ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಕರ್ನಾಟಕವೂ ಸೇರಿ ಎಲ್ಲಾ ರಾಜ್ಯದ ಸಾಯಿಬಾಬಾ ಮಂದಿರಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಸಾಯಿಬಾಬಾರವರು ಪೂಜಿಸುವವರು ಸಹ ಅಪಾರ ಸಂಖ್ಯೆಯಲ್ಲಿ ಬೆಳೆದಿದ್ದಾರೆ. ಸಾಯಿಬಾಬಾರ ಮೇಲೆ ನಾನಿಟ್ಟ ಅಚಲವಾದ ನಂಬಿಕೆ, ವಿಶ್ವಾಸ, ಗೌರವ ನನಗೆ ಇಂದು ಈ ಕ್ಷೇತ್ರದಲ್ಲಿ ಸಂಸದನಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಿದ್ದಾರೆಂದು ಸಂಸದ ಗೋವಿಂದ ಕಾರಜೋಳ ತಿಳಿಸಿದರು.ಶನಿವಾರ ಸಾಯಿಬಾಬಾ ಮಂದಿರಕ್ಕೆ ಗುರುಪೂರ್ಣಿಮೆ ಹಿನ್ನೆಲೆ ಭೇಟಿ ನೀಡಿ ವೆಂಕಟಸಾಯಿ ಟ್ರಸ್ಟ್ ಹಾಗೂ ಸಾಯಿಬಾಬಾ ಭಕ್ತರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಬದುಕಿನಲ್ಲಿ ನೆಮ್ಮದಿ ಕಾಣಬೇಕಾದರೆ ಸಾಯಿಬಾಬಾರ ಮೊರೆ ಹೋಗಬೇಕು ಎಂದರು.
ದೂರದ ಬಾಗಲಕೋಟೆ ಜಿಲ್ಲೆಯಿಂದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಬಂದ ಸಂದರ್ಭದಲ್ಲಿ ನಾನು ಮೊದಲು ಭೇಟಿ ಮಾಡಿದ್ದೇ ಸಾಯಿಬಾಬಾ ಮಂದಿರಕ್ಕೆ ಕಳೆದ ಏಪ್ರಿಲ್ ತಿಂಗಳಲ್ಲಿ ಅಭ್ಯರ್ಥಿಯಾಗಿ ಬಂದು, ಜುಲೈ ತಿಂಗಳಲ್ಲಿ ಸಂಸದನಾಗಿ ಭಗವಾನ್ ಸಾಯಿಬಾಬಾರ ಆಶೀರ್ವಾದ ಪಡೆಯುತ್ತಿರುವುದು ನನ್ನ ಜೀವನದ ಸಾರ್ಥಕತೆ ಭಾಗವೆಂದರು.ವೆಂಕಟಸಾಯಿ ಸೇವಾಟ್ರಸ್ಟ್ ಅಧ್ಯಕ್ಷ ಬಿ.ಸಿ.ಸಂಜೀವಮೂರ್ತಿ ಮಾತನಾಡಿ, ರಾಜ್ಯದ ಹಿರಿಯ ಮುತ್ಸದ್ಧಿ ರಾಜಕಾರಣಿಗಳಲ್ಲಿ ಸಂಸದ ಗೋವಿಂದಕಾರಜೋಳ ಒಬ್ಬರಾಗಿದ್ದಾರೆ. ಈ ಕ್ಷೇತ್ರದಲ್ಲಿ ಚುನಾವಣೆ ನಿಲ್ಲುವ ಸಂದರ್ಭದಲ್ಲಿ ಎಲ್ಲರೂ ಸಹ ಅವರ ಸೋಲನ್ನು ಎದುರು ನೋಡಿದ್ದರು. ಆದರೆ, ಈ ಭಾಗದ ಮತದಾರರು ಗೋವಿಂದ ಕಾರಜೋಳರಿಗೆ ವಿಜಯಮಾಲೆ ಹಾಕಿದ್ದಾರೆ. ಸಾಯಿಬಾಬಾರ ಆಶೀರ್ವಾದ ಅವರ ಮೇಲಿದೆ ಎಂದರು.
ಬಿಜೆಪಿ ಮಂಡಲಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಬಿಜೆಪಿ ಮುಖಂಡ ಎನ್.ಓಬಳೇಶ್, ಬಾಳೆಮಂಡಿರಾಮದಾಸ್, ಟ್ರಸ್ಟ್ ಉಪಾಧ್ಯಕ್ಷ ಕೆ.ಎಂ.ಜಗದೀಶ್, ಕಾರ್ಯದರ್ಶಿ ರವಿಪ್ರಸಾದ್, ನಿರ್ದೇಶಕರಾದ ಬಿ.ವಿ.ಚಿದಾನಂದಮೂರ್ತಿ, ಹೂವಿನಜಗದೀಶ್, ಬಿ.ಸಿ.ವೆಂಕಟೇಶ್‌ಮೂರ್ತಿ, ಹೊನ್ನೂರುಗೋವಿಂದಪ್ಪ, ಬಿ.ಸಿ.ಸತೀಶ್, ಕೆ.ನಾಗೇಶ್ ಮುಂತಾದವರು ಇದ್ದರು.