ಕೊಂಕಣಿ ಭಾಷೆಯನ್ನು ಭಾರತದ ಸಂವಿಧಾನದ 8ನೇ ಅನುಸೂಚಿಗೆ ಸೇರ್ಪಡೆಗೊಳಿಸಿದ ದಿನವನ್ನು ಸ್ಮರಿಸುವ ಅಂಗವಾಗಿ ಎಂ.ಸಿ.ಸಿ. ಬ್ಯಾಂಕ್ ವತಿಯಿಂದ ಶನಿವಾರ ಬ್ಯಾಂಕ್‌ನ ಆಡಳಿತ ಕಚೇರಿಯ ಪಿ.ಎಫ್.ಎಕ್ಸ್. ಸಾಲ್ದಾನ್ಹಾ ಸ್ಮಾರಕ ಸಭಾಂಗಣದಲ್ಲಿ ಕೊಂಕಣಿ ಮಾನ್ಯತಾ ದಿವಸ ಆಚರಿಸಲಾಯಿತು.
ಮಂಗಳೂರು: ಕೊಂಕಣಿ ಭಾಷೆಯನ್ನು ಭಾರತದ ಸಂವಿಧಾನದ 8ನೇ ಅನುಸೂಚಿಗೆ ಸೇರ್ಪಡೆಗೊಳಿಸಿದ ದಿನವನ್ನು ಸ್ಮರಿಸುವ ಅಂಗವಾಗಿ ಎಂ.ಸಿ.ಸಿ. ಬ್ಯಾಂಕ್ ವತಿಯಿಂದ ಶನಿವಾರ ಬ್ಯಾಂಕ್‌ನ ಆಡಳಿತ ಕಚೇರಿಯ ಪಿ.ಎಫ್.ಎಕ್ಸ್. ಸಾಲ್ದಾನ್ಹಾ ಸ್ಮಾರಕ ಸಭಾಂಗಣದಲ್ಲಿ ಕೊಂಕಣಿ ಮಾನ್ಯತಾ ದಿವಸ ಆಚರಿಸಲಾಯಿತು.
ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಣಕಾಸು ಸಂಸ್ಥೆಯೊಂದರಲ್ಲಿ ಕೊಂಕಣಿ ಮಾನ್ಯತಾ ದಿವಸ ಆಚರಿಸುವ ಮಹತ್ವ ವಿವರಿಸಿದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್ ಕೊಂಕಣಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕೊಂಕಣಿ ಭಾಷೆಯನ್ನು ಭಾರತದ ಸಂವಿಧಾನದ ಎಂಟನೇ ಅನುಸೂಚಿಗೆ 22 ಭಾಷೆಗಳಲ್ಲಿ ಒಂದಾಗಿ ಸೇರ್ಪಡೆಗೊಳಿಸಲು ಹಾಗೂ ಗೋವಾದ ಅಧಿಕೃತ ಭಾಷೆಯಾಗಿ ಮಾನ್ಯತೆ ದೊರಕಿಸಲು ಹೋರಾಡಿದ ಹಿರಿಯರು ಮತ್ತು ಭಾಷಾ ಹೋರಾಟಗಾರರ ಪರಿಶ್ರಮ ಹಾಗೂ ತ್ಯಾಗವನ್ನು ಸ್ಮರಿಸಿದರು. ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿ ಫಾ.ರೂಪೇಶ್ ಮಾಡ್ತಾ, ಖ್ಯಾತ ಕೊಂಕಣಿ ಗಾಯಕಿ ‘ಕೊಂಕಣಿ ಮೈನಾ’ ಮೀನಾ ರೆಬಿಂಬಸ್, ರೆಬಿಂಬಸ್ ಕ್ರಿಯೇಷನ್ಸ್‌ನ ಮಾಲೀಕ ವಿಶ್ವಾಸ್ ರೆಬಿಂಬಸ್, ಬ್ಯಾಂಕ್ ಉಪಾಧ್ಯಕ್ಷ ಜೆರಾಲ್ಡ್ ಜೆ. ಡಿಸಿಲ್ವಾ, ಮಹಾಪ್ರಬಂಧಕ ಸುನಿಲ್ ಮೆನೆಜಸ್, ಬ್ಯಾಂಕ್ ನಿರ್ದೇಶಕರಾದ ಆಂಡ್ರ್ಯೂ ಡಿಸೋಜ, ಜೆ.ಪಿ.ರೊಡ್ರಿಗಸ್, ರೋಷನ್ ಡಿಸೋಜ, ಐರಿನ್ ರೆಬೆಲ್ಲೊ, ಡೇವಿಡ್ ಡಿಸೋಜ, ಹೆರಾಲ್ಡ್ ಮೊಂತೆರೊ, ಡಾ.ಜೆರಾಲ್ಡ್ ಪಿಂಟೊ, ವಿನ್ಸೆಂಟ್ ಲಸ್ರಾಡೊ, ಮೆಲ್ವಿನ್ ವಾಸ್, ಎಲ್ರಾಯ್ ಕಿರಣ್ ಕ್ರಾಸ್ಟಾ, ಸುಶಾಂತ್ ಸಲ್ದಾನ್ಹಾ, ಫೆಲಿಕ್ಸ್ ಡಿಕ್ರೂಜ್, ಉಪ ಮಹಾಪ್ರಬಂಧಕ ರಾಜ್ ಎಫ್.ಮೆನೆಜಸ್ ಮತ್ತಿತರರು ಇದ್ದರು.‘ಕೊಂಕಣಿ ಮೈನಾ’ ಎಂದೇ ಕರೆಯಲ್ಪಡುವ ಮೀನಾ ರೆಬಿಂಬಸ್ ಅವರನ್ನು ಸನ್ಮಾನಿಸಲಾಯಿತು. ಅವರಿಗೆ 50,000 ರು. ಮೊತ್ತದ ಚೆಕ್ ನೀಡಿ ಗೌರವಿಸಲಾಯಿತು. ಡೇವಿಡ್ ಡಿಸೋಜ ಸನ್ಮಾನ ಪತ್ರ ವಾಚಿಸಿದರು. ನೆಲ್ಸನ್ ಮೊನಿಸ್ ಸ್ವಾಗತಿಸಿ, ನಿರೂಪಿಸಿದರು. ಸುನಿಲ್ ಮೆನೆಜಸ್ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.