ಕನ್ನಡಪ್ರಭ ವಾರ್ತೆ ಚಾಮರಾಜನಗರ
ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೃಷಬೇಂದ್ರಪ್ಪ ಒಂದು ಮತದಿಂದ ಸೋಲು ಕಂಡರೆ, ಕೊಳ್ಳೇಗಾಲ-ಹನೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಶಾಸಕ ಆರ್.ನರೇಂದ್ರ 9 ಮತ, ಎದುರಾಳಿ ಅಭ್ಯರ್ಥಿ ಮಲ್ಲೇಶ್ ಗೆ 8 ಮತ ಬಂದಿವೆ. ಒಂದು ಮತವನ್ನು ನ್ಯಾಯಾಲಯದಿಂದ ಅನುಮತಿ ಪಡೆದು ಹಕ್ಕು ಚಲಾಯಿಸಿರುವುದರಿಂದ ನ್ಯಾಯಾಲಯದ ಆದೇಶ ಬರುವ ತನಕ ಮತ ಎಣಿಕೆಗೆ ಚುನಾವಣಾಧಿಕಾರಿ ತಡೆ ನೀಡಿದ್ದಾರೆ. ಗುಂಡ್ಲುಪೇಟೆ ಕ್ಷೇತ್ರದಲ್ಲಿ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ನಿರೀಕ್ಷೆಯಂತೆ ೨೨ ಮತ ಪಡೆದು ಎದುರಾಳಿ ಬಿಜೆಪಿ ಎಸ್.ಎಂ.ವೀರಪ್ಪ ವಿರುದ್ಧ ೧೧ ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಬಿಜೆಪಿ ಸ್ಟ್ರಾಂಗ್:ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಚುನಾವಣೆಯಲ್ಲಿ ಗುಂಡ್ಲುಪೇಟೆ ಹೊರತು ಪಡಿಸಿ ಕೊಳ್ಳೇಗಾಲ-ಹನೂರು, ಚಾಮರಾಜನಗರ ಕ್ಷೇತ್ರದಲ್ಲಿ ಶಾಸಕ, ಮಾಜಿ ಶಾಸಕರ ವಿರುದ್ಧ ಬಿಜೆಪಿ ಅಭ್ಯರ್ಥಿಗಳು ಸಮ ಬಲದ ಹೋರಾಟ ನೀಡುವ ಮೂಲಕ ಬಿಜೆಪಿ ಸ್ಟ್ರಾಂಗ್ ಆಗಿದೆ.