ಚಿಕಿತ್ಸೆ ಪಡೆಯುತ್ತಿರುವವರು ಶೀಘ್ರ ಗುಣಮುಖರಾಗಲಿ

KannadaprabhaNewsNetwork |  
Published : Jun 14, 2025, 03:11 AM ISTUpdated : Jun 14, 2025, 03:12 AM IST
ಡಾ.ಸೋನಾಲಿ ಸರ್ನೋಬತ್ | Kannada Prabha

ಸಾರಾಂಶ

೧೬೯ ಭಾರತೀಯರು, ೫೩ ಬ್ರಿಟನ್, ೭ ಪೋರ್ಚಗೀಸ್, ಓರ್ವ ಕೆನಡಾ ಪ್ರಜೆ ಸೇರಿದ್ದಾರೆ. ಹಾಸ್ಟೇಲ್‌ ಮೇಲೆ ವಿಮಾನ ಬಿದ್ದ ಕಾರಣ ಅಲ್ಲಿದ್ದ ಜನ ಸಾವನ್ನಪ್ಪಿರುವುದು ದುಃಖಕರ ಸಂಗತಿಯಾಗಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿಏರಿಂಡಿಯಾದ ಬೋಯಿಂಗ್ ಡ್ರೀಮ್‌ಲೈನರ್ ವಿಮಾನ ಪ್ರಯಾಣದ ಆರಂಭಿಸಿದ ಕೆಲ ಹೊತ್ತಿನಲ್ಲೇ ಪತನಗೊಂಡು ೨೪೧ ಜನರು ಸಾವನ್ನಪ್ಪಿರುವುದು ಮನಸ್ಸಿಗೆ ತೀವ್ರ ನೋವಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಮಹಿಳಾ ಮೋರ್ಚಾ ಕಾರ್ಯದರ್ಶಿ, ಖ್ಯಾತ ವೈದ್ಯರಾದ ಡಾ.ಸೋನಾಲಿ ಸರ್ನೋಬತ್ ಕಳವಳ ವಕ್ತಪಡಿಸಿದ್ದಾರೆ.ಪ್ರಕಟಣೆಯಲ್ಲಿ ಸಂತಾಪ ಸೂಚಿಸಿದ ಅವರು, ದೇಶದ ಇತಿಹಾಸದಲ್ಲೇ ೨ನೇ ಅತಿ ದೊಡ್ಡ ವೈಮಾನಿಕ ದುರಂತವಾಗಿದ್ದು, ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ, ವಿಮಾನದ ಸಹಪೈಲಟ್ ಆಗಿದ್ದ ಕನ್ನಡಿಗ ಕ್ಲೈವ್ ಸುಂದರ್ ಮತ್ತು ಮುಖ್ಯ ಪೈಲಟ್ ಸುಮೀತ್ ಸೇರಿದಂತೆ ೨೪೧ ಜನರು ಸಾವನ್ನಪ್ಪಿದ್ದಾರೆ. ವಿಮಾನವು ನಿಲ್ದಾಣದಿಂದ ೫ ಕಿ.ಮೀ ದೂರದ ಮೇಘನಿನಗರ ಎಂಬಲ್ಲಿನ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಮೇಲೆ ಅಪ್ಪಳಿಸಿದ್ದು ಅಲ್ಲಿ ಕೂಡಾ ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ೧೬೯ ಭಾರತೀಯರು, ೫೩ ಬ್ರಿಟನ್, ೭ ಪೋರ್ಚಗೀಸ್, ಓರ್ವ ಕೆನಡಾ ಪ್ರಜೆ ಸೇರಿದ್ದಾರೆ. ಹಾಸ್ಟೇಲ್‌ ಮೇಲೆ ವಿಮಾನ ಬಿದ್ದ ಕಾರಣ ಅಲ್ಲಿದ್ದ ಜನ ಸಾವನ್ನಪ್ಪಿರುವುದು ದುಃಖಕರ ಸಂಗತಿಯಾಗಿದೆ. ೧೯೯೬ರಲ್ಲಿ ಹರ್ಯಾಣದ ದಾಧ್ರಿ ಚಕ್ರಿ ಎಂಬಲ್ಲಿ ೨ ವಿಮಾನಗಳ ಡಿಕ್ಕಿ ಸಂಭವಿಸಿ ೩೪೯ ಜನ ಸಾವನ್ನಪ್ಪಿದ್ದರು. ಅದಾದ ಬಳಿಕ ದೇಶದಲ್ಲಿ ಸಂಭವಿಸಿದ ಅತೀ ದೊಡ್ಡ ವಿಮಾನ ದುರಂತ ಇದಾಗಿದೆ ಎಂದು ತಿಳಿಸಿದ್ದಾರೆ.ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಪತನವಾಗಿರುವುದು ನಿಜಕ್ಕೂ ದುರದೃಷ್ಟಕರ. ದುರಂತದಲ್ಲಿ ನೂರಾರು ಜನ ಮೃತಪಟ್ಟಿರುವ ಸುದ್ದಿ ದುಖಃದ ಮತ್ತು ಆಘಾತಕಾರಿ ಸಂಗತಿ. ಮಡಿದವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಮತ್ತು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಶೀಘ್ರ ಗುಣಮುಖರಾಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.-ಡಾ.ಸೋನಾಲಿ ಸರ್ನೋಬತ್, ಬಿಜೆಪಿ ರಾಜ್ಯ ಘಟಕದ ಮಹಿಳಾ ಮೋರ್ಚಾ ಕಾರ್ಯದರ್ಶಿ, ಖ್ಯಾತ ವೈದ್ಯರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