ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಎಂ.ಸಿ.ಸಿ. ಬ್ಯಾಂಕಿನ ಉಡುಪಿ ನಗರ ಶಾಖೆಯನ್ನು ಅಜ್ಜರುಕಾಡು ಭುಜಂಗ ಪಾರ್ಕ್ ರಸ್ತೆಯ ಶ್ರೀ ಶಿವಧಾಮ ಕಮರ್ಷಿಯಲ್‌ನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಸ್ಥಳಾಂತರಿತ ಶಾಖೆಯನ್ನು ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಉದ್ಘಾಟಿಸಿದರು.ಉಡುಪಿಯ ಮದರ್ ಆಫ್ ಸಾರೊಸ್ ಚರ್ಚ್‌ನ ಧರ್ಮಗುರು ಚಾರ್ಲ್ಸ್ ಮಿನೇಜಸ್ ಆಶೀರ್ವಚನ ನೀಡಿದರು. ಸೈಂಟ್ ಸಿಸಿಲಿ ಕಾನ್ವೆಂಟ್‌ನ ಸುಪೀರಿಯರ್ ಜ್ಯೋತಿ ಡಿಸೋಜ, ಸೇಪ್ ಡೆಪಾಸಿಟ್ ಲಾಕರ್ ಉದ್ಘಾಟಿಸಿದರು. ಅತಿಥಿಗಳಾಗಿ ಉಡುಪಿ ನಗರ ಸಭೆಯ ಅಧ್ಯಕ್ಷ ಪ್ರಭಾಕರ್ ಪೂಜಾರಿ, ನ್ಯಾಯಾವಾದಿ ಮೊಹಮ್ಮದ್ ಇಕ್ಬಾಲ್ ಮತ್ತು ಉದ್ಯಮಿ ರೋಶನ್ ಶೆಟ್ಟಿ ಆಗಮಿಸಿದ್ದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ, ೨೦೧೮ರಲ್ಲಿ ೭ ಕೋಟಿ ರು. ಇದ್ದ ಬ್ಯಾಂಕಿನ ಠೇವಣಿ ಕಳೆದ ೬ ವರ್ಷಗಳಲ್ಲಿ ೨೬ ಕೋಟಿ ರು.ಗೆ ತಲುಪಿದೆ. ಇದು ಬ್ಯಾಂಕಿನ ಗ್ರಾಹಕರ ನಂಬಿಕೆಗೆ ಕಾರಣವಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ಯುಪಿಐ, ಗೂಗಲ್ ಪೇ, ಇತ್ಯಾದಿಗಳನ್ನು ಆಳವಡಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ತಿಳಿಸಿದರು.ಡಾ.ಜೆರಾಲ್ಡ್ ಪಿಂಟೊ ಹಾಗೂ ಶೆರಿ ಆಶ್ನಾ ಸಂಪಾದತ್ವದಲ್ಲಿ ಹೊರತರಲಾದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ದೀಪಾವಳಿ ಸಂದರ್ಭದಲ್ಲಿ ಭಾವಚಿತ್ರ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಕಟ್ಟಡದ ಮಾಲಕ ಟಿ.ಎನ್. ಅಮೀನ್ ಹಾಗೂ ಸಿವಿಲ್ ಎಂಜಿನಿಯರ್ ಕಾರ್ತಿಕ್ ಕಿರಣ್ ಅವರನ್ನು ಗೌರವಿಸಲಾಯಿತು.ಬ್ಯಾಂಕಿನ ಮಹಾಪ್ರಬಂಧಕ ಸುನಿಲ್ ಮಿನೇಜಸ್, ನಿರ್ದೇಶಕರಾದ ಎಲ್‌ರೋಯ್ ಕಿರಣ್ ಕ್ರಾಸ್ಟೊ, ವಿನ್ಸೆಂಟ್ ಲಸ್ರಾದೊ, ಜೋಸೆಫ್ ಅನಿಲ್ ಪತ್ರಾವೊ, ಜೆ.ಪಿ. ರೊಡ್ರಿಗಸ್, ರೋಶನ್ ಡಿಸೋಜ, ಹೆರಾಲ್ಡ್ ಜೋನ್ ಮೊಂತೇರೊ, ಡೆವಿಡ್ ಡಿಸೋಜ, ಮೆಲ್ವಿನ್ ವಾಸ್, ಐರಿನ್ ರೆಬೆಲ್ಲೊ, ಸುಶಾಂತ್ ಸಲ್ಡಾನ್ಹಾ ಹಾಜರಿದ್ದರು. ನಿರ್ದೇಶಕರಾದ ಡಾ.ಜೆರಾಲ್ಡ್ ಪಿಂಟೊ ಸ್ವಾಗತಿಸಿದರು. ಪ್ರಬಂಧಕರಾದ ಪ್ರದೀಪ್ ಡಿಸೋಜ ವಂದಿಸಿದರು. ಸ್ಟಿವನ್ ಕುಲಾಸೊ ನಿರೂಪಿಸಿದರು.