ಯಲ್ಲಾಪುರ: ತಾಲೂಕಿನ ಮಲವಳ್ಳಿಯ ಮಾವಿನಮನೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ೬೪ನೇ ವಾರ್ಷಿಕ ಸರ್ವ ಸಾಧಾರಣ ಸಭೆಯು ಸೆ. ೧೭ರಂದು ಮಲವಳ್ಳಿಯ ರಾಮಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸುಬ್ರಾಯ ಕೃಷ್ಣ ಭಟ್ಟ ಬೋಳ್ಮನೆ ಮಾತನಾಡಿ, ಪ್ರಸ್ತುತ ಆರ್ಥಿಕ ವರ್ಷದಲ್ಲಿ ₹೪೦,೯೦,೬೩೯ ಲಾಭ ಗಳಿಸಿದೆ. ಸಂಘದ ಏಳ್ಗೆಗೆ ಸದಸ್ಯರೇ ಜೀವಾಳವಾಗಿದ್ದು, ಎಲ್ಲ ಸದಸ್ಯರು ತಮ್ಮ ವ್ಯವಹಾರವನ್ನು ಸಂಘದ ಮೂಲಕವೇ ಮಾಡಬೇಕು ಎಂದು ವಿನಂತಿಸಿದರು.
ಭಟ್ಕಳ ಎಂಜಿಎಂ ಸೌಹಾರ್ದ ಸಹಕಾರಿಗೆ ₹51.60 ಲಕ್ಷ ನಿವ್ವಳ ಲಾಭ
ಭಟ್ಕಳ: ಇಲ್ಲಿನ ಸರ್ನನಕಟ್ಟೆಯ ಮಹಾಗಣಪತಿ- ಮಹಾಸತಿ(ಎಂಜಿಎಂ) ಸೌಹಾರ್ದ ಪತ್ತಿನ ಸಹಕಾರಿ ಸಂಘದ 10ನೇ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಈರಪ್ಪ ಎಂ. ನಾಯ್ಕ ಗರಡೀಕರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ಷೇರುದಾರರನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷರು, ಸಂಘವು ಅ ಮತ್ತು ಡ ವರ್ಗದ 5422 ಸದಸ್ಯರಿಂದ ಒಟ್ಟೂ ₹263.46 ಲಕ್ಷ ಷೇರು ಬಂಡವಾಳ, ₹3612.39 ಲಕ್ಷ ಠೇವಣಿ, ₹265.89 ಲಕ್ಷ ನಿಧಿಗಳು, ₹253.91 ಲಕ್ಷ ನಿಧಿಗಳನ್ನು, ₹4100.43 ಲಕ್ಷ ದುಡಿಯುವ ಬಂಡವಾಳ ಹೊಂದಿದೆ ಎಂದರು.ಉಪಾಧ್ಯಕ್ಷ ಎಂ.ಜಿ. ಅರುಣಕುಮಾರ, ನಿರ್ದೇಶಕರಾದ ಜ್ಯೋತಿ ನಾಯ್ಕ, ಮಂಜುನಾಥ ನಾಯ್ಕ, ಉದಯ ನಾಯ್ಕ, ಸುರೇಶ ನಾಯ್ಕ, ವಿಶ್ವನಾಥ ಶೆಟ್ಟಿ, ಸವಿತಾ ನಾಯ್ಕ, ಆಶಾ ನಾಯ್ಕ, ನಾಗಪ್ಪ ನಾಯ್ಕ, ಈಶ್ವರ ಮೊಗೇರ, ನವನೀತ್ ನಾಯ್ಕ, ಜಗದೀಶ ನಾಯ್ಕ, ಜಗದೀಶ ಗೊಂಡ, ಸಹಕಾರಿ ಸಲಹೆಗಾರ ಐ.ಟಿ. ನಾಯ್ಕ, ಸಹಕಾರಿ ಧುರೀಣ ಎಂ.ಆರ್. ನಾಯ್ಕ ಮುಂತಾದವರಿದ್ದರು. ಮುಖ್ಯ ಕಾರ್ಯನಿರ್ವಾಹಕ ಕೃಷ್ಣ ಎಂ. ನಾಯ್ಕ ಸ್ವಾಗತಿಸಿ, ವರದಿ ವಾಚಿಸಿದರು. ಪ್ರಧಾನ ಕಚೇರಿ ವ್ಯವಸ್ಥಾಪಕ ವಿಶ್ವನಾಥ ನಾಯ್ಕ ವಂದಿಸಿದರು.