ಕಾಡಾನೆ ಸಮಸ್ಯೆ ಕುರಿತು ಬುಧವಾರ ಅರಣ್ಯ ಸಚಿವರ ಸಭೆ

KannadaprabhaNewsNetwork |  
Published : Nov 22, 2026, 01:30 AM IST
21ಎಚ್ಎಸ್ಎನ್3 : ಬಿಕ್ಕೋಡಿನ ತಾತ್ಕಾಲಿಕ ಆನೆ ಶಿಬಿರದಲ್ಲಿ ಶನಿವಾರಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಉಪಹಾರ ವಿತರಿಸಿ  ಶಾಸಕ ಎಚ್.ಕೆ.ಸುರೇಶ್ ಮಾತನಾಡಿದರು. | Kannada Prabha

ಸಾರಾಂಶ

ಕಾಡಾನೆಗಳಿಂದ ಸಂಭವಿಸುತ್ತಿರುವ ಪ್ರಾಣ ಹಾನಿ ಜೊತೆಗೆ ಬೆಳೆನಾಶ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರ ಉಪಟಳ ನೀಡುತ್ತಿರುವ ಆನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಓಡಿಸುವ ಯೋಜನೆ ರೂಪಿಸಲಾಗಿದ್ದು ಅರಣ್ಯ ಮಂತ್ರಿಗಳು ಬುಧವಾರ ಕರೆದಿರುವ ಸಭೆಯಲ್ಲಿ ತಾವು ಭಾಗವಹಿಸಿ ಸಲಹೆ ಸೂಚನೆ ನೀಡುವುದಾಗಿ ಶಾಸಕ ಎಚ್. ಕೆ. ಸುರೇಶ್ ಹೇಳಿದರು. ಕಾರ್ಯಾಚರಣೆ ಸಂದರ್ಭ ನಾನು ಅಧಿಕಾರಿಗಳು ಮತ್ತು ಸಿಬ್ಬಂದಿ ಜೊತೆ ನಿಂತು ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡುತ್ತಿದ್ದೇನೆ ಎಂದರು. ನಾವು ಆನೆಗಳನ್ನು ಪ್ರೀತಿಸುತ್ತೇವೆ, ಅವುಗಳ ಸಂರಕ್ಷಣೆ ಮಾಡಿ. ಆದರೆ ನಮ್ಮ ಜನರ ಬದುಕು ಅಸ್ತವ್ಯಸ್ತವಾಗದಂತೆ ನೆಮ್ಮದಿಯಿಂದ ಇರುವಂತೆ ಮಾಡಬೇಕು. ಇದೇ ನಮ್ಮ ಆಗ್ರಹವಾಗಿದೆ.

