ಸಿದ್ದಾಪುರ: ಮೋದಿಯವರನ್ನು ಪ್ರಧಾನಿಯಾಗಿ ಮಾಡುವ ಬಹುದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅವರು ಪ್ರಧಾನಿಯಾಗುವುದು ಶತಃಸಿದ್ಧ. ಮೋದಿಯವರ ಕೈಗಳಲ್ಲಿ ಉತ್ತರಕನ್ನಡದ ಕಮಲವೂ ಇರಬೇಕು. ಇದು ಭಾರತದ ಅಳಿವು- ಉಳಿವಿನ ಪ್ರಶ್ನೆ ಎಂದು ನಮೋ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.
ನೋಟು ಅಮಾನ್ಯೀಕರಣದ ಮೂಲಕ ದೇಶದ ಆರ್ಥಿಕ ಶಕ್ತಿಗೆ ಹೊಸ ದಾರಿ ರೂಪಿಸಿದ, ಕೊರೋನಾ ಸಂಕಷ್ಟದಲ್ಲಿ ದೇಶದ ಬಹುಕೋಟಿ ಜನತೆಗೆ ಲಸಿಕೆ ನೀಡುವಲ್ಲಿ ಶ್ರಮಿಸಿದರು. ಅಲ್ಲದೇ ಜಗತ್ತಿನ ಹಲವು ದೇಶಗಳಿಗೆ ಲಸಿಕೆ ಪೂರೈಕೆ ಮಾಡಿದ ಮಹಾನ್ ಕಾರ್ಯ ಅವರದ್ದು. ಶತ್ರು ರಾಷ್ಟ್ರಗಳಿಗೆ ನಾವು ಯಾವುದಕ್ಕೂ ಸಿದ್ಧ ಎನ್ನುವ ಖಚಿತ ಉತ್ತರ ನೀಡಿದವರು ಮೋದಿ.
ದೇಶವನ್ನು ಬಹುಕಾಲ ಆಳಿದ ಕಾಂಗ್ರೆಸ್ ಸ್ವಾರ್ಥ, ಅಂಜುಬುರುಕುತನದಿಂದ ಆಡಳಿತ ನಡೆಸಿದ್ದರೆ ಮೋದಿ ನಿಸ್ವಾರ್ಥದಿಂದ, ದೇಶಕ್ಕಾಗಿ ಎಲ್ಲ ಎನ್ನುವ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ. ಮತ್ತೊಂದು ಸಂಸ್ಕೃತಿ ಧ್ವಂಸ ಮಾಡಿ ಹಿಂದೂ ಧರ್ಮ ಕಟ್ಟಲು ಅವರು ಪ್ರಯತ್ನಿಸಿಲ್ಲ. ಕಾಂಗ್ರೆಸ್ ತನ್ನ ತುಷ್ಟಿಕರಣದ ಮೂಲಕ ಮುಸ್ಲಿಮರನ್ನು ಬಳಸಿಕೊಂಡು ಅವರನ್ನು ನಾಶ ಮಾಡುತ್ತ ಬಂದಿದೆ ಎಂದರು.ಈ ಸಂದರ್ಭದಲ್ಲಿ ಯೋಧರಾದ ರಮೇಶ ನಾಯ್ಕ, ಷಣ್ಮುಖ ಗೌಡ, ವಸಂತ ನಾಯ್ಕ, ರಾಜೇಶ ನಾಯ್ಕರನ್ನು, ಕರಸೇವಕರಾದ ಲಕ್ಷ್ಮಣ ನಾಯ್ಕ ಡೊಂಬೆ, ಶ್ರೀಧರ ಭಟ್ ಶಿರಳಗಿ ಅವರನ್ನು ಸನ್ಮಾನಿಸಲಾಯಿತು. ನಮೋ ಬ್ರಿಗೇಡ್ ಜಿಲ್ಲಾ ಸಂಚಾಲಕ ಅಣ್ಣಪ್ಪ ನಾಯ್ಕ ಕುಮಟಾ ಪ್ರಾಸ್ತಾವಿಕವಾಗಿ ಮಾತನಾಡಿದರು.