ಕಲಬುರಗಿ: ಜೇವರ್ಗಿ ತಾಲೂಕಿನ ಗ್ರಾಮದಲ್ಲಿನ ನಕಲಿ ವೈದ್ಯರ ಕ್ಲಿನಿಕ್ ಗಳ ಮೇಲೆ ದಾಳಿ ನಡೆಸಿ ಅವುಗಳನ್ನು ಬಂದ್ ಮಾಡಲು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ, ಜೇವರ್ಗಿ ತಾಲೂಕ ಆರೋಗ್ಯ ಅಧಿಕಾರಿ ಡಾ. ಉಮೇಶ ಶರ್ಮಾ, ಜಂಟಿಯಾಗಿ ತಂಡದೊಂದಿಗೆ ನಕಲಿ ವೈದ್ಯರ ಕ್ಲಿನಿಕ್ ಗಳ ಮೇಲೆ ದಿಢೀರ್ ದಾಳಿ ನಡೆಸಿದರು.
ನೆಲೋಗಿ, ಸೊನ್ನ ಕ್ರಾಸ್ ಕ್ಲಿನಿಕ್ ಗಳನ್ನು ಸಹ ಮುಚ್ಚಿಸಿ ಸೂಕ್ತವ ಕ್ರಮ ಕೈಗೊಳ್ಳಬೇಕೆಂದರು.
ಇದೇ ಸಂದರ್ಭದಲ್ಲಿ ನೆಲೋಗಿ ಸಮುದಾಯದ ಆರೋಗ್ಯ ಕೇಂದ್ರದ ಆಡಳಿತ ವೈದ್ಯಧಿಕಾರಿಗಳು ಡಾ. ಬಸವರಾಜ ಕವಲಗ, ವಿಷಯ ನಿರ್ವಾಹಕರಾದ ಆಕಾಶ ರೆಡ್ಡಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶಾಮರಾವ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಇನ್ನಿತರರು ದಾಳಿ ವೇಳೆ ಇದ್ದರು.