ಕನ್ನಡಪ್ರಭ ವಾರ್ತೆ ಆಲಮಟ್ಟಿ
ಮನವಿ ಸ್ವೀಕರಿಸಿದ ಎಂಡಿ ಮೋಹರಾಜ ಕೆ.ಪಿ. ಮಾತನಾಡಿ, ಕಳೆದ ವರ್ಷದಲ್ಲಿ ಕರೆಯಲಾದ ಎಲ್ಲ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕ ಕಾಯ್ದೆ ಅನುಸಾರ ಕ್ರಮಕೈಗೊಂಡು ಕಾಮಗಾರಿಗಳ ಬಿಡ್‌ನಲ್ಲಿ ಭಾಗವಹಿಸಿದ ಗುತ್ತಿಗೆದಾರರ ಮುಂಗಡ ಹಣವನ್ನುಆಯಾ ಗುತ್ತಿಗೆದಾರರಿಗೆ ಮರಳಿಸಲಾಗಿದೆ. ಕಾಲುವೆಗಳ ದುರಸ್ತಿ, ನೂತನ ಮುಖ್ಯ ಕಾಲುವೆ, ವಿತರಣಾ ಕಾಲುವೆ, ಸೀಳು ಕಾಲುವೆ, ಉಪಕಾಲುವೆಗಳ ನಿರ್ಮಾಣ ಕಾಮಗಾರಿಗಳನ್ನು ಪ್ಯಾಕೇಜ್ ಪದ್ಧತಿಗೆ ಅಳವಡಿಸದೆ ವಿಂಗಡಣೆ ಮಾಡಿ ಟೆಂಡರ್ ಕರೆಯುವುದು ಸೇರಿದಂತೆ ಇತರೆ ಎಲ್ಲ ಬೇಡಿಕೆಗಳನ್ನು ಕಾನೂನು ಚೌಕಟ್ಟಿನಲ್ಲಿ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಧ್ಯಕ್ಷ ಎಂ.ಎ.ಮೇಟಿ, ಉಪಾಧ್ಯಕ್ಷ ಎಸ್.ಎಸ್.ಗದಿಗೆಪ್ಪಗೌಡರ, ಕಾರ್ಯದರ್ಶಿ ವೈ.ವೈ.ಬಿರಾದಾರ, ಪ್ರಧಾನ ಕಾರ್ಯದರ್ಶಿ ವೆಂಕಟೇಶ ನಾಯಕ, ಖಜಾಂಚಿ ಬಸವರಾಜ ದಂಡಿನ, ಗೋಪಾಲ ಬಂಡಿವಡ್ಡರ, ಮಹಾಂತೇಶ ಡೆಂಗಿ. ಮಹಾಂತೇಶ ಬೆಳಗಲ್ಲ, ಬಸವರಾಜ ಬಿರಾದಾರ, ಸಂತೋಷ ಪಾಟೀಲ, ಮುತ್ತು ಕಿರಸೂರ, ಎಂ.ಡಿ.ಆಲಮಟ್ಟಿ, ಮಕಸೂದ ಮಕಾನದಾರ, ಬಿ.ಟಿ.ರಾಠೋಡ, ಹನುಮಂತ ಪೂಜಾರಿ, ಸಂತೋಷ ಲಮಾಣಿ, ಯಲ್ಲಪ್ಪ ನಾಗರಾಳ, ಸಿ.ಜಿ.ವಿಜಯಕರ, ವಿ.ಎಂ.ಹಿರೇಮಠ, ಜಕ್ಕಪ್ಪ ಮಾಗಿ, ಟಿ.ಎಸ್.ಅಫಜಲಪುರ, ಕೆ.ವಿ.ಶಿವಕುಮಾರ, ಬಸವರಾಜ ಬಾದರದಿನ್ನಿ ಇತರರಿದ್ದರು.