ಕನ್ನಡಪ್ರಭ ವಾರ್ತೆ, ತುಮಕೂರು
ಈ ಸಂದರ್ಭದಲ್ಲಿ ಮಾತನಾಡಿದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಕೌಶಲಗಳೇ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಕಾಲವಿದು. ಪತ್ರಿಕೋದ್ಯಮ ವಿಭಾಗ ಹಮ್ಮಿಕೊಂಡಿರುವ ಮಾಧ್ಯಮ ಹಬ್ಬವು ಯುವಜನರನ್ನು ಭವಿಷ್ಯದ ಸ್ಪರ್ಧಾತ್ಮಕ ಜಗತ್ತಿಗೆ ಸಿದ್ಧಪಡಿಸುವಲ್ಲಿ ಉತ್ತಮ ವೇದಿಕೆಯಾಗಲಿ ಎಂದು ಹಾರೈಸಿದರು.
ವಿಭಾಗದ ಸಂಯೋಜಕ ಡಾ. ಸಿಬಂತಿ ಪದ್ಮನಾಭ ಕೆ. ವಿ. ಮಾತನಾಡಿ, ಮಾಧ್ಯಮ ಹಬ್ಬವು ವಿದ್ಯಾರ್ಥಿಗಳ ಪ್ರತಿಭಾಪ್ರದರ್ಶನಕ್ಕೆ ಉತ್ತಮ ಅವಕಾಶ ಒದಗಿಸಲಿದೆ. ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳ ಹಾಗೂ ಕಾಲೇಜುಗಳ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಮಾಧ್ಯಮ ಹಬ್ಬದ ಅಂಗವಾಗಿ ವರದಿಗಾರಿಕೆ, ಟಿವಿ ಸುದ್ದಿ ಪ್ರಸ್ತುತಿ, ರೇಡಿಯೋ ಜಾಕಿ, ಛಾಯಾಗ್ರಹಣ, ಪೋಸ್ಟರ್ ವಿನ್ಯಾಸ, ಪುಟ್ಟಕಥೆ, ರೀಲ್ಸ್ ತಯಾರಿ, ಪೀಸ್ ಟು ಕ್ಯಾಮರಾ, ಚರ್ಚಾಸ್ಪರ್ಧೆ, ರಸಪ್ರಶ್ನೆ, ಜಾಹೀರಾತು ನಿರ್ಮಾಣ, ಸಮೂಹನೃತ್ಯ ಸ್ಪರ್ಧೆಗಳು ನಡೆಯಲಿದ್ದು, ಬಹುಮಾನ ವಿಜೇತ ವಿದ್ಯಾರ್ಥಿಗಳು ಆಕರ್ಷಕ ನಗದು ಬಹುಮಾನ ಪಡೆಯಲಿದ್ದಾರೆ.ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಉಪನ್ಯಾಸಕರಾದ ಡಾ. ಪೃಥ್ವಿರಾಜ ಟಿ., ವಿನಯ್ ಕುಮಾರ್ ಎಸ್.ಎಸ್., ಡಾ. ಜಿ. ಗಿರಿಜಮ್ಮ, ಹರೀಶ್ ಕುಮಾರ್ ಬಿ.ಸಿ., ಕಮಲಮ್ಮ ಎಸ್., ವಿಶಾಲ್ ಮಯೂರ್ ಹಾಗೂ ಚನ್ನಬಸವ ಎಂ. ಪೋಸ್ಟರ್ ಬಿಡುಗಡೆ ಸಂದರ್ಭ ಉಪಸ್ಥಿತರಿದ್ದರು.