ಕನ್ನಡಪ್ರಭ ವಾರ್ತೆ ಮುನವಳ್ಳಿ ಜೀವನದ ಸಾರ್ಥಕತೆಗೆ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಮಠದ ಸಮಾಜದ ಕೀರ್ತಿ ಹೆಚ್ಚುತ್ತದೆ. ಶ್ರೀಗಳು ಕೇವಲ ಧಾರ್ಮಿಕ ಕೇಂದ್ರಗಳನ್ನು ಮುನ್ನಡೆಸುವುದಲ್ಲದೆ, ಸಾವಿರಾರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡುತ್ತಿದ್ದಾರೆ ಎಂದು ಮುರುಘೇಂದ್ರ ಶ್ರೀಗಳು ಹೇಳಿದರು
ಕನ್ನಡಪ್ರಭ ವಾರ್ತೆ ಮುನವಳ್ಳಿ
ಜೀವನದ ಸಾರ್ಥಕತೆಗೆ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಮಠದ ಸಮಾಜದ ಕೀರ್ತಿ ಹೆಚ್ಚುತ್ತದೆ. ಶ್ರೀಗಳು ಕೇವಲ ಧಾರ್ಮಿಕ ಕೇಂದ್ರಗಳನ್ನು ಮುನ್ನಡೆಸುವುದಲ್ಲದೆ, ಸಾವಿರಾರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡುತ್ತಿದ್ದಾರೆ ಎಂದು ಮುರುಘೇಂದ್ರ ಶ್ರೀಗಳು ಹೇಳಿದರು.ಪಟ್ಟಣದ ಸೋಮಶೇಖರ ಮಠದ ಸಭಾಭವನದಲ್ಲಿ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿ, ಭಕ್ತರ ಶ್ರೇಯೋಭಿವೃದ್ಧಿಯಲ್ಲಿ ಮಠದ ಅಭಿವೃದ್ದಿಯನ್ನು ಕಾಣುತ್ತೇನೆ. ಪಟ್ಟಣದ ಹಾಗೂ ಸುತ್ತಲಿನ ಗ್ರಾಮಗಳ ಭಕ್ತರ ವಿಶಾಲವಾದ ಗುಣದಿಂದ, ಗುರುಗಳನ್ನು ನೋಡುವದರಿಂದ ಸಮಾಜಕ್ಕೆ ಹೆಚ್ಚು ಸೇವೆ ಮಾಡಬೇಕು ಎಂದೆನಿಸುತ್ತದೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.