ಸದಸ್ಯರು ಸಹಕಾರ ಸಂಘದ ಜೀವಾಳ

KannadaprabhaNewsNetwork |  
Published : Sep 26, 2024, 09:49 AM IST
ಸ್ಥಳಿಯ ಬಸವೇಶ್ವರ ಪಿ.ಕೆ.ಪಿ.ಎಸ್ ವಾರ್ಷಿಕ ಸಭೆಯಲ್ಲಿ ಧುರೀಣ ಸಿ.ಎಸ್.ನೇಮಗೌಡ ಮಾತನಾಡಿದರು. | Kannada Prabha

ಸಾರಾಂಶ

ಸದಸ್ಯರು ಸಹಕಾರ ಸಂಘದ ಜೀವಾಳವಿದ್ದಂತೆ ಸಂಘಗಳಿಂದ ಕೃಷಿಕರು ಸಾಲ ಪಡೆದು ಅಭಿವೃದ್ಧಿ ಹೊಂದಲು ಸಾಧ್ಯ. ಅದರಂತೆ ಸಾಲದ ಮರು ಪಾವತಿ ಮಾಡಿದಲ್ಲಿ ಸಂಘ ಉತ್ತುಂಗಕ್ಕೆ ಹೋಗಲು ಸಾಧ್ಯ ಎಂದು ಧುರೀಣ ಸಿ.ಎಸ್.ನೇಮಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಐಗಳಿ

ಸದಸ್ಯರು ಸಹಕಾರ ಸಂಘದ ಜೀವಾಳವಿದ್ದಂತೆ ಸಂಘಗಳಿಂದ ಕೃಷಿಕರು ಸಾಲ ಪಡೆದು ಅಭಿವೃದ್ಧಿ ಹೊಂದಲು ಸಾಧ್ಯ. ಅದರಂತೆ ಸಾಲದ ಮರು ಪಾವತಿ ಮಾಡಿದಲ್ಲಿ ಸಂಘ ಉತ್ತುಂಗಕ್ಕೆ ಹೋಗಲು ಸಾಧ್ಯ ಎಂದು ಧುರೀಣ ಸಿ.ಎಸ್.ನೇಮಗೌಡ ಹೇಳಿದರು.

ಸ್ಥಳೀಯ ಬಸವೇಶ್ವರ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 2023-24ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ರೈತರಿಗೆ ಅನುಕೂಲ ಆಗಲೆಂದು ಕೃಷಿ ಇಲಾಖೆಯ ಸಹಯೋಗದಲ್ಲಿ ವಿವಿಧ ಬೀಜಗಳು ಮತ್ತು ಗೊಬ್ಬರಗಳನ್ನು ರಿಯಾಯತಿ ದರದಲ್ಲಿ ವಿತರಿಸುತ್ತ ಬಂದಿದ್ದಾರೆ. ಅನೇಕ ಕೃಷಿಯಂತ್ರಗಳು ಸಹ ಮಾಡಿದ್ದಾರೆ. ಸುಸಜ್ಜಿತ ಸಂಘದ ಕಟ್ಟಡ ಜೀರ್ಣೋದ್ಧಾರ ಮಾಡಿದ್ದಾರೆ. ಇನ್ನು ಹತ್ತು ಹಲವಾರು ಯೋಜನೆಗಳನ್ನು ರೂಪಿಸಲಿದ್ದು, ತಮ್ಮೇಲ್ಲರ ಸಹಕಾರ ಅವಶ್ಯ ಎಂದರು.

ವಿಶ್ರಾಂತ ಪ್ರಾಚಾರ್ಯ ಎ.ಎಸ್.ನಾಯಿಕ ಮಾತನಾಡಿ, ಎಲ್ಲ ಸದಸ್ಯರ ವಿಶ್ವಾಸ ಪಡೆದುಕೊಳ್ಳಿರಿ. ರಾಜಕೀಯ ಹೊರತು ಪಡೆಸಿರಿ ಕೃಷಿಕರಿಗೆ ಹೆಚ್ಚಿನ ಸೌಲಭ್ಯ ನೀಡಿರಿ. ಅದರಂತೆ ಕೃಷಿಕರು ಸಾಲದ ಮರು ಪಾವತಿ ಮಾಡಿ ಮಾದರಿ ಸಹಕಾರ ಸಂಘ ಮಾಡಲು ತಾವೆಲ್ಲರೂ ಕೈ ಜೋಡಿಸಿರಿ ಎಂದರು.

ಮುಖ್ಯ ಕಾರ್ಯನಿರ್ವಾಹಕ ಚಂದ್ರಕಾಂತ ಪಾಟೀಲ ಜಮಾ ಖರ್ಚು ವಿವರ ಓದಿ ಹೇಳಿದರು ಮತ್ತು ಹಂಗಾಮಿನಲ್ಲಿ ಮಾಡಬೇಕಾದ ಕಾರ್ಯಕ್ಕೆ ಎಲ್ಲರಿಂದ ಅನುಭೋದನೆ ಪಡೆದುಕೊಂಡರು. ₹7.60 ಲಕ್ಷ ಲಾಭವಾಗಿದೆ. ಸುಮಾರು ₹12 ಕೋಟಿ ದುಡಿಯುವ ಬಂಡವಾಳವಿದೆ. 1100 ಜನ ಸದಸ್ಯರನ್ನು ಹೊಂದಿದ ದೊಡ್ಡ ಸಹಕಾರ ಸಂಘ ಇದಾಗಿದೆ ಎಂದು ವಿವರಿಸಿದರು.ಸಂಘದ ಅಧ್ಯಕ್ಷ ಬಸವರಾಜ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ವಿಠ್ಠಲ ತೆಲಸಂಗ, ಹಿರಿಯರಾದ ರಾಮಣ್ಣ ಬಳ್ಳೊಳ್ಳಿ, ಆರ್.ಆರ್.ತೆಲಸಂಗ, ಶಿವರಾಯ ಬಿರಾದಾರ, ಅಪ್ಪಾಸಾಬ ಮಾಕಾಣಿ, ಅಣ್ಣಾರಾಯ ಹಾಲಳ್ಳಿ, ಎಸ್.ಎಂ.ಕುಲಕರ್ಣಿ, ಸಿದ್ದಪ್ಪ ಬಳ್ಳೋಳ್ಳಿ ಸೇರಿದಂತೆ ಸಂಘದ ಆಡಳಿತ ಮಂಡಳಿಯ ಮತ್ತು ಸದಸ್ಯರು ಇದ್ದರು. ಸದಾಶಿವ ಪಡಸಲಗಿ ಸ್ವಾಗತಿಸಿದರು. ಪ್ರದೀಪ ಸಾಠೆ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