ಸಹಕಾರ ಕ್ಷೇತ್ರದಲ್ಲಿ ಮಹಿಳೆಯರ ಪಾಲುದಾರಿಕೆ ಹೆಚ್ಚಲಿ

KannadaprabhaNewsNetwork |  
Published : Aug 31, 2026, 01:15 AM IST
ಫೋಟೋ: 30 ಹೆಚ್‌ಎಸ್‌ಕೆ 1ಹೊಸಕೋಟೆ ನಗರದ ಖಾಸಗಿ ಸಭಾಭವನದಲ್ಲಿ ನಡೆದ ಮಹಿಳಾ ಸಂಕಲ್ಪ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ 9ನೇ ವರ್ಷದ ಸಾಮಾನ್ಯ ಸಭೆಯನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಡಿಜಿಎಂ ಶ್ರೀಧರ್ ಸೇರಿದಂತೆ ಹಲವಾರು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಹೊಸಕೋಟೆ: ಸಹಕಾರ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕೆಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರ ನಿಯಮಿತದ ಪ್ರಾಂತೀಯ ಅಧಿಕಾರಿ ಶ್ರೀಧರ್ ತಿಳಿಸಿದರು

ಹೊಸಕೋಟೆ: ಸಹಕಾರ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕೆಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರ ನಿಯಮಿತದ ಪ್ರಾಂತೀಯ ಅಧಿಕಾರಿ ಶ್ರೀಧರ್ ತಿಳಿಸಿದರು.

ನಗರದಲ್ಲಿ ಮಹಿಳಾ ಸಂಕಲ್ಪ ಸೌಹಾರ್ದ ಪತ್ತಿನ ಸಹಕಾರ ಸಂಘದ 9ನೇ ವರ್ಷದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಮಹಿಳೆಯರಿಂದಲೆ ಪ್ರಾರಂಭವಾದ ಮಹಿಳಾ ಸಂಕಲ್ಪ ಸೌಹಾರ್ದ ಪತ್ತಿನ ಸಹಕಾರ ಸಂಘ ಲಾಭದಲ್ಲಿ ನಡೆಯುತ್ತಿದೆ. ಷೇರುದಾರರಿಗೆ ಡಿವಿಡೆಂಡ್ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಪ್ರಸಕ್ತ ವರ್ಷದ ಲಾಭಾಂಶದಲ್ಲಿ ಶೇ.7ರಷ್ಟು ಡಿವಿಡೆಂಡ್ ನೀಡುತ್ತಿರುವುದು ಪ್ರಂಶಸನೀಯ. ಸಕಾಲದಲ್ಲಿ ಸಾಲ ಮರುಪಾವತಿಸಿ ಸಂಘದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.

ಸಿಇಒ ವೆಂಕಟೇಶ್ ಮಾತನಾಡಿ, ಸಹಕಾರ ಸಂಘಗಳಿಗೆ ಷೇರುದಾರರೇ ಜೀವಾಳ. ಸದಸ್ಯರ ವಿಶ್ವಾಸ ಗಳಿಸಿರುವ ಸಂಘ ಅಭಿವೃದ್ಧಿ ಹಾದಿಯಲ್ಲಿ ಮುನ್ನಡೆಯುತ್ತಿದೆ. ಪ್ರಸ್ತುತ 1350 ಷೇರುದಾರರನ್ನು ಹೊಂದಿದ್ದು, ಪ್ರಸಕ್ತ ಸಾಲಿನಲ್ಲಿ 8 ಕೋಟಿ ವಹಿವಾಟು ನಡೆದಿದೆ. 6.42 ಕೋಟಿ ಠೇವಣಿ ಸಂಗ್ರಹವಾಗಿದ್ದು, 4.16 ಕೋಟಿ ಸಾಲ ವಿತರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 18.66 ಲಕ್ಷ ಲಾಭ ಗಳಿಸಿದೆ ಎಂದರು.

ಸಂಘದ ಅಧ್ಯಕ್ಷೆ ಪಿ.ಮೈತ್ರಿದೇವಿ ಮಾತನಾಡಿ, ಮಹಿಳೆಯರನ್ನು ಸಬಲೀಕರಣಗೊಳಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಮಹಿಳಾ ಸಂಕಲ್ಪ ಸೌಹಾರ್ದ ಪತ್ತಿನ ಸಹಕಾರಿ ಸಂಘ ಸ್ಥಾಪಿಸಲಾಗಿದೆ ಎಂದರು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರ ಸಂಘದ ಅಭಿವೃದ್ಧಿ ಅಧಿಕಾರಿ ಕೆ.ಎಂ.ರಾಜೇಶ್, ಶ್ರೀವಾರಿ ಗ್ರೂಪ್ ಮಾಲೀಕ ಕೃಷ್ಣಮೂರ್ತಿ, ಸಂಘದ ಉಪಾಧ್ಯಕ್ಷೆ ಕೆ.ಅಮೂಲ್ಯ, ನಿರ್ದೇಶಕರಾದ ಪ್ರಭಾಮಣಿ, ಶಾರದಾ ಅಯ್ಯರ್, ಬಿ.ಎಸ್. ರಾಜೇಶ್ವರಿ, ವೈ.ಹೇಮಲತಾ, ಸಂಪಮ್ಮ, ಅಶ್ವತಮ್ಮ, ಟಿ.ಎಸ್.ಸುಜಾತ, ಎಚ್.ಎಂ.ನಾಗಜ್ಯೋತಿ, ಟಿ.ಎಸ್.ದೇವಿರಮ್ಮ, ವ್ಯವಸ್ಥಾಪಕಿ ಬಿ.ಎಂ.ಲಕ್ಷ್ಮಿ, ನಗದು ಗುಮಾಸ್ತೆ ಎಂ.ಎಸ್. ರೇವತಿ, ಪಿಗ್ಮಿ ಏಜೆಂಟ್ ಜಿ.ವಿ.ರಮೇಶ್ ಉಪಸ್ಥಿತರಿದ್ದರು.

ಫೋಟೋ: 29 ಹೆಚ್‌ಎಸ್‌ಕೆ 1

ಹೊಸಕೋಟೆಯಲ್ಲಿ ಮಹಿಳಾ ಸಂಕಲ್ಪ ಸೌಹಾರ್ದ ಪತ್ತಿನ ಸಹಕಾರ ಸಂಘದ ಸಾಮಾನ್ಯ ಸಭೆಯನ್ನು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರ ನಿಯಮಿತದ ಡಿಜಿಎಂ ಶ್ರೀಧರ್ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಡಾನೆ ನಿಯಂತ್ರಣಕ್ಕೆ ರೈಲ್ವೆ ಬ್ಯಾರಿಕೇಡ್ ಒಂದೇ ಪರಿಹಾರ: ಗಾಂಧಿ ಗ್ರಾಮ ನಾಗರಾಜ್ ಸಲಹೆ
ಮಂಡ್ಯ: ಶ್ರದ್ಧಾ-ಭಕ್ತಿಯಿಂದ ನಡೆದ ಶ್ರೀಗುರುರಾಯರ ಆರಾಧನೆ