ಶಿವಮೊಗ್ಗ: ನಮ್ಮ ದೈನಂದಿನ ಜೀವನದ ಒತ್ತಡದಿಂದ ಹೊರಬರಲು ಧ್ಯಾನ ಸಹಕಾರಿಯಾಗುತ್ತದೆ. ಒತ್ತಡ ನಿರ್ವಹಣೆ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಶ್ರೀ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದ ಸಹಯೋಗದೊಂದಿಗೆ ಸಂಘದ ಶಾಂತಲಾ ಸ್ಪೇರೋಕಾಸ್ಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಧ್ಯಾನ, ಒತ್ತಡ ನಿರ್ವಹಣೆ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಾಗಾರದಲ್ಲಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿ ರವಿಶಂಕರ್ ಗುರೂಜಿ ಅವರ ಆಪ್ತ ಸಹಾಯಕ ಕೃಷ್ಣ.ಜಿ ಮಾತನಾಡಿ, ಧ್ಯಾನ, ಪ್ರಾಣಯಾಮ, ಲಯಬದ್ಧ ಉಸಿರಾಟದಿಂದ ಒತ್ತಡ ನಿರ್ವಹಣೆಯನ್ನು ಹೇಗೆ ಮಾಡಿಕೊಳ್ಳಬೇಕು ಹಾಗೂ ತಮ್ಮ ಮಾನಸಿಕ ಆರೋಗ್ಯವನ್ನು ಹೇಗೆ ಸಮತೋಲನದಿಂದ ನಿರ್ವಹಣೆ ಮಾಡಿಕೊಳ್ಳಬೇಕು ಎಂಬುದನ್ನು ಚಟುವಟಿಕೆಗಳ ಮೂಲಕ ವಿವರಣೆ ನೀಡಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ, ಪ್ರೋಗ್ರಾಮ್ ಕಮಿಟಿ ಚೇರ್ಮನ್ ಸಿ.ಎ.ಶರತ್, ಎಸ್.ಎಸ್.ಉದಯ್ ಕುಮಾರ್, ಕೆ.ಎನ್.ರಾಜಶೇಖರ್, ರವಿಪ್ರಕಾಶ್ ಜನ್ನಿ, ಲಕ್ಷ್ಮೀ ಗೋಪಿನಾಥ್, ಮಾಜಿ ಅಧ್ಯಕ್ಷ ಅಶ್ವಥ್ ನಾರಾಯಣ ಶೆಟ್ಟಿ, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ರಾಜ್ಯ ಶಿಕ್ಷಕ ಸಂಯೋಜಕ ಬಿ.ಮೂರ್ತಿ, ಆರ್ಟ್ ಆಫ್ ಲಿವಿಂಗ್ ಶಿಕ್ಷಕ ಪ್ರಶಾಂತ್ ಪೈ, ಆರ್ಟ್ ಆಫ್ ಲಿವಿಂಗ್ ಶಿಕ್ಷಕ ಪ್ರಕಾಶ ಮತ್ತಿತರರಿದ್ದರು.