ಸಂಕ್ರಾಂತಿ ಸ್ನಾನ ಆರೋಗ್ಯಕ್ಕೆ ಪೂರಕವಾಗಲಿ: ಮಹೇಶ ಹೊಗೆಸೊಪ್ಪಿನ

KannadaprabhaNewsNetwork |  
Published : Jan 15, 2026, 02:30 AM IST
ಪೊಟೋ-ಲಕ್ಷ್ಮೇಶ್ವರದ ಅಗಸ್ತ್ಯ ತೀರ್ಥ ಕ್ಷೇತ್ರದಲ್ಲಿ ಹುಬ್ಬಳ್ಳಿಯ ವರದಶ್ರೀ ಫೌಂಡೇಷನ್ ಜ್ಞಾನ ಸಂಸತ್ತಿನ ವರದಶ್ರೀ ಪರಿವಾರ, ಅರ್ಗ್ಯಾನಿಕ್ ಅರಮನೆ ಮತ್ತು ಲಕ್ಷ್ಮೇಶ್ವರದ ಯುವ ಗೆಳೆಯರ ಬಳಗದ ಸಹಯೋಗದಲ್ಲಿ ವಿಷಮುಕ್ತ ಪುಣ್ಯಸ್ನಾನ ಅಭಿಯಾನವನ್ನು ನೆರವೇರಿಸಲಾಯಿತು. | Kannada Prabha

ಸಾರಾಂಶ

ಹುಬ್ಬಳ್ಳಿಯ ವರದಶ್ರೀ ಫೌಂಡೇಶನ್‌ ಕಳೆದ ವರ್ಷದಿಂದ ಮಕರ ಸಂಕ್ರಮಣ ದಿನ ವಿಷಮುಕ್ತ ಪುಣ್ಯ ಸ್ನಾನ ಅಭಿಯಾನವನ್ನು ರಾಜ್ಯಾದ್ಯಂತ ಕೈಗೊಂಡಿದೆ.

ಲಕ್ಷ್ಮೇಶ್ವರ: ಮಕರ ಸಂಕ್ರಾಂತಿಯ ಅಂಗವಾಗಿ ಪಟ್ಟಣದ ಅಗಸ್ತ್ಯ ತೀರ್ಥ ಕ್ಷೇತ್ರದಲ್ಲಿ ಹುಬ್ಬಳ್ಳಿಯ ವರದಶ್ರೀ ಫೌಂಡೇಷನ್ ಜ್ಞಾನ ಸಂಸತ್ತಿನ ವರದಶ್ರೀ ಪರಿವಾರ, ಅರ್ಗ್ಯಾನಿಕ್ ಅರಮನೆ ಮತ್ತು ಲಕ್ಷ್ಮೇಶ್ವರ ಯುವ ಗೆಳೆಯರ ಬಳಗ ಮತ್ತು ವಿವಿಧ ಸಂಘಟನೆಗಳ ಸಹಯೋಗದಲ್ಲಿ ವಿಷಮುಕ್ತ ಪುಣ್ಯಸ್ನಾನ ಅಭಿಯಾನ ಬುಧವಾರ ನಡೆಯಿತು.ಈ ವೇಳೆ ಯುವ ಗೆಳೆಯರ ಬಳಗದ ಮಹೇಶ ಹೊಗೆಸೊಪ್ಪಿನ ಮಾತನಾಡಿ, ಸಂಕ್ರಾಂತಿಯ ಪುಣ್ಯ ಸಮಯದಲ್ಲಿ ಬಹುತೇಕ ಜನರು ತೀರ್ಥಕ್ಷೇತ್ರಗಳಲ್ಲಿ ಪುಣ್ಯ ಸ್ನಾನ ಮಾಡುವುದು ವಾಡಿಕೆ. ಸಂಕ್ರಾಂತಿಯಂದು ನದಿ, ಪುಷ್ಕರಣಿ ಇತ್ಯಾದಿಗಳಲ್ಲಿ ಸ್ನಾನ ಮಾಡುವಾಗ ಸೋಪು, ಶ್ಯಾಂಪೂ ಬಳಸುವುದರಿಂದ ನೀರಿನಲ್ಲಿ ವಿಷದ ಪ್ರಮಾಣ ಸೇರಿದಂತಾಗುತ್ತದೆ ಎಂದರು.