ಕನ್ನಡಪ್ರಭ ವಾರ್ತೆ ಬೇಲೂರು ಕಾಡಾನೆಗಳಿಂದ ಸಂಭವಿಸುತ್ತಿರುವ ಪ್ರಾಣ ಹಾನಿ ಜೊತೆಗೆ ಬೆಳೆನಾಶ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರ ಉಪಟಳ ನೀಡುತ್ತಿರುವ ಆನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಓಡಿಸುವ ಯೋಜನೆ ರೂಪಿಸಲಾಗಿದ್ದು ಅರಣ್ಯ ಮಂತ್ರಿಗಳು ಬುಧವಾರ ಕರೆದಿರುವ ಸಭೆಯಲ್ಲಿ ತಾವು ಭಾಗವಹಿಸಿ ಸಲಹೆ ಸೂಚನೆ ನೀಡುವುದಾಗಿ ಶಾಸಕ ಎಚ್. ಕೆ. ಸುರೇಶ್ ಹೇಳಿದರು.ಬಿಕ್ಕೋಡಿನ ತಾತ್ಕಾಲಿಕ ಆನೆ ಶಿಬಿರದಲ್ಲಿ ಶನಿವಾರ ಅರಣ್ಯ ಇಲಾಖೆ ಸಿಬ್ಬಂದಿಗೆ ಉಪಹಾರ ವಿತರಿಸಿ ಅವರು ಮಾತನಾಡಿದರು, ಕಳೆದ ವಾರ ಮೂರು ದಿನಗಳ ಅವಧಿಯಲ್ಲಿ ಇಬ್ಬರನ್ನು ಬಲಿ ಪಡೆದ 2 ಆನೆಗಳನ್ನು ಸೆರೆ ಹಿಡಿಯಲಾಗಿದ್ದು ತಾಲೂಕಿನಲ್ಲಿ ಇನ್ನೂ ಸುಮಾರು 54 ಆನೆಗಳಿದ್ದು, ಇದರಲ್ಲಿ ಸುಮಾರು 36 ಆನೆಗಳನ್ನು ಈಗಾಗಲೇ ಕೋಗೋಡು ಅರಣ್ಯ ಪ್ರದೇಶಕ್ಕೆ ಓಡಿಸಲಾಗಿದೆ. ಆನೆಗಳು ಆಸ್ತಿ ಕೇಳಲ್ಲ, ಅಂತಸ್ತು ಕೇಳಲ್ಲ. ಮನುಷ್ಯರಾದ ನಮಗೆ ಆಸ್ತಿ ಬೇಕು. ಆನೆಗಳು ಕೇಳುವುದು ಎರಡೇ ಎರಡು - ಕುಡಿಯಲು ನೀರು ಮತ್ತು ತಿನ್ನಲು ಆಹಾರ. ಇಂದು ಇಡೀ ಅರಣ್ಯ ಪ್ರದೇಶದಲ್ಲಿ ಆನೆ ತಿನ್ನಲು ಆಹಾರವೇ ಇಲ್ಲ. ಅದಕ್ಕಾಗಿ ರೈತರು ಬೆಳೆದ ಬೆಳೆಗಳನ್ನು ತಿನ್ನಲು ಬರುತ್ತಿವೆ . ಇವುಗಳನ್ನು ಶನಿವಾರ ಭದ್ರಾ ಅಭಯಾರಣ್ಯಕ್ಕೆ ಓಡಿಸಲು ಯೋಜನೆ ರೂಪಿಸಲಾಗಿದೆ. ಭದ್ರ ಅಭಯಾರಣ್ಯ ಒಂದು ಲಕ್ಷದ, 25. ಸಾವಿರ ಎಕರೆ ವಿಸ್ತೀರ್ಣ ಹೊಂದಿದ್ದು ಅಲ್ಲಿನ ಜನರಿಗೆ ತೊಂದರೆಯಾಗುವುದಿಲ್ಲ. ಸುಮಾರು 12 ಆನೆಗಳು ಹುಸ್ಕೂರು ಗ್ರಾಮದಲ್ಲಿದ್ದು, ಅವುಗಳನ್ನು ಓಡಿಸಲು ಸಹ ಕಾರ್ಯಾಚರಣೆ ನಡೆಸಲಾಗುವುದು. ಕಾರ್ಯಾಚರಣೆ ಸಂದರ್ಭ ನಾನು ಅಧಿಕಾರಿಗಳು ಮತ್ತು ಸಿಬ್ಬಂದಿ ಜೊತೆ ನಿಂತು ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡುತ್ತಿದ್ದೇನೆ ಎಂದರು. ನಾವು ಆನೆಗಳನ್ನು ಪ್ರೀತಿಸುತ್ತೇವೆ, ಅವುಗಳ ಸಂರಕ್ಷಣೆ ಮಾಡಿ. ಆದರೆ ನಮ್ಮ ಜನರ ಬದುಕು ಅಸ್ತವ್ಯಸ್ತವಾಗದಂತೆ ನೆಮ್ಮದಿಯಿಂದ ಇರುವಂತೆ ಮಾಡಬೇಕು. ಇದೇ ನಮ್ಮ ಆಗ್ರಹವಾಗಿದೆ.ಕಾಫಿ ಬೆಳೆಗಾರರು, ರೈತರು, ಸಾರ್ವಜನಿಕರ ಜೊತೆ ನಾವುಗಳಿದ್ಧೆವೆ ಸರ್ಕಾರ ಈ ಕಾರ್ಯಚರಣೆಗೆ ಆದೇಶ ನಿಡಿದ್ದು, ಕಾರ್ಯಾಚರಣೆ ಯಶಸ್ವಿಯಾಗುತ್ತದೆ ಆತಂಕ ಪಡಬೇಡಿ ಎಂದು ಭರವಸೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಹಿತ್ಯ ಸಮ್ಮೇಳನಗಳು ಚಿಂತನಾ ವೇದಿಕೆಗಳಾಗಲಿ ಡಾ. ಶರಣಬಸಪ್ಪ ಕೋಲ್ಕಾರ್
ಕೊಪ್ಪಳ ಜಿಲ್ಲಾ ೧೫ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿಧ್ಯುಕ್ತ ಚಾಲನೆ