ಉಚಿತ ಆರೋಗ್ಯ ಶಿಬಿರಗಳನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಿ - ನಗರಪಾಲಿಕೆ ಮಾಜಿ ಸದಸ್ಯ ರವೀಂದ್ರ

KannadaprabhaNewsNetwork | Published : Feb 25, 2024 1:46 AM

ಸಾರಾಂಶ

ತ್ಯವಶ್ಯಕವಾಗಿರುವುದರಿಂದ ಶಿಬಿರಗಳನ್ನು ಎಲ್ಲ ಸ್ಥಳಗಳಲ್ಲೂ ಮಾಡಬೇಕು ಹಾಗೂ ಸರ್ಕಾರದ ಯೋಜನೆಗಳನ್ನು ಜನರು ತಮ್ಮ ಮನೆ ಬಾಗಿಲಿಗೆ ಬಂದಾಗ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂ

ಕನ್ನಡಪ್ರಭ ವಾರ್ತೆ ಮೈಸೂರು ಸಂಘ ಸಂಸ್ಥೆಗಳ ನೇತ್ೃತ್ವ

ಉಚಿತ ಆರೋಗ್ಯ ಶಿಬಿರಗಳನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ನಗರಪಾಲಿಕೆ ಮಾಜಿ ಸದಸ್ಯ ರವೀಂದ್ರ ಕರೆ ನೀಡಿದರು.

ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ ಶನ್ ಸೊಸೈಟಿ, ಬೆಂಗಳೂರು, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಮೈಸೂರು, ಐಸಿಟಿಸಿ ವಿಭಾಗ, ಪಿಕೆಟಿಬಿ ಮತ್ತು ಸಿ ಡಿ ಆಸ್ಪತ್ರೆ, ಮೈಸೂರು, ಎನ್. ಜೆ ಆಸ್ಪತ್ರೆ ಮೈಸೂರು, ಪ್ರಾಥಮಿಕ ಆರೋಗ್ಯಕ್ಕೆ ಕೇಂದ್ರ ಬನ್ನಿಮಂಟಪ ಇವರ ವತಿಯಿಂದ ನಗರದ ಮಂಜುನಾಥಪುರದ ಸಮುದಾಯ ಭವನದಲ್ಲಿ ನಡೆದ ಆಧಾರಿತ ಉಚಿತ ಆರೋಗ್ಯ ತಪಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂತಹ ಉಚಿತ ಆರೋಗ್ಯ ಶಿಬಿರಗಳು ಜನಸಾಮಾನ್ಯರಿಗೆ ಅತ್ಯವಶ್ಯಕವಾಗಿರುವುದರಿಂದ ಶಿಬಿರಗಳನ್ನು ಎಲ್ಲ ಸ್ಥಳಗಳಲ್ಲೂ ಮಾಡಬೇಕು ಹಾಗೂ ಸರ್ಕಾರದ ಯೋಜನೆಗಳನ್ನು ಜನರು ತಮ್ಮ ಮನೆ ಬಾಗಿಲಿಗೆ ಬಂದಾಗ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಎಚ್ಐವಿ, ಏಡ್ಸ್ ಕ್ಷೇತ್ರದಲ್ಲಿ ಮಾಡಿರುವ ವಿಶಿಷ್ಟ ಸೇವೆಗಾಗಿ ಐಸಿಟಿಸಿ ವಿಭಾಗ ಪಿಕೆಟಿಬಿ ಆಸ್ಪತ್ರೆ ಇವರಿಂದ ಮೈಸೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಐಸಿಟಿಸಿ ಮೊಬೈಲ್ ವ್ಯಾನ್ ಚಾಲಕ ಆರ್. ಅನಂತಸ್ವಾಮಿ, ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ಆಪ್ತ ಸಮಾಲೋಚಕ ಎಂ.ಕೆ. ಪ್ರಕಾಶ್, ಜೆಎಸ್.ಎಸ್. ಆಸ್ಪತ್ರೆಯ ಐಸಿಟಿಸಿ ಆಪ್ತ ಸಮಾಲೋಚಕಿ ನಂದಿನಿ ಮತ್ತು ಎನ್‌.ಪಿ.ಸಿ ಆಸ್ಪತ್ರೆಯ ಐಸಿಟಿಸಿ ವಿಭಾಗದ ಪ್ರಯೋಗಶಾಲಾ ತಂತ್ರಜ್ಞಾನದ ವಿ. ಉಷಾ ಅವರ ಉತ್ತಮ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು.

ಶಿಬಿರದಲ್ಲಿ 130ಕ್ಕೂ ಹೆಚ್ಚು ಜನರು ಭಾಗವಹಿಸಿ ಉಚಿತವಾಗಿ ಬಿಪಿ, ಶುಗರ್, ಎಚ್ಐವಿ, ಗ್ಯಾಸ್ಟ್ರೋ ಇಂಟ್ರಾಲಜಿ, ಮೂಳೆ ತಪಾಸಣೆ, ಸ್ತ್ರೀ ರೋಗ ತಪಾಸಣೆ ಉಚಿತ ಕಾನೂನು ಸೇವೆಗಳು ಆಭಾ ಮತ್ತು ಇ ಶ್ರಮ್ ಕಾರ್ಡುಗಳನ್ನು ಮತ್ತು ಔಷಧೋಪಚಾರಗಳನ್ನು ಉಚಿತವಾಗಿ ಪಡೆದಿರು.

ಡಾ. ಪ್ರಶಾಂತ್, ಡಾ. ಲೋಕೇಶ್, ಎನ್.ಜಿ. ಆಸ್ಪತ್ರೆಯ ಡಾ. ಮನು ಪ್ರಕಾಶ್, ಡಾ. ಸತೀಶ್ ದುರ್ಗೇಶ್, ಡಾ.ಡಿ. ಸಿಂಧು ಲಕ್ಷ್ಮೀ , ಡಾ. ಸುಧೀಶ್ ದುರ್ಗೇಶ್, ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿದರು.

ಆರೋಗ್ಯ ಇಲಾಖೆಯ ಸಿಬ್ಬಂದಿ ಸವಿತಾ ವಸುಮತಿ, ಗೀತಾ, ಪುಟ್ಟರಾಜು, ನಾಗೇಂದ್ರ ಪ್ರಸಾದ್, ಹರೀಶ್ ಅಮರ್ ನಾಥ್, ದೇವರಾಜ್, ಪಿಕೆಟಿಬಿ, ಎನ್.ಜಿ ಆಸ್ಪತ್ರೆ, ಬನ್ನಿಮಂಟಪ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸ್ಥಳೀಯ ಮುಖಂಡರಾದ ಸುಬ್ರಹ್ಮಣ್ಯ ಹರೀಶ್, ರೂಪ ಇದ್ದರು. ಗೋಪಾಲ್ ನಿರೂಪಿಸಿದರು.

Share this article