ಈ ಹಿನ್ನಲೆಯಲ್ಲಿ ಹುಬ್ಬಳ್ಳಿಯ ವರದಶ್ರೀ ಫೌಂಡೇಶನ್‌ ಕಳೆದ ವರ್ಷದಿಂದ ಮಕರ ಸಂಕ್ರಮಣ ದಿನ ವಿಷಮುಕ್ತ ಪುಣ್ಯ ಸ್ನಾನ ಅಭಿಯಾನವನ್ನು ರಾಜ್ಯಾದ್ಯಂತ ಕೈಗೊಂಡಿದೆ. ಪವಿತ್ರ ಕ್ಷೇತ್ರಗಳಲ್ಲಿ ತೀರ್ಥಸ್ನಾನ ಮಾಡುವವರಿಗೆ ಉಚಿತವಾಗಿ ಸಾವಯವ ಕಡಲೆ ಹಿಟ್ಟು, ಪರಿಸರಸ್ನೇಹಿ ಮತ್ತು ಆಯುರ್ವೇದ ಔಷಧಿ ಗುಣ ಹೊಂದಿರುವ ಕಡಲೆ ಹಿಟ್ಟನ್ನು ಬಳಸಿ ವಿಷಮುಕ್ತ ಸ್ನಾನ ಅವಶ್ಯವಾಗಿದೆ ಎಂದರು. ಈ ವೇಳೆ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಚಂಬಣ್ಣ ಬಾಳಿಕಾಯಿ, ಸೋಮನಗೌಡ್ರ ಪಾಟೀಲ(ಎಲಿಬಳ್ಳಿ), ಎಸ್.ಎಸ್. ಪಾಟೀಲ, ಸುಭಾಸ ಓದುನವರ, ಎಸ್.ಜೆ. ಪುರಾಣಿಕಮಠ, ನಾರಾಯಣಸಾ ಪವಾರ, ಕಿರಣ ನವಲೆ, ರಂಗನಾಥ ಬದಿ, ಗಂಗಾಧರ ಮ್ಯಾಗೇರಿ, ದಿಗಂಬರ ಪೂಜಾರ, ಶಿವಯೋಗಿ ಮಾನ್ವಿ, ನಾಗರಾಜ ಪೂಜಾರ, ಬಸವರಾಜ ಬಿಂಕದಕಟ್ಟಿ, ಮುಳಗುಂದ ಹಾಗೂ ಯುವ ಗೆಳೆಯರ ಬಳಗದ ಸದಸ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು. ತೀರ್ಥಕ್ಷೇತ್ರಕ್ಕೆ ತೆರಳುವವರಿಗೆ ಹಾಗೂ ಸಾರ್ವಜನಿಕರಿಗೆ ಸೇರಿದಂತೆ ಸುಮಾರು ಸಾವಿರಾರು ಕಡಲೆ ಹಿಟ್ಟಿನ ಪಾಕೀಟ್‌ ವಿತರಿಸಲಾಯಿತು.ಸಂಕ್ರಾಂತಿ ದಿನ ಪುಣ್ಯಸ್ನಾನಕ್ಕೆ ಗುರುವಾರ ಬೆಳಗ್ಗೆ ೮.೩೦ರಿಂದ ಅಗಸ್ತ್ಯ ತೀರ್ಥ ಕ್ಷೇತ್ರದಲ್ಲಿ ಕಡಲೆ ಹಿಟ್ಟಿನ ಚೀಟುಗಳನ್ನು ವಿತರಿಸಲಾಗುವುದು ಎಂದು ಸಂಘಟಕರು ತಿಳಿಸಿದರು.

