ಜವಳಿ ವಲಯದ ರಫ್ತು ಉತ್ತೇಜನಕ್ಕೆ ಕ್ರಮ: ಜಿಲ್ಲೆಯಲ್ಲಿ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆಗೆ ಸಿದ್ಧತೆ

KannadaprabhaNewsNetwork |  
Published : Nov 01, 2026, 03:15 AM IST
ಪೋಟೋ | Kannada Prabha

ಸಾರಾಂಶ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಜವಳಿ ಮತ್ತು ಕೈಮಗ್ಗ ಉದ್ಯಮ ಉತ್ತೇಜಿಸಿ, ಉತ್ಪಾದನೆ ಹಾಗೂ ರಫ್ತು ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಹಿರೇಗೌಜ, ಕಡೂರು ಮತ್ತು ತರೀಕೆರೆ ತಾಲೂಕಿನ ಸೌಧನಹಳ್ಳಿಯಲ್ಲಿ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪಿಸಲು ಕ್ರಮ ಕೈಗೊಳ್ಳ ಲಾಗುತ್ತಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಕೆ.ಎಸ್. ರವಿ ಪ್ರಸಾದ್ ತಿಳಿಸಿದರು.

ಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಕೆ.ಎಸ್. ರವಿ ಪ್ರಸಾದ್ ಮಾಹಿತಿ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಜಿಲ್ಲೆಯಲ್ಲಿ ಜವಳಿ ಮತ್ತು ಕೈಮಗ್ಗ ಉದ್ಯಮ ಉತ್ತೇಜಿಸಿ, ಉತ್ಪಾದನೆ ಹಾಗೂ ರಫ್ತು ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಹಿರೇಗೌಜ, ಕಡೂರು ಮತ್ತು ತರೀಕೆರೆ ತಾಲೂಕಿನ ಸೌಧನಹಳ್ಳಿಯಲ್ಲಿ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪಿಸಲು ಕ್ರಮ ಕೈಗೊಳ್ಳ ಲಾಗುತ್ತಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಕೆ.ಎಸ್. ರವಿ ಪ್ರಸಾದ್ ತಿಳಿಸಿದರು.ನಗರದ ಜಿಲ್ಲಾ ಕೈಗಾರಿಕಾ ಕೇಂದ್ರದ ಸಭಾಂಗಣದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಜಿಪಂ ಸಹಯೋಗದಲ್ಲಿ ಗುರುವಾರ ಜವಳಿ ವಲಯದ ರಫ್ತು ಉದ್ಯಮಿಗಳಿಗೆ ಆಯೋಜಿಸಿದ್ದ ಒಂದು ದಿನದ ರಫ್ತು ಪ್ರೋತ್ಸಾಹಧನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಬೆಂಗಳೂರು, ಹಾಸನ ಮತ್ತು ಮೈಸೂರು ಜಿಲ್ಲೆಗಳಿಗೆ ಹೋಲಿಸಿದರೆ ಚಿಕ್ಕಮಗಳೂರಿನಲ್ಲಿ ಜವಳಿ ಕೈಗಾರಿಕೆಗಳ ಸಂಖ್ಯೆ ಕಡಿಮೆಯಿದೆ. ನಗದಿಯಾಲ್ ಕಾವಲ್ ಕೈಗಾರಿಕಾ ಪ್ರದೇಶದಲ್ಲಿ ಮ್ಯಾಫ್ ಟೆಕ್ನಾಲಜೀಸ್ ಸೇರಿದಂತೆ ಹಲವು ಉದ್ಯಮ ಕಾರ್ಯನಿರ್ವಹಿಸುತ್ತಿದ್ದು, ಶೀಘ್ರ 7ರಿಂದ 8 ಸಣ್ಣ ಮತ್ತು ಸಿದ್ಧ ಉಡುಪು ಘಟಕಗಳು ಆರಂಭವಾಗಲಿವೆ. ಹಿರೇಗೌಜ ಮತ್ತು ಕಡೂರಿನಲ್ಲಿ ಟೆಕ್ಸ್‌ಟೈಲ್ ಪಾರ್ಕ್‌ಗಳ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗುತ್ತಿದೆ. ಸೌಧನಹಳ್ಳಿಯಲ್ಲಿ ಸುಮಾರು 20 ಎಕರೆ ಜಾಗದ ಹಂಚಿಕೆ ಕುರಿತು ಕಂದಾಯ ಅಧಿಕಾರಿಗಳ ವರದಿ ಪಡೆವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.ತುಮಕೂರು ಪೂರ್ವವಲಯ ಕೈಮಗ್ಗ ಮತ್ತು ಜವಳಿ ಇಲಾಖೆ ಜಂಟಿ ನಿರ್ದೇಶಕಿ ಡಿ. ಸುಮಲತಾ ಮಾತನಾಡಿ, 2030ರ ವೇಳೆಗೆ ದೇಶದ ಜವಳಿ ವಲಯದಲ್ಲಿ 100 ಬಿಲಿಯನ್ ಅಮೆರಿಕನ್ ಡಾಲರ್ ರಫ್ತು ಸಾಧಿಸುವ ಗುರಿ ಕೇಂದ್ರ ಸರ್ಕಾರ ಹೊಂದಿದೆ. ರಫ್ತು ಪ್ರಮಾಣದಲ್ಲಿ ಕರ್ನಾಟಕ 6ನೇ ಸ್ಥಾನದಲ್ಲಿದ್ದು, ಬೆಂಗಳೂರು ಪ್ರಮುಖ ಗಾರ್ಮೆಂಟ್ ಹಬ್ ಆಗಿದೆ. ಜಿಲ್ಲೆಗಳ ವಿಶಿಷ್ಟ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸುವ ಅಗತ್ಯವಿದೆ ಎಂದರು.ನೇಕಾರರು ತಯಾರಿಸುವ ಸೀರೆ, ಟವಲ್ ಸೇರಿದಂತೆ ಜವಳಿ ಉತ್ಪನ್ನಗಳಿಗೆ ಸೂಕ್ತ ಬ್ರ್ಯಾಂಡಿಂಗ್, ಲೇಬಲಿಂಗ್ ಮತ್ತು ಪ್ಯಾಕೇಜಿಂಗ್ ಮೂಲಕ ಮೌಲ್ಯವರ್ಧನೆ ಮಾಡಬೇಕು. ರಫ್ತಿಗೆ ಅಗತ್ಯ ಆಮದು-ರಫ್ತು (ಐಇಸಿ) ಕೋಡ್‌ನ್ನು ಡಿಜಿಎಫ್‌ಟಿ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಪಡೆಯಬಹುದು. ವಾಯು, ಸಮುದ್ರ ಹಾಗೂ ಅಂಚೆ ಮಾರ್ಗಗಳ ಮೂಲಕ ಸರಕು ರಫ್ತು ಮಾಡಬಹುದು ಎಂದು ವಿವರಿಸಿದರು.ವಿದೇಶಿ ಖರೀದಿದಾರರಿಂದ ಹಣ ಪಾವತಿಯಾಗದ ಅಪಾಯಕ್ಕೆ ಇಸಿಜಿಸಿ ಸೌಲಭ್ಯ ಹಾಗೂ ಸಾಗಣೆ ವೇಳೆ ಉಂಟಾಗುವ ನಷ್ಟಕ್ಕೆ ಮರೈನ್ ಇನ್ಶೂರೆನ್ಸ್ ನೆರವಾಗಲಿದೆ. ಸಣ್ಣ ಉದ್ಯಮಿಗಳು ಅಂಚೆ ಇಲಾಖೆ ಮೂಲಕ 20ರಿಂದ 100 ಕೆ.ಜಿ.ವರೆಗಿನ ಸರಕನ್ನು ವಿದೇಶಗಳಿಗೆ ಕಳುಹಿಸಬಹುದು. ರಫ್ತು ವೆಚ್ಚ ಮತ್ತು ತೆರಿಗೆ ಮರುಪಾವತಿ ಸೌಲಭ್ಯ ಬಳಸಬೇಕು ಎಂದು ತಿಳಿಸಿದರು.ಮಂಗಳೂರಿನ ಅಬ್ದುಲ್ ರೆಹಮಾನ್ ತಾಜುದ್ದೀನ್ ರಫ್ತು ಪ್ರಕ್ರಿಯೆ ಕುರಿತು ಉಪನ್ಯಾಸ ನೀಡಿದರು. ಜಿಪಂ ಗ್ರಾಮೀಣ ಕೈಗಾರಿಕಾ ಉಪನಿರ್ದೇಶಕ ಚಂದ್ರಶೇಖರ್ ಎಸ್., ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕ ಸ್ಯಾಮುವೆಲ್, ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಹೋಟೆಲ್‌ ಈಜು ಕೊಳದಲ್ಲಿ 2 ವಿದೇಶಿಗರ ಸಾವು
ಪ್ರಜ್ವಲ್‌ ಜೀವಾವಧಿಗೆ ಕಾರಣ ಆದ ಮೂವರಿಗೆ ಕೇಂದ್ರ ಗೃಹ ಪ್ರಶಸ್ತಿ