ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಹೊಸಕೋಟೆ ಹಾಗೂ ಮೇನಾಗರ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ 90 ಲಕ್ಷ ರು. ವೆಚ್ಚದಲ್ಲಿ ಪೈಪ್‌ಲೈನ್ ಅಳವಡಿಕೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಈ ಯೋಜನೆಯಿಂದ ಮನೆಮನೆಗಳಿಗೆ ಕಾವೇರಿ ನೀರು ಪೂರೈಕೆ ಮಾಡುವುದಕ್ಕೆ ಅನುಕೂಲವಾಗಿದೆ. ಎಲ್ಲ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಗಣಿಗಾರಿಕೆ ಕುರಿತು ನಡೆಯುವ ಸಭೆಯಲ್ಲಿ ರೈತಸಂಘ ಮುಖಂಡರು, ಕಾರ್‍ಯಕರ್ತರು ಸೇರಿದಂತೆ ಎಲ್ಲರು ಸೇರಿ ಬೇಬಿಬೆಟ್ಟದ ಭಾಗದಲ್ಲಿ ಕೈಕುಳಿ ಕೆಲಸಗಾರರಿಗೆ ಯಾವ ರೀತಿ ಅನುಕೂಲ ಮಾಡಿಕೊಡಬೇಕು ಎನ್ನುವ ಬಗ್ಗೆ ಚರ್ಚಿಸಲಾಗುವುದು ಎಂದರು.8 ಪಂಚಾಯ್ತಿಯ ಜನರು ಗಣಿಗಾರಿಕೆ ವೃತ್ತಿ ಮೇಲೆಯೇ ಆಧಾರಿತವಾಗಿರುವುದಿಂದ ಅದಕ್ಕೆ ನಾವು ಯಾವರೀತಿ ಕ್ರಮವಹಿಸಿ ಆ ಭಾಗದ ಜನರಿಗೆ ಯಾವ ರೀತಿ ನ್ಯಾಯ ಒದಗಿಸಿಕೊಡಬೇಕು ಎನ್ನುವುದನ್ನು ಕುಳಿತು ಚರ್ಚಿಸುತ್ತೇವೆ ಎಂದರು.
ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದ ಯೋಜನೆಗಳು ಕ್ಷೇತ್ರಕ್ಕೆ ಮಂಜೂರಾಗಿಲ್ಲದೆ ಇದ್ದರೂ ಜಿಲ್ಲೆಗೆ ಮಂಜೂರಾಗಿರುವ ಕಂದಾಯ, ಕೃಷಿ, ನೀರಾವರಿ ಯೋಜನೆಗಳಲ್ಲಿ ಕ್ಷೇತ್ರವೂ ಸಾಕಷ್ಟು ಅನುದಾನ ಬಂದಿದೆ. ಬಜೆಟ್‌ನಲ್ಲಿ ನೀರಾವರಿ, ಕೃಷಿ ಕ್ಷೇತ್ರಕ್ಕೆ ಒತ್ತು ನೀಡಿರುವುದರಿಂದ ನಮಗೂ ಸಾಕಷ್ಟು ಅನುಕೂಲವಾಗಲಿದೆ. ಕೃಷಿಗೆ ಪೂಕರವಾದ ಹಲವು ಯೋಜನೆಗಳಿಂದ ರೈತರಿಗೆ ಅನುಕೂಲವಾಗಲಿದೆ ಎಂದರು.