ಆಯವ್ಯಯಕ್ಕೆ ಸಾರ್ವಜನಿಕರ ಮುಕ್ತ ಸಲಹೆ ಅಗತ್ಯ

ಗದಗ: 2026- 27ನೇ ಸಾಲಿನ ಆಯವ್ಯಯ ರೂಪಿಸುವ ಸಂಬಂಧ ಸಾರ್ವಜನಿಕರು ಮುಕ್ತವಾಗಿ ತಮ್ಮ ಸಲಹೆ- ಸೂಚನೆಗಳನ್ನು ನೀಡಬಹುದು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.ನಗರಸಭೆಯ ಸಭಾಂಗಣದಲ್ಲಿ ಜರುಗಿದ ಆಯವ್ಯಯ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.ಅವಳಿ ನಗರವನ್ನು ಸುಂದರ ಹಾಗೂ ಅಭಿವೃದ್ಧಿಗೊಂಡ ನಗರವನ್ನಾಗಿ ರೂಪಿಸಲು ಸ್ಥಳೀಯ ಸಂಸ್ಥೆಗಳೊಂದಿಗೆ ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವಾಗಿದೆ. ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಯೋಜನೆಗಳನ್ನು ರೂಪಿಸಲು ಸಾರ್ವಜನಿಕಪ ಸಲಹೆಗಳು ಮಾರ್ಗದರ್ಶಿಯಾಗಲಿವೆ ಎಂದರು.

ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ ಮಾತನಾಡಿ, ನಗರದಾದ್ಯಂತ ಇರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕಾಗಿದೆ. ಆಯವ್ಯಯ ಪೂರ್ವಭಾವಿ ಹಂತದಲ್ಲಿಯೇ ಸಾರ್ವಜನಿಕರಿಂದ ಸಲಹೆಗಳನ್ನು ಸ್ವೀಕರಿಸಲು ನಗರಸಭೆ ಸಿದ್ಧವಾಗಿದೆ ಎಂದರು.

ಮಾತಂಡಪ್ಪ ಹಾದಿಮನಿ, ಇಮಿತಿಯಾಜ್ ಮಾತನಾಡಿ, ಆರ್.ಜಿ. ಅರಮಾನಿ, ಅರವಿಂದ ಪಟೇಲ್, ಮೋಹನ್ ಕಟ್ಟಿಮನಿ, ರಾಘವೇಂದ್ರ ಪಾಲಕಾರ ಮುಂತಾದವರು ತಮ್ಮ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ನೀಡಿದರು. ನಗರಸಭೆಯ ಸದಸ್ಯರಾದ ಬರ್ಕತ್ ಅಲಿ ಮುಲ್ಲಾ, ಶರಣಪ್ಪ ಗೋಳಗೋಳಕಿ, ನಗರಸಭೆ ಲೆಕ್ಕ ಪರಿಶೋಧಕ ಟಿ.ಎಚ್. ದ್ಯಾವನೂರು, ಸುಷ್ಮಾ ಗುಡಿ, ಜಗದೀಶ ಕೋನರಡ್ಡಿ, ಎಂ.ಆರ್. ಪಾಟೀಲ, ಎಂ.ಎಂ. ಮಕಾನಂದಾರ, ಶಬಾನ ದಳವಾಯಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಖಾಸಗಿ ಶಾಲೆಗಿಂತ ಅಂಗನವಾಡಿಯಲ್ಲಿ ಉತ್ತಮ ಶಿಕ್ಷಣ
ಲಕ್ಷ್ಮೇಶ್ವರದಲ್ಲಿ ಸಂಭ್ರಮದ ಅಗಸ್ತ್ಯ ತೀರ್ಥ ಜಾತ್ರಾ ಮಹೋತ್ಸವ