ಕನ್ನಡಪ್ರಭ ವಾರ್ತೆ ಗುಬ್ಬಿ
ಪ್ರತಿ ಬೂತ್ ಮಟ್ಟದಲ್ಲಿ 300 ಜನ ಬಿಜೆಪಿ ಸದಸ್ಯತ್ವವನ್ನು ಮಾಡಬೇಕಿದೆ ತಾಲೂಕಿನಲ್ಲಿ ಸುಮಾರು 65 ಸಾವಿರ ಸದಸ್ಯತ್ವವನ್ನು ಮಾಡಿ ಯಶಸ್ವಿಯಾಗಬೇಕು ಎಂದು ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ತಿಳಿಸಿದರು.ಗುಬ್ಬಿ ತಾಲೂಕಿನ ಹೊಸಕೆರೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ನಾವೆಲ್ಲರೂ ಈಗಲಿಂದಲೇ ಕಾರ್ಯಕರ್ತರನ್ನು ಸಕ್ರೀಯವಾಗಿ ತೊಡಗಿಸಿಕೊಂಡರೆ ಮುಂಬರುವ ಚುನಾವಣೆಗೆ ಅನುಕೂಲವಾಗುತ್ತದೆ ಎಂದರು.ನರೇಂದ್ರ ಮೋದಿಯವರು ಜಲಜೀವನ್ ಯೋಜನೆಯನ್ನು ಪ್ರತಿ ಮನೆ ಮನೆಗೆ ನಲ್ಲಿ ಸಂಪರ್ಕ ತಂದಿದ್ದಾರೆ. ಇದರಿಂದ ರಾಜ್ಯದ ಮಹಿಳೆಯರಿಗೆ ತುಂಬಾ ಅನುಕೂಲವಾಗಿದೆ. ಉಜ್ವಲ ಯೋಜನೆ ಅಡಿಯಲ್ಲಿ ಪ್ರತಿ ಮನೆಗೆ ಗ್ಯಾಸ್ ಹಾಗೂ ಸಬ್ಸಿಡಿ ನೀಡಲಾಗುತ್ತಿದೆ. ರೈತರಿಗೆ ಯಾವುದೇ ತೊಂದರೆ ಆದರೆ ಆಯುಷ್ಮನ್ ಕಾರ್ಡ್ ಮಾಡಿ 5 ಲಕ್ಷದ ವರೆಗೂ ಉಚಿತವಾಗಿ ಆಸ್ಪತ್ರೆ ವೆಚ್ಚವನ್ನು ಬರಿಸಲಿದ್ದು ರೈತರಿಗೆ ಈ ಯೋಜನೆ ವರದಾನವಾಗಿದೆ ಎಂದರು.ಸಿದ್ದರಾಮಯ್ಯ ಸರ್ಕಾರ ಭ್ರಷ್ಠ ಸರ್ಕಾರವಾಗಿದೆ ಈ ಸರ್ಕಾರ ಪೂರ್ಣ ಅವಧಿ ಇರಲ್ಲ ಸಿದ್ದರಾಮಯ್ಯ ಮುಡಾ ಕೇಸ್ ನಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡೇ ನೀಡುತ್ತಾರೆ. ಇನ್ನ ಎರಡು ಮೂರು ದಿನಗಳಲ್ಲಿ ಸಿದ್ದರಾಮಯ್ಯ ಭವಿಷ್ಯನಿರ್ಧಾರವಾಗುತ್ತದೆ. ಚುನಾವಣೆ ಟೈಮ್ ನಲ್ಲಿ ಗ್ಯಾರಂಟಿ ಮಾಡಿ ರೈತರಿಗೆ ಮಕ್ಮಲ್ ಟೋಪಿ ಹಾಕಿ ಅಧಿಕಾರಕ್ಕೆ ಬಂದಿದ್ದಾರೆ. ಯಾವುದೇ ಗ್ಯಾರಂಟಿಗಳು ಇಲ್ಲ ಈ ವಿಚಾರವನ್ನು ಇದನ್