ಗಂಗಾವತಿ:
ಕೇಂದ್ರ ಸರ್ಕಾರದ ಕಾರ್ಮಿಕ, ರೈತ ವಿರೋಧಿ ನೀತಿ ಖಂಡಿಸಿ ವಿವಿಧ ಸಂಘಟನೆಯ ಪದಾಧಿಕಾರಿಗಳು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.ಕಾರ್ಮಿಕ ಸಂಘಟನೆ ಜಂಟಿ ಸಮಿತಿಯ 1000ಕ್ಕೂ ಹೆಚ್ಚು ಕಾರ್ಯಕರ್ತರು ನಗರದ ಶ್ರೀಚೆನ್ನಬಸವಸ್ವಾಮಿ ವೃತ್ತದಿಂದ ಶ್ರೀಕೃಷ್ಣದೇವರಾಯ ವೃತ್ತದ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ಮೊದಲು ಸಿಬಿಎಸ್ ವೃತ್ತದಲ್ಲಿ ರಸ್ತೆ ತಡೆ ನಡೆಸಲು ನಿರ್ಧರಿಸಿದರು. ಆದರೆ, ಪೊಲೀಸರು ಅವಕಾಶ ನೀಡದ ಕಾರಣ ಪೊಲೀಸ್ ಠಾಣೆಯ ಸಮುಚ್ಚಯ ಮುಂಭಾಗದಲ್ಲಿ ಕುಳಿತು ಧರಣಿ ನಡೆಸಿದರು.
ಈ ವೇಳೆ ಮಾತನಾಡಿದ ಸಂಘಟನೆ ಮುಖಂಡ ನಿರುಪಾದಿ ಬೆಣಕಲ್, ಕೇಂದ್ರ ಸರ್ಕಾರ ಕಾರ್ಮಿಕ ಮತ್ತು ರೈತ ವಿರೋಧಿಯಾಗಿದೆ. ಕೂಡಲೆ ಕಾರ್ಮಿಕರ ಬೇಡಿಕೆ ಈಡೇರಿಸ ಬೇಕೆಂದು ಆಗ್ರಹಿಸಿದರು. ಈ ವೇಳೆ ಮಂಟನಗೌಡ, ಬಸವರಾಜ ಮರಕುಂಬಿ, ಗ್ಯಾನೇಶ ಕಡಗದ, ಮರಿನಾಗಪ್ಪ, ಶಿವಮ್ಮ, ಲಕ್ಷ್ಮೀದೇವಿ, ದುರಗಮ್ಮ, ಹುಲಿಗೆಮ್ಮ ಅನುಸೂಯ, ಮಂಜುನಾಥ ಡಗ್ಗಿ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.ಎಐಸಿಸಿಟಿಯು ಪ್ರತಿಭಟನೆ:
ಎಐಸಿಸಿಟಿಯು ಪದಾಧಿಕಾರಿಗಳಿಂದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಪ್ರಮುಖ ಬೇಡಿಕೆಗಳಾದ ಕಾರ್ಮಿಕ ವಿರೋಧಿ 4 ಸಂಹಿತೆ ತಕ್ಷಣವೇ ನಿಲ್ಲಿಸಬೇಕು, ಖಾಸಗೀಕರಣ ನಿಲ್ಲಿಸಿ ರಾಷ್ಟ್ರೀಯ ಸಂಪತ್ತು ಮತ್ತು ಮೂಲಸೌಕರ್ಯಗಳ ಮಾರಾಟ ನಿಲ್ಲಿಸಿ ರಾಷ್ಟ್ರೀಯ ನಗದೀಕರಣ ಯೋಜನೆ (ಎನ್‌ಎಂಪಿ) ಯನ್ನು ರದ್ದುಪಡಿಸಿ ವಿದ್ಯುತ್ ಬಿಲ್ ಹಿಂಪಡೆದು ಸ್ಮಾರ್ಟ್ ಫ್ರೀ ಪೇಡ್ ವಿದ್ಯುತ್ ಮೀಟರ್ ಯೋಜನೆ ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.ಈ ವೇಳೆ ಸಣ್ಣ ಹನುಮಂತಪ್ಪ ಹುಲಿಹೈದರ್, ಬುರಾನ್ನುದ್ದೀನ್, ಅಬ್ದುಲ್, ಗೌಸ್ ಪಾಷಾ, ಪರುಶುರಾಮ, ಕೇಶವ ನಾಯ್ಕ್, ಬಾಬರ್, ರಮೇಶ ಕೆ, ಮಾಯಮ್ಮ, ಪಾರ್ವತಮ್ಮ, ದ್ಯಾವಮ್ಮ, ರೇಣುಕಮ್ಮ ತಾವರಗೇರಾ, ದ್ಯಾವಮ್ಮ, ರೇಣುಕಮ್ಮ, ಇಂದ್ರಮ್ಮ, ಅಯ್ಯಮ್ಮ, ಲಕ್ಷ್ಮಮ್ಮ, ನಜೀರ್ ಸಾಬ್, ರೇಣುಕಮ್ಮ ಚಳಿಗೇರಿ ಭಾಗವಹಿಸಿದ್ದರು.