ಸಂಡೂರು: ತಾಲೂಕಿನ ಕೆರೆಗಳಿಗೆ ತುಂಗಭದ್ರಾ ನದಿ ನೀರು ತುಂಬಿಸುವ ಯೋಜನೆ ರೂಪಿಸುವ ಕುರಿತಂತೆ ಚರ್ಚಿಸಲು ರೈತರ ಪೂರ್ವಭಾವಿ ಸಭೆ ತಾಲೂಕಿನ ತೋರಣಗಲ್ಲು ಹೋಬಳಿಯ ವಿಠಲಾಪುರದಲ್ಲಿ ಗುರುವಾರ ಜರುಗಿತು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಪನ್ನಾರಾಜ್, ಕಲ್ಯಾಣ ಕರ್ನಾಟಕ ಜಿಲ್ಲೆಗಳು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಬೆಳೆದು ಬಂದ ಹಾದಿ ಹಾಗೂ ೩೭೧ (ಜೆ) ತಿದ್ದುಪಡಿ, ಹಗರಿ ನದಿಗೆ ಆಣೆಕಟ್ಟು ನಿರ್ಮಾಣದ ಕುರಿತು ವಿವರಿಸಿದರು.
ತಿರುಮಲ ಅವರು ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಸಾಕಾರಕ್ಕೆ ಹೋರಾಟ ಹಮ್ಮಿಕೊಳ್ಳುವ ಅಗತ್ಯತೆ ಕುರಿತು ವಿವರಿಸಿದರು.ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕೋಡಾಲು ಗ್ರಾಮದ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿ, ಕೆರೆಗಳಿಗೆ ನೀರು ತುಂಬಿಸಿದರೆ ಅಂತರ್ಜಲ ಹೆಚ್ಚಲಿದೆಯಲ್ಲದೆ, ಕೃಷಿ ಕ್ಷೇತ್ರದ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ಕೆರೆ ಹೂಳನ್ನು ಎತ್ತುವ ಹಾಗೂ ಕೆರೆಗಳಿಗೆ ನದಿ ನೀರು ತುಂಬಿಸುವ ಹೋರಾಟಕ್ಕೆ ತಾವು ಬೆಂಬಲ ನೀಡುವುದಾಗಿ ತಿಳಿಸಿದರು.
ತಿಪ್ಪೇಸ್ವಾಮಿ ಸ್ವಾಗತಿಸಿದರು. ಟಿ.ಕೆ. ಮಂಜುನಾಥ್ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು. ಸಭೆಯಲ್ಲಿ ಬಿ.ಜಿ.ಉಜ್ಜಿನಗೌಡ, ಅಂಜನಿಮೂರ್ತಿ, ತಿಮ್ಮನಗೌಡ, ರಾಮಮೂರ್ತಿ, ಎಚ್.ಮಲಿಯಪ್ಪ, ನಿವೃತ್ತ ಸೈನಿಕ ರಾಜಶೇಖರ್, ಗೋವಿಂದರಾಜ್, ಬಂಡ್ರಿದುರುಗಪ್ಪ, ಹಗರಿ ಬಸವರಾಜಪ್ಪ, ಹೊನ್ನೂರಸ್ವಾಮಿ ಹಾಗೂ ತೋರಣಗಲ್ಲು ಹೋಬಳಿಯ ವಿವಿಧ ಗ್ರಾಮಗಳ ರೈತ ಮುಖಂಡರು ಭಾಗವಹಿಸಿದ್ದರು.