ಕನ್ನಡಪ್ರಭವಾರ್ತೆ ವಿರಾಜಪೇಟೆಹಲವು ಸಂಸ್ಕೃತಿ, ವಿಭಿನ್ನತೆಯ ಆಚರಣೆ, ಹಲವಾರು ಹಬ್ಬಗಳ ಆಚರಣೆಯಿಂದಾಗಿ ದೇಶ ಸುಸಂಸ್ಕೃತವಾಗಿದೆ. ಹಿನ್ನೆಲೆಯಲ್ಲಿ ವಿಜಯದಶಮಿ ಯ ಪ್ರಯುಕ್ತ ಆಯುಧ ಪೂಜಾ ಕಾರ್ಯಕ್ರಮ ಅರ್ಥಪೂರ್ಣ ಎಂದು ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಮತ್ತು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.ಕೊಡಗು ಖಾಸಗಿ ಬಸ್ಸ್ ಕಾರ್ಮಿಕರ ಸಂಘ ವಿರಾಜಪೇಟೆ ವತಿಯಿಂದ 18 ನೇ ವರ್ಷದ ಆಯುಧ ಪೂಜಾ ಕಾರ್ಯಕ್ರಮ ಖಾಸಗಿ ಬಸ್ಸು ನಿಲ್ದಾಣ ದ ವೇದಿಕೆಯಲ್ಲಿ ನಡೆಯಿತು.ಸರ್ಕಾರ ಬದ್ಧವಾಗಿದೆ:
ಆಯುಧ ಪೂಜೆಯ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡಿ ಮಾತನಾಡಿದ ಶಾಸಕರು, ಕಾರ್ಮಿಕರು ಸಾರ್ವಜನಿಕ ವಲಯದ ಬೆನ್ನೆಲುಬು, ವಿಜಯದಶಮಿ ದುಷ್ಟ ಶಕ್ತಿಗಳನ್ನು ಸಂಹರಿಸಿ, ಶಿಷ್ಟ ರಕ್ಷಣೆ ಮಾಡಿರುವ ಐತಿಹ್ಯ ಹೊಂದಿದೆ. ಆಯುಧ ಪೂಜೆಯ ಅಂಗವಾಗಿ ವಿವಿಧ ಧರ್ಮದ ಗುರುಗಳನ್ನು ಆಹ್ವಾನಿಸಿ ಆಶೀರ್ವಚನ ಮಾಡುವುದು ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ ಎನ್ನುವ ಸಾರವಾಗಿರುವುದನ್ಬು ಸಮಿತಿ ಯು ಸಾಧರ ಪಡಿಸಿದೆ. ನಮ್ಮಲ್ಲಿ ಜಾತಿ, ಧರ್ಮ, ಬೇರೆ ಬೇರೆ ಎನ್ನುವ ಬೇದ ಭಾವವಿಲ್ಲದೆ ಒಂದೇ ಎನ್ನುವ ಸುಸಂಸ್ಕೃತಿ ಕಂಡಿದೆ. ಬಸ್ಸು ಕಾರ್ಮಿಕರ ಬದುಕು ಸಂಕಷ್ಟದ ಸ್ಥಿತಿಯನ್ನು ತಲುಪಿದೆ. ಆದರೂ ಸಮಾಜ ಮತ್ತು ಸಾರ್ವಜನಿಕ ವಲಯಕ್ಕೆ ಸೇವೆ ಒದಗಿಸುವ ನಿಟ್ಟಿನಲ್ಲಿ ತಮ್ಮ ಸೇವೆಯನ್ನು ಒದಗಿಸುತ್ತಿದೆ. ಕಾರ್ಮಿಕ ವಲಯದ ಏಳಿಗೆಗೆ ಸರ್ಕಾರ ಬದ್ಧವಾಗಿದೆ. ಎಲ್ಲಾ ಕಾರ್ಯಕ್ರಮಗಳು ಸಮಾಜ ಪೂರಕವಾಗಿದ್ದು. ಕಾರ್ಮಿಕರ ಬದುಕು ಹಸನಾಗಲಿ ಎಂದು ಶುಭಹಾರೈಸಿದರು.ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿ ಶ್ರೀ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು,ಶಾಫಿ ಜುಮ್ಮಾ ಮಸೀದಿ ಖತೀಬರಾದ ಬಹು ಹ್ಯಾರಿಸ್ ಬಾಖವಿ, ಸಂತ ಅನ್ನಮ್ಮ ಕಾಲೇಜು ವಿರಾಜಪೇಟೆ ಪ್ರಾಂಶುಪಾಲರಾದ ರೆ. ಫಾ. ಮುಧಲೈ ಮುತ್ತು. ಕಾರ್ಯಕ್ರಮದ ಪ್ರಯುಕ್ತ ಆಶೀರ್ವಚನ ನೀಡಿದರು.ಕೊಡಗು ಖಾಸಗಿ ಬಸ್ಸು ಕಾರ್ಮಿಕರ ಸಂಘ ವಿರಾಜಪೇಟೆ ಗೌ. ಅದ್ಯಕ್ಷರಾದ ಅಲ್ಲಂಡ ಚೆಂಗಪ್ಪ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಾಮೂಹಿಕ ಆಯುಧ ಪೂಜೆ:ಕಾರ್ಯಕ್ರಮದ ಮೊದಲಿಗೆ ಖಾಸಗಿ ಬಸ್ಸುಗಳಿಗೆ ಸಾಮೂಹಿಕ ಆಯುಧ ಪೂಜೆ ನಡೆಯಿತು. ಸ್ಥಳಿಯ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ, ನಡೆದು ಮೈ ರೋಮಾಂಚನಗೊಳಿಸುವ ಕೊಡಗು ಜಿಲ್ಲೆಯ ನುರಿತ ಬೈಕ್ ಸವಾರರಿಂದ ಬೈಕ್ ಶೋ. ಸಾಹಸ ಪ್ರದರ್ಶನ ನಡೆಯಿತು. ಸಂಜೆ ಎಳು ಗಂಟೆಗೆ ನಡೆದ ಸಮಾರೋಪ ಸಮಾರಂಭಕ್ಕೆಆಗಮಿಸಿ ಮಾತನಾಡಿದೆ ಭಾ.ಜ.ಪ ಸಾಮಾಜಿಕ ಜಾಲತಾಣದ ಪ್ರಧಾನ ಸಂಚಾಲಕರಾದ ತೇಲಪಂಡ ಶಿವಕುಮಾರ್ ಅವರು ದೇಶದ ಎಲ್ಲಡೆ ನವರಾತ್ರಿ ಯಲ್ಲಿ ನವ ದೇವಿಯರ ಆಚರಣೆ . ಸನಾತನ ಹಿಂದೂಗಳಿಗೆ ಪ್ರಮುಖ ಹಬ್ಬಗಳಲ್ಲಿ ಇದು ಒಂದು. ದೇಶಕ್ಕೆ ಬಂದ ವಿಪತ್ತು, ದುಷ್ಟ ಶಕ್ತಿ ಗಳ ಪ್ರಭಾವದಿಂದ ತತ್ತರಿಸುವ ಸ್ಥಳಗಳನ್ನು ದೇವಿಯು ಸಂರಕ್ಷಣೆ ಮಾಡಲಿ. ಖಾಸಗಿ ಬಸ್ಸುಗಳು ಪ್ರಸ್ತುತವಾಗಿ ಸಂಕಷ್ಟದಲ್ಲಿದೆ. ಇದನ್ನು ನಂಬಿಕೊಂಡು ಜೀವನ ಸಾಗಿಸುವ ಕಾರ್ಮಿಕರ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಸರ್ಕಾರವು ಕಾರ್ಮಿಕರ ಸಮಸ್ಯೆ ಅರಿತು. ಪರಿಹಾರಕ್ಕೆ ಮುಂದಾಗಬೇಕು ಆಗ್ರಹಿಸಿದರು. ಅರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ವಾಗಿ ಆರ್ಥಿಕ ಸ್ಥಿತಿವಂತ ಸಮಾಜ ಕಾರ್ಮಿಕರಿಗೆ ಸಹಾಯ ಮಾಡುವಂತಾಗಬೇಕು ಎಂದು ಹೇಳಿದರು.
