ಕನ್ನಡಪ್ರಭ ವಾರ್ತೆ ಮಂಗಳೂರು
ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಮೈಸೂರು ಪ್ರಾದೇಶಿಕ ಆಯುಕ್ತ ರಮೇಶ್ ಡಿ.ಎಸ್. ಚುನಾವಣಾಧಿಕಾರಿಯಾಗಿ ಮೇಯರ್- ಉಪಮೇಯರ್, ನಾಲ್ಕು ಸ್ಥಾಯಿ ಸಮಿತಿಗಳಿಗೆ ತಲಾ 7 ಸದಸ್ಯರ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
ಪಾಲಿಕೆಯ ಪ್ರಸಕ್ತ ಆಡಳಿತ ಅವಧಿ ಮುಂದಿನ ವರ್ಷದ ಫೆಬ್ರವರಿ 27ರವರೆಗೆ ಮಾತ್ರ ಇರುವುದರಿಂದ ಸುಮಾರು ಐದೂವರೆ ತಿಂಗಳು ಮಾತ್ರ ಮೇಯರ್, ಉಪಮೇಯರ್, ಸ್ಥಾಯಿ ಸಮಿತಿಗಳ ಅಧಿಕಾರ ಇರಲಿದೆ.ಬಿಜೆಪಿ 44, ಕಾಂಗ್ರೆಸ್ 14, ಎಸ್‌ಡಿಪಿಐನ ಇಬ್ಬರು ಸದಸ್ಯ ಬಲ ಹೊಂದಿರುವ ಪಾಲಿಕೆಯಲ್ಲಿ ಚುನಾವಣಾ ಪ್ರಕ್ರಿಯೆ ಆರಂಭಿಸುವಾಗ 65 ಅರ್ಹ ಸದಸ್ಯರ ಪೈಕಿ 61 ಮಂದಿ ಹಾಜರಿದ್ದರು. ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ ಉಪಸ್ಥಿತರಿದ್ದರೆ, ಕಾಂಗ್ರೆಸ್ ಶಾಸಕರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜ ಗೈರು ಹಾಜರಾಗಿದ್ದರು. ಸಭೆಯಲ್ಲಿ ಮೂರನೇ ಒಂದು ಭಾಗದಷ್ಟು ಕೋರಂ ಇದ್ದುದರಿಂದ ಚುನಾವಣೆ ಪ್ರಕ್ರಿಯೆ ಆರಂಭಿಸಲಾಯಿತು.ಅವಿರೋಧ ಆಯ್ಕೆ:
ಉಪ ಮೇಯರ್‌ಗೆ ಚುನಾವಣೆ:
ಎಸ್‌ಡಿಪಿಐ ಒಬ್ಬರು ಗೈರು, ಇನ್ನೊಬ್ಬರು ತಟಸ್ಥ:
ಬಳಿಕ ನಾಲ್ಕು ಸ್ಥಾಯಿ ಸಮಿತಿಗಳಿಗೆ ತಲಾ ಏಳು ಸದಸ್ಯರ ಅವಿರೋಧ ಆಯ್ಕೆ ನಡೆಯಿತು. ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, ಪಾಲಿಕೆ ಆಯುಕ್ತ ಆನಂದ್ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.ಅಭಿನಂದನಾ ಸಭೆಯಲ್ಲಿ ರಾಜಕೀಯ ಚಕಮಕಿ!
ಈ ವೇಳೆ ಮಾತನಾಡಿದ ಕಾಂಗ್ರೆಸ್ ಸದಸ್ಯ ಶಶಿಧರ ಹೆಗ್ಡೆ, ಅಭಿನಂದನಾ ಸಮಾರಂಭವನ್ನು ಅಭಿನಂದನೆಗಷ್ಟೇ ಸೀಮಿತ ಮಾಡಬೇಕು. ಆದರೆ ಸರ್ಕಾರವನ್ನು ದೂಷಿಸಿ ರಾಜಕೀಯ ಮಾಡುವುದು ಸಲ್ಲದು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮೇಯರ್ ಸ್ಥಾನದ ಎಸ್ಸಿ ಮೀಸಲಾತಿ ಬಗ್ಗೆಯೂ ಮಾತಿನ ಚಕಮಕಿ ನಡೆಯಿತು. ಬಳಿಕ ಆಡಳಿತ- ವಿಪಕ್ಷ ಸದಸ್ಯರೆಲ್ಲರೂ ಸಂತಸದಿಂದ ಮೇಯರ್- ಉಪಮೇಯರ್‌ಗೆ ಅಭಿನಂದನೆ ಸಲ್ಲಿಸಿದರು.
2. ಸಾಮಾಜಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ- ಸುಮಿತ್ರಾ, ಸುನೀತಾ, ಶರತ್ ಕುಮಾರ್, ಭರತ್ ಕುಮಾರ್, ಶೋಭಾ ಪೂಜಾರಿ, ದಿವಾಕರ ಪಾಂಡೇಶ್ವರ, ಅಬ್ದುಲ್ ಲತೀಫ್.3. ಪಟ್ಟಣ ಯೋಜನೆ ಮತ್ತು ಸುಧಾರಣಾ ಸ್ಥಾಯಿ ಸಮಿತಿ- ಭಾಸ್ಕರ ಮೊಯ್ಲಿ, ವೀಣಾ ಮಂಗಳಾ, ಲಕ್ಷ್ಮೀ ದೇವಾಡಿಗ, ಗಾಯತ್ರಿ ಎ., ಲೋಹಿತ್ ಅಮೀನ್, ಶೈಲೇಶ್ ಶೆಟ್ಟಿ, ನವೀನ್ ಡಿಸೋಜ.4. ಲೆಕ್ಕಪತ್ರ ಸ್ಥಾಯಿ ಸಮಿತಿ- ಅಶ್ರಫ್, ಸರಿತಾ ಶಶಿಧರ್, ಲೀಲಾವತಿ, ಜಯಲಕ್ಷ್ಮೀ ಶೆಟ್ಟಿ, ವರುಣ್ ಚೌಟ, ಚಂದ್ರಾವತಿ, ಸಂಶುದ್ದೀನ್.
2019ರಲ್ಲಿ ದೇರೆಬೈಲ್ ಉತ್ತರ ವಾರ್ಡ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದವರು ಮನೋಜ್ ಕುಮಾರ್ ಕೋಡಿಕಲ್. ಪಾಲಿಕೆ ಸದಸ್ಯನಾಗಿ ಮೊದಲ ಅವಧಿಯಲ್ಲೇ ಅವರಿಗೆ ಮೇಯರ್ ಪಟ್ಟ ಒಲಿದಿದೆ. ಡಿಪ್ಲೊಮಾ ಪದವೀಧರರಾಗಿರುವ ಅವರು ಕಾಲೇಜು ಜೀವನದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ಸಕ್ರಿಯ ಕಾರ್ಯಕರ್ತ. ಬಿಜೆಪಿಯಲ್ಲಿ ಎಸ್‌ಸಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿಯಾಗಿದ್ದು, ಪ್ರಸ್ತುತ ಎಸ್‌ಸಿ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
ಉಪಮೇಯರ್ ಭಾನುಮತಿ ಪಿ.ಎಸ್. ಹಲವು ವರ್ಷಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡವರು. ಭಗಿನಿ ಸಮಾಜದ ಕಾರ್ಯದರ್ಶಿ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಬೋಳಾರ ವಾರ್ಡ್‌ನಿಂದ ಗೆದ್ದು ಸದಸ್ಯರಾದವರು.