ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಭಾನುವಾರ ಬೆಳಗಾವಿ ಜಿಲ್ಲಾ ವಾಲ್ಮೀಕಿ ಸಮಾಜ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಾಲ್ಮೀಕಿ ಸಮಾಜದ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ವಾಲ್ಮೀಕಿ ಸಮಾಜ ಬಾಂಧವರು ತೀರ ಹಿಂದುಳಿದಿದ್ದಾರೆ. ಹೀಗಾಗಿ ಅವರು ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಬೆಳೆಯಬೇಕು. ಪೋಷಕರು ಸಹ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಆಗ ಮಾತ್ರ ಸಮಾಜ ಎಲ್ಲ ಕ್ಷೇತ್ರಗಳಲ್ಲಿಯೂ ಬೆಳೆಯಲು ಸಾಧ್ಯವಾಗಲಿದೆ ಎಂದ ಅವರು, ವಾಲ್ಮೀಕಿ ಸಮುದಾಯದ ಜನರು ಒಗ್ಗಟಾಗಿರಬೇಕು. ಮಕ್ಕಳ ಭವಿಷ್ಯಕ್ಕಾಗಿ ಶ್ರಮಿಸಬೇಕು. ಸಮುದಾಯ ಏಳ್ಗೆ ಕಾಣಬೇಕಾದರೆ ಶಿಕ್ಷಣವೊಂದೇ ದಾರಿ, ಈಚೆಗೆ ಮಕ್ಕಳನ್ನು ದುಶ್ಚಟಗಳಿಗೆ ದೂಡುವ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಪೋಷಕರು ಇದನ್ನು ಸೂಕ್ಷ್ಮವಾಗಿ ಗಮಿಸಿ ಮಕ್ಕಳಿಗೆ ಸಂಸ್ಕಾರ, ಗುಣಮಟ್ಟದ ಶಿಕ್ಷಣ ಕೊಡಿಸಬೇಕು. ಅವರೂ ಕೂಡ ಉತ್ತಮ ಹುದ್ದೆ ಅಲಂಕರಿಸಬೇಕು ಎಂದು ಹೇಳಿದರು.ಜಿಲ್ಲಾ ವಾಲ್ಮೀಕಿ ಸಮಾಜದ ಅಧ್ಯಕ್ಷ ರಾಜಶೇಖರ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿ, ತೀರ ಕೆಳಮಟ್ಟದ ಸಮುದಾಯಕ್ಕೆ ಮರುಜೀವ ಕೊಟ್ಟವರು ಸತೀಶ ಜಾರಕಿಹೊಳಿ ಅವರು, ಕಾಡಿನಲ್ಲಿದ್ದ ಜನರನ್ನು ನಾಡಿನಲ್ಲಿ ಬೆಳೆಸಲು ಸಚಿವರು ಬಹಳಷ್ಟು ಶ್ರಮಿಸಿದ್ದಾರೆ. ನಮ್ಮನ್ನು ಆರ್ಥಿಕ, ಶೈಕ್ಷಣಿಕವಾಗಿ ಬೆಳೆಸಲು 1999ರಲ್ಲಿ ಶಾಲೆಗಳನ್ನು ಆರಂಭಿಸಿದ ಮಹಾನ್ ಚೇತನ ಅವರು, ಶಾಲೆಗಳನ್ನು ಆರಂಭಿಸಲು ಸಾಕಷ್ಟು ನೋವು ಅನುಭವಿಸಿ, ಕಷ್ಟಗಳನ್ನು ಮೆಟ್ಟಿ ನಿಂತು ಬೆಳೆದಿದ್ದಾರೆ, ಸಮುದಾಯದ ಜನರನ್ನು ಬೆಳೆಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಹಿಂದುಳಿದ ಸಮಾಜದ ಧ್ವನಿಯಾಗಿರುವ ಸಚಿವ ಸತೀಶ ಜಾರಕಿಹೊಳಿ ಅವರು ವಾಲ್ಮೀಕಿ ಸಮುದಾಯದ ಪ್ರಗತಿಗೆ ಹಗಲಿರುಳು ಶ್ರಮಿಸಿದ್ದಾರೆ. ಅವರ ಪುತ್ರಿ ಪ್ರಿಯಂಕಾ ಜಾರಕಿಹೊಳಿ ಸಂಸತ್ ಪ್ರವೇಶ ಮಾಡಿರುವುದು ಅತೀವ ಸಂಸತವಾಗಿದೆ. ತಂದೆಯಂತೆ ಮಗಳೂ ಸಹ ವಾಲ್ಮೀಕಿ ಸಮುದಾಯನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕು. ಅವರ ಬೆಂಬಲಕ್ಕೆ ವಾಲ್ಮೀಕಿ ಸಮಾಜದ ಜನರು ಗಟ್ಟಿಯಾಗಿ ನಿಲ್ಲೋಣ, ಸಚಿವರು, ಸಂಸದೆಗೆ ಸಹಕಾರ ನೀಡೋಣ.-
-ವಂಸತರಾವ ಚವ್ಹಾಣ, ಅಧ್ಯಕ್ಷ ಆದ್ಯ ಕ್ರಾಂತಿವೀರ ನರವೀರ ರಾಜೇ ಉಮಾಜಿ ನಾಯಿಕ ಸಮಾಜ ಸುಧಾರಕ ಮಂಡಳಿ ಮಹಾರಾಷ್ಟ್ರ