ಕಾರ್ಯಕ್ರಮ ವೇದಿಕೆಯಲ್ಲಿ ಖಾಸಗಿ ಬಸ್ಸು ಹಿರಿಯ ಕಾರ್ಮಿಕರಾದ ಇಬ್ರಾಹಿಂ, ಹಾಕಿ ವೀಕ್ಷಕ ವಿವರಣೆಕಾರ ಮಾಳೇಟಿರ ಶ್ರೀನಿವಾಸ್, ವಿರಾಜಪೇಟೆ ಪುರಸಭೆಯ ಪೌರಕಾರ್ಮಿಕರಾದ ಹೆಚ್. ಸುಂಧರ್, ಎಸ್.ಎಸ್.ಎಲ್. ಸಿ.ಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿ ಕುಮಾರಿ ಕೆ.ಜೆ. ಆಶಾ, ಅಲೀರ ಮೊಹಮ್ಮದ್ ಸಮದ್ ಮತ್ತು ಉದಯೋನ್ಮುಖ ಹಾಕಿ ಆಟಗಾರ ಸುಹಾಸ್ ಅವರುಗಳನ್ನು ಸಂಘ ವತಿಯಿಂದ ಅತಿಥಿಗಳ ಸಮ್ಮುಖದಲ್ಲಿ ಕಿರು ಕಾಣಿಕೆ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು.ಕಾರ್ಯಕ್ರಮ ಉದ್ದೇಶಿಸಿ ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾ ಮಂಡಳ ವಿರಾಜಪೇಟೆ ಅದ್ಯಕ್ಷರಾದ ವಾಟೇರಿರ ಬೋಪಣ್ಣ, ಹೆಚ್.ಅರ್.ಐ.ಟಿ.ಡೂಯಿಸಿ ಬ್ಯಾಂಕ್ ಬೆಂಗಳೂರು ಉಪ ಅದ್ಯಕ್ಷ ಆಲ್ವೀನ್ ಡಿಸೋಜ, ಕಾಫಿ ಬೆಳೆಗಾರರಾದ ಕುಂಡ್ರಂಡ ಅನಿಲ್ ಮಾತನಾಡಿದರು.ಕೊಡಗು ಖಾಸಗಿ ಬಸ್ಸು ಕಾರ್ಮಿಕರ ಸಂಘ ದ ಅಧ್ಯಕ್ಷರಾದ ಕುಂಭೇಯಂಡ ಸುರೇಶ್ ದೇವಯ್ಯ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ದೇಯಂಡ ಲೊಕೇಶ್ ಅಯ್ಯಪ್ಪ, ವಾಟೇನ ಜೀವನ್, ಗುತ್ತಿಗೆದಾರರಾದ ಕೋಡಿರ ವಿವೇಕ್ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಸಂಘದ ಖಜಾಂಜಿಯಾದ ದಿನೇಶ್ ನಾಯರ್ ನೇರವೇರಿಸಿಕೊಟ್ಟರು.ಸಭಾ ಕಾರ್ಯಕ್ರಮದ ಬಳಿಕ ಖ್ಯಾತ ಹಿನ್ನಲೆ ಗಾಯಕರಾದ ಪ್ರೀತಂ, ರಶ್ಮಿ ಮಾರಾವಿ, ಮತ್ತು ಬಿಗ್ ಬ್ಯಾಂಡ್ ಕ್ಯಾಲಿಕಟ್ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.ಕೊಡಗು ಖಾಸಗಿ ಬಸ್ಸು ಕಾರ್ಮಿಕರ ಸಂಘದ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು