ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ವಿದ್ಯಾರ್ಥಿ ಜೀವನದಲ್ಲಿ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳು ಅತ್ಯವಶ್ಯಕ, ವಿದ್ಯಾರ್ಥಿಗಳಲ್ಲಿ ಅನೇಕ ಪ್ರತಿಭೆಗಳಿವೆ, ಅವುಗಳನ್ನು ಹೊರತರುವಲ್ಲಿ ಪಠ್ಯೇತರ ಚಟುವಟಿಕೆಗಳು ಸಹಕಾರಿಯಾಗಲಿವೆ. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ಅರಿವಿನ ಜತೆ ಹೆಮ್ಮೆ ಇರಬೇಕು. ಕಲಿಕೆ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಿ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಲೇಜು ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ನಾಗೇಂದ್ರಪ್ರಸಾದ್ ಮಾತನಾಡಿ, ಇಲ್ಲಿನ ಗ್ರಂಥಾಲಯದಲ್ಲಿ ಜ್ಞಾನಾರ್ಜನೆಗೆ ಉಪಯುಕ್ತವಾದ ಹಲವು ಪುಸ್ತಕಗಳಿವೆ. ಅವುಗಳನ್ನು ಅಧ್ಯಯನ ಮಾಡುವ ಮೂಲಕ ವಿದ್ಯಾರ್ಥಿಗಳು ಸಾಧನೆಗೈದು ಗುರು, ಹಿರಿಯರು, ಪೋಷಕರಿಗೆ ಕೀರ್ತಿ ತನ್ನಿ ಎಂದರು. ಈ ಸಂದರ್ಭದಲ್ಲಿ ವಲಯ ಮತ್ತು ವಿಭಾಗೀಯ ಮಟ್ಟಗಳಲ್ಲಿ ವಿಜೇತರಾದವರಿಗೆ ಹಾಗೂ ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಈ ವೇಳೆ ಪ್ರಾಂಶುಪಾಲೆ ಪ್ರೊ.ಜಯಲಕ್ಷ್ಮಿ, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ನಾಗೇಂದ್ರಪ್ರಸಾದ್, ಡಾ. ಹೇಮಕುಮಾರ್, ಅರುಣ್ ಕುಮಾರ್, ಡಾ. ಸುಧಾ, ಪ್ರೊ.ಎಸ್ .ಸುಂದರಮೂರ್ತಿ, ಪ್ರೊ.ಪ್ರೇಮಕುಮಾರಿ, ಜಯಶಂಕರ್, ಡಾ.ವೇಣುಗೋಪಾಲ್, ಡಾ.ಪ್ರೇಮಲತಾ, ಡಾ.ನಂಜುಂಡಸ್ವಾಮಿ, ಡಾ.ಆನಂದ್, ಸಿದ್ದರಾಜು ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.