾಗನೂರಿನ ಸುರೇಶ ಬನ್ನಿಗಿಡದ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಕಣಕಿಕೊಪ್ಪ ಸರಕಾರಿ ಪ್ರೌಢಶಾಲೆಯ ಎಸ್ .ಎಲ್. ಮರಿಗೌಡ್ರ ಅವರನ್ನು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಅದ್ಯಕ್ಷ ನಬಿಸಾಬ್ ಕಿಲ್ಲೇದಾರ ಹಾಗೂ ಮಹಿಳಾ ಘಟಕದ ಉಪಾಧ್ಯಕ್ಷ ಕಾವ್ಯಾ ಹುಂಬಿ ಅವರನ್ನು ಶ್ರೀಮಠದಿಂದ ಸತ್ಕರಿಸಲಾಯಿತು.
ಬಾಬು ಯಲಿಗಾರ, ಇಸ್ಮಾಯಿಲ್ ಹಜರತ್‌ನವರ, ವಿರೂಪಾಕ್ಷಪ್ಪ ಮನೇನಕೊಪ್ಪ, ಪರಮ್ಮ ಐನಾಪೂರ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಮಹಾಂತೇಶ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.