ಕೃಷಿಯಲ್ಲಿ ಯಾಂತ್ರಿಕರಣ ಅನಿವಾರ್ಯ: ಬಿ.ಬಿ. ನಿಂಗಯ್ಯ

KannadaprabhaNewsNetwork | Published : Dec 30, 2024 1:00 AM

ಸಾರಾಂಶ

ಮೂಡಿಗೆರೆ, ಪ್ರಸ್ತುತ ಕಾರ್ಮಿಕರ ಕೊರತೆ ಎದುರಿಸುತ್ತಿರುವ ಕೃಷಿಯನ್ನೆ ಕೈಬಿಡಲಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದೊಂದು ದಿನ ಬಾರಿ ಸಮಸ್ಯೆ ಎದುರಿಸಬೇಕಾಗುತ್ತದೆ. ಕಾರ್ಮಿಕರ ಕೊರತೆ ನೀಗಿಸಲು ಕೃಷಿ ಚಟುವಟಿಕೆಗಾಗಿ ಯಂತ್ರಗಳು ಬರುತ್ತಿವೆ. ರೈತರು ಮತ್ತು ಬೆಳೆಗಾರರು ಇದರ ಸದುಪಯೋಗ ಪಡೆಯಬೇಕು ಎಂದು ಮಾಜಿ ಸಚಿವ ಬಿ.ಬಿ. ನಿಂಗಯ್ಯ ಕರೆ ನೀಡಿದರು.

ಕೃಷಿ ಮತ್ತು ತೋಟಗಾರಿಕಾ ಮೇಳದ 2ನೇ ದಿನದ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ, ಮೂಡಿಗೆರೆ

ಪ್ರಸ್ತುತ ಕಾರ್ಮಿಕರ ಕೊರತೆ ಎದುರಿಸುತ್ತಿರುವ ಕೃಷಿಯನ್ನೆ ಕೈಬಿಡಲಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದೊಂದು ದಿನ ಬಾರಿ ಸಮಸ್ಯೆ ಎದುರಿಸಬೇಕಾಗುತ್ತದೆ. ಕಾರ್ಮಿಕರ ಕೊರತೆ ನೀಗಿಸಲು ಕೃಷಿ ಚಟುವಟಿಕೆಗಾಗಿ ಯಂತ್ರಗಳು ಬರುತ್ತಿವೆ. ರೈತರು ಮತ್ತು ಬೆಳೆಗಾರರು ಇದರ ಸದುಪಯೋಗ ಪಡೆಯಬೇಕು ಎಂದು ಮಾಜಿ ಸಚಿವ ಬಿ.ಬಿ. ನಿಂಗಯ್ಯ ಕರೆ ನೀಡಿದರು.

ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮತ್ತು ತೋಟಗಾರಿಕಾ ಮೇಳದ 2ನೇ ದಿನದ ಕಾರ್ಯಾಗಾರದಲ್ಲಿ ಡ್ರೋನ್ ಆವಿಷ್ಕಾರದ ಔಷಧಿ ಸಿಂಪಡಣೆ ಮೂಲಕ ಚಾಲನೆ ನೀಡಿ ಮಾತನಾಡಿದರು. ದ್ರೋಣ್ ಮೂಲಕ ತೆಂಗು, ಅಡಕೆ, ಮೆಣಸು ಸೇರಿದಂತೆ ವಿವಿಧ ಕೃಷಿಗಳಿಗೆ ಸರಾಗವಾಗಿ ಔಷಧಿ ಸಿಂಪಡಿಸಬಹುದು. ಒಂದು ಗಂಟೆಗೆ ಐದು ಎಕರೆ ಜಮೀನಿನಲ್ಲಿ ಔಷಧಿ ಸಿಂಪಡಣೆ ಮಾಡುವ ಸಾರ್ಮಥ್ಯ ಹೊಂದಿದ್ದು ಹತ್ತಾರು ಜನರು ಮಾಡುವ ಕೆಲಸವನ್ನು ಡ್ರೋಣ್‌ ಒಂದೇ ಮಾಡುತ್ತದೆ ಎಂದರು.

ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ. ಮೋಹನ್ ಕುಮಾರ್ ಮಾತನಾಡಿ, ವಿಜ್ಞಾನಿಗಳು ಏನು ಸಂಶೋಧನೆ ಮಾಡುತ್ತಾರೋ ಅದನ್ನು ರೈತರು ಕ್ರಮವಾಗಿ ಅವರ ಸಲಹೆಯಂತೆ ಬೆಳೆಸಿದಲ್ಲಿ ಹೆಚ್ಚಿನ ಆದಾಯ ಪಡೆಯಬಹುದು ಎಂದು ಹೇಳಿದರು.

ವಿಜ್ಞಾನಿ ಡಾ.ಚಂದ್ರೇಗೌಡ ಮಾತನಾಡಿ, ರೈತರಿಗೆ ಮಾಹಿತಿ ಕೊಡುವ ಸಲುವಾಗಿ ಕೃಷಿ ಮತ್ತು ತೋಟಗಾರಿಕೆ ಮೇಳ ಹಮ್ಮಿಕೊಂಡಿದ್ದು ಇದರಿಂದ ಹಲವು ರೈತರು ಮಾಹಿತಿ ಪಡೆದು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ತೋಟಗಾರಿಕೆ ವಿದ್ಯಾಲಯದ ಮುಖ್ಯಸ್ಥ ಡಾ. ಎ.ಟಿ. ಕೃಷ್ಣಮೂರ್ತಿ, ಕೇಂದ್ರದ ಹಿರಿಯ ಕ್ಷೇತ್ರಾಧಿಕ್ಷಕಿ ಡಾ. ಸಿ.ಕೆ.ಪ್ರಮಿಳಾ, ಡಾ. ಎ.ವಿ.ಸ್ವಾಮಿ, ಗಣೇಶ್‌ ಉಪಸ್ಥಿತರಿದ್ದರು. 29 ಕೆಸಿಕೆಎಂ 4ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮತ್ತು ತೋಟಗಾರಿಕಾ ಮೇಳದಲ್ಲಿ ಮಾಜಿ ಸಚಿವ ಬಿ.ಬಿ. ನಿಂಗಯ್ಯ ಡ್ರೋಣ್‌ ಮೂಲಕ ಔಷಧಿ ಸಿಂಪಡಣೆ ಮಾಡುವುದಕ್ಕೆ ಚಾಲನೆ ನೀಡಿದರು.

Share this article