ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಕನ್ನಡ ಸಂಸ್ಕೃತಿ ಇಲಾಖೆಯ ನೆರವಿನೊಂದಿಗೆ ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ಆಯೋಜಿಸಿದ್ದ ಯುವ ಶಿಲ್ಪಿ ಕುರುವಳ್ಳಿ ಜಗದೀಶ್ ಅವರ ಏಕವ್ಯಕ್ತಿ ಶಿಲ್ಪಕಲಾ ಪ್ರದರ್ಶನವನ್ನು ಉದ್ಘಾಟಿಸಿ, ಈ ಮಣ್ಣಿನಲ್ಲಿ ಹುಟ್ಟಿ ಶಿಲ್ಪ ಕಲೆಯಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಹಿರಿಯರಂತೆ ಇದೀಗ ಪ್ರವರ್ಧಮಾನಕ್ಕೆ ಬರುತ್ತಿರುವ ಕ್ರಿಯಾಶೀಲ ಚಿಂತನೆಯ ಯುವ ಶಿಲ್ಪಿ ಕುರುವಳ್ಳಿ ಜಗದೀಶ್ ಭವಿಷ್ಯ ಕೂಡ ಉಜ್ವಲವಾಗಿದೆ. ಜಗದೀಶ್ ಅವರ ಕಲೆಯನ್ನು ಮೆಚ್ಚಿ ಆಕರ್ಷಕವಾದ ಒಂದು ಕಲಾಕೃತಿಯನ್ನು ಕೊಳ್ಳುವ ಮೂಲಕ ಕಲಾವಿದ ಜಗದೀಶರನ್ನು ಶಾಲು ಹೊದಿಸಿ ಗೌರವಿಸಿದರು.
ಶಿಲ್ಪಕಲೆಯಲ್ಲಿ ನಮ್ಮ ರಾಜ್ಯದವರೇ ಆಗಿರುವ ಅಯೋಧ್ಯೆಯಲ್ಲಿ ಸ್ಥಾಪಿಸಲಾಗಿರುವ ಶ್ರೀರಾಮನ ಮೂರ್ತಿಯನ್ನು ಕಡೆದಿರುವ ಮೈಸೂರಿನ ಅರುಣ್ ಯೋಗರಾಜ್ ಸಾಧನೆ ಜಗತ್ತಿನ ಗಮನ ಸೆಳೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ಸಾಹಿತ್ಯ ಸಾಮಾಜಿಕ ರಾಜಕೀಯ ಕ್ಷೇತ್ರಗಳ ಗಣ್ಯರು ಜನಿಸಿದ ಈ ನೆಲದಲ್ಲಿ ಶಿಲ್ಪ ಕಲಾವಿದರಾಗಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅವರುಗಳಲ್ಲಿ ಬಾಣಂಕಿ ಜಗದೀಶ್, ಎಚ್.ಎನ್. ಕೃಷ್ಣಮೂರ್ತಿ, ಚಿ.ಸು. ಕೃಷ್ಣಶೆಟ್ಟಿ ಹಾಗೂ ಮುಂತಾದರವರ ಹಾದಿಯಲ್ಲೇ ಸಾಗುತ್ತಿರುವ ಕುರುವಳ್ಳಿ ಜಗದೀಶ್ ಪರಿಕಲ್ಪನೆಯಲ್ಲಿ ಮೂಡಿ ಬಂದಿರುವ ಕಲಾಕೃತಿಗಳು ಆಕರ್ಷಕವಾಗಿದ್ದು ನೋಡುಗರಲ್ಲಿ ಮಾನವೀಯ ಚಿಂತನೆಯ ಕಾಳಜಿಯನ್ನು ಮೂಡಿಸುತ್ತವೆ ಎಂದರು.ಪಪಂ ಸದಸ್ಯೆ ಜ್ಯೋತಿ ಮೋಹನ್, ಸಾಹಿತಿ ಶಿವಾನಂದ ಕರ್ಕಿ ಹಾಗೂ ಚಿತ್ರಕಲಾವಿದ ಮಂಜಣ್ಣ ನಾಯ್ಕ್ ಸಮಯೋಚಿತವಾಗಿ ಮಾತನಾಡಿದರು. ಪತ್ರಕರ್ತರ ಸಂಘದ ಅಧ್ಯಕ್ಷ ಮುನ್ನೂರು ಮೋಹನ್, ಕಲಾವಿದ ನಿಶ್ಚಲ್ ಜಾದೂಗಾರ್ ಮತ್ತು ಕಲಾವಿದ ಜಗದೀಶ್ ಕುಟುಂಬದವರು ಇದ್ದರು.
ಫೋಟೋ 16 ಟಿಟಿಎಚ್ 01: ತೀರ್ಥಹಳ್ಳಿಯಲ್ಲಿ ಆಯೋಜಿಸಿದ್ದ ಯುವ ಶಿಲ್ಪಿ ಕುರುವಳ್ಳಿ ಜಗದೀಶ್ ಅವರ ಏಕವ್ಯಕ್ತಿ ಶಿಲ್ಪಕಲಾ ಪ್ರದರ್ಶನದಲ್ಲಿ ಕಲಾಕೃತಿಯನ್ನು ಖರೀದಿಸುವ ಮೂಲಕ ಶಾಸಕ ಆರಗ ಜ್ಞಾನೇಂದ್ರ ಉದ್ಘಾಟಿಸಿದರು. ಕಲಾವಿದ ಜಗದೀಶ್, ಚಿತ್ರಕಲಾವಿದ ಮಂಜಣ್ಣ ನಾಯ್ಕ್, ಪಪಂ ಸದಸ್ಯೆ ಜ್ಯೋತಿ ಮೋಹನ್ ಇದ್ದರು.