ಶಿಗ್ಗಾಂವಿ: ತಾಲೂಕಿನಲ್ಲಿ ಕೊರೋನಾ ಪ್ರಕರಣಗಳು ಕಂಡುಬಂದಿಲ್ಲದಿದ್ದರೂ ಮುನ್ನೆಚರಿಕೆ ಕ್ರಮವಾಗಿ ಚಿಕಿತ್ಸೆಗೆ ಅಗತ್ಯ ಸಿದ್ಧತೆ ಆರೋಗ್ಯ ಇಲಾಖೆಯು ಮಾಡಿಕೊಳ್ಳುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸತೀಶ ತಿಳಿಸಿದರು.
ಈಗಾಗಲೇ ತಾಲೂಕು ಆಸ್ಪತ್ರೆಯಲ್ಲಿ ಕೊರೋನಾ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗಿದೆ. ಮುಂಜಾಗ್ರತವಾಗಿ ಬೆಡ್‌ಗಳನ್ನು ಮೀಸಲಿರಿಸಲಾಗಿದೆ. ಸಾರ್ವಜನಿಕರು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಗೆಜ್ಲಿ ಮಾತನಾಡಿ, ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ತಾಲೂಕಿನ ಧುಂಡಸಿ, ಬಂಕಾಪುರ ಹಾಗೂ ಶಿಗ್ಗಾಂವಿ ಈ ಮೂರು ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಬಾರಕೇರ ಮಾತನಾಡಿ ೨೦೨೫- ೨೬ನೇ ಸಾಲಿನ ಶೈಕ್ಷಣಿಕ ವರ್ಷದ ಎಲ್‌ಕೆಜಿ, ಯುಕೆಜಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಒಟ್ಟು ೩೪,೮೨೫ ವಿದ್ಯಾರ್ಥಿಗಳಿದ್ದಾರೆ. ಉಚಿತ ಪಠ್ಯಪುಸ್ತಕ ವಿತರಣೆಗೆ ಸೂಕ್ತ ದಾಸ್ತಾನು ಮಾಡಲಾಗಿದ್ದು, ಸಾಕ್ಸ್, ಯುನಿಫಾರಂ ನೀಡಲು ಸರ್ಕಾರದ ಅನುದಾನ ಲಭ್ಯತೆಯಿಲ್ಲದ ಕಾರಣ ಕ್ರಮ ವಹಿಸಿಲ್ಲ ಎಂದರು.
ಸಭೆಯಲ್ಲಿ ತಹಸೀಲ್ದಾರ್ ರವಿಕುಮಾರ ಕೊರವರ, ತಾಪಂ ಕಾರ್ಯನಿವಾಹಕ ಅಧಿಕಾರಿ ಎಂ.ಎಸ್. ಸಾಳುಂಕೆ, ಸಹಾಯಕ ಯೋಜನಾ ನಿರ್ದೇಶಕ ಶಿವಾನಂದ ಸಣ್ಣಕ್ಕಿ, ವ್ಯವಸ್ಥಾಪಕ ಸುರೇಶ ತಗ್ಗಿಹಳ್ಳಿ, ರಾಯಪ್ಪ ನಾಗಪ್ಪನವರ ಇತರರು ಇದ್ದರು.ಮಂಜುನಾಥ ಚಲವಾದಿಗೆ ಡಾಕ್ಟರೇಟ್ಹಿರೇಕೆರೂರು: ಕವಿವಿಯ ಸಹಾಯಕ ಪ್ರಾಧ್ಯಾಪಕ ಡಾ. ನಿಂಗಪ್ಪ ಹಳ್ಳಿ ಅವರ ಮಾರ್ಗದರ್ಶನದಲ್ಲಿ ಹಾವೇರಿ ಜಿಲ್ಲೆಯ ದೊಡ್ಡಾಟಗಳು: ಸಾಂಸ್ಕೃತಿಕ ಅಧ್ಯಯನ ಎಂಬ ವಿಷಯ ಕುರಿತು ಮಹಾಪ್ರಬಂಧವನ್ನು ಮಂಡಿಸಿರುವ ಸಂಶೋಧಕ ಮಂಜುನಾಥ ಚಲವಾದಿ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದಿಂದ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ.ಮಂಜುನಾಥ ಚಲವಾದಿ ಅವರು ಹಾವೇರಿ ಜಿಲ್ಲೆಯ ದೊಡ್ಡಾಟ ಕಥೆಗಳ ಮಹತ್ವ, ಪ್ರಯೋಗಶೀಲತೆ ಭಾಷಿಕ ಅಧ್ಯಯನ, ಸಂಗೀತ, ಸಾಮಾಜಿಕ, ಕೌಟುಂಬಿಕ, ಧಾರ್ಮಿಕ ನೆಲೆಗಟ್ಟಿನಲ್ಲಿ ವಿಶ್ಲೇಷಿಸಿ ಪ್ರೌಢ ಮಹಾಪ್ರಬಂಧವನ್ನು ರಚಿಸಿದ್ದಾರೆ ಎಂದು ಮಾರ್ಗದರ್ಶಕ ಡಾ. ನಿಂಗಪ್ಪ ಹಳ್ಳಿ ಹರ್ಷ ವ್ಯಕ್ತಪಡಿಸಿದ್ದಾರೆ.