ಹೂವಿನಹಡಗಲಿ: ವೈದ್ಯರ ವೃತ್ತಿ ಪವಿತ್ರವಾದದ್ದು. ಸ್ವಾಸ್ಥ್ಯ ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ವೈದ್ಯರು ನಿರಂತರವಾಗಿ ಶ್ರಮಿಸುತ್ತಿದ್ದಾರೆಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ.ವೀರಭದ್ರಪ್ಪ ವಿ.ಚಿನಿವಾಲರ್ ಹೇಳಿದರು.
ಡಾ.ಮಧುಸೂಧನ್ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಸುವವರಿಗೆ ಒತ್ತಡ ಸಹಜಯೇ ಇರುತ್ತದೆ. ದೈಹಿಕ ಆರೋಗ್ಯದ ಬಗ್ಗೆ ಗಮನ ಹರಿಸಬೇಕಿದೆ ಎಂದರು.
ಹರಪನಹಳ್ಳಿಯ ವೈದ್ಯ ಡಾ.ಜಿ.ವಿ.ಹರ್ಷ ಮಾತನಾಡಿ, ವೈದ್ಯಕೀಯ ಸಂಘ ಸಂಸ್ಥೆಗಳು ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಡಾ.ಬಿ.ಶಿವಕುಮಾರ್, ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ನೂತನ ಅಧ್ಯಕ್ಷ ಲೈಫ್ ಲೈನ್ ಆಸ್ಪತ್ರೆ ವೈದ್ಯ ಡಾ.ಎಚ್.ಎಂ.ವೀರೇಶ್, ತಾಲೂಕಿನ ಎಲ್ಲಾ ವೈದ್ಯರ ಸಹಕಾರದಿಂದ ವಿನೂತನ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗುವುದಾಗಿ ಹೇಳಿದರು.
ನೂತನ ಕಾರ್ಯದರ್ಶಿ ಡಾ.ನಿಖಿಲ್ ಕೆ, ಡಾ.ಆನಂದ್ ಪಿ ಎಂ, ಎಎಫ್ಐ ಅಧ್ಯಕ್ಷ ಡಾ.ಪ್ರಕಾಶ್ ಅಟವಾಳಗಿ, ನಾಗರಾಜ್ ಜಿ ಪಿ ಇತರರಿದ್ದರು.ತಾಲೂಕಿನ ಹಿರಿಯ ವೈದ್ಯರಾದ ಡಾ.ಧರ್ಮಣ್ಣ ಮಾದನೂರು, ಡಾ. ಮಲ್ಲಿಕಾರ್ಜುನ ಕೆ, ಡಾ.ಜಂಬಣ್ಣ ಯಲಗಚ್ಚಿನ, ಡಾ.ಬಿ.ಟಿ.ಫಣಿರಾಜ್ ರವರನ್ನು ಸನ್ಮಾನಿಸಲಾಯಿತು.
ಡಾ.ರೇಖಾ ಕೆ, ಡಾ.ಸೋಮಶೇಖರ್ ಎಂ.ಕೆ, ಡಾ.ಜೆ.ಡಿ.ಉಮೇಶ್, ಡಾ. ನಿಖಿಲ್ ಕೆ ನಿರ್ವಹಿಸಿದರು.ಭಾರತೀಯ ವೈದ್ಯಕೀಯ ಸಂಘದ ಸದಸ್ಯರು ಇತರರು ಭಾಗವಹಿಸಿದ್ದರು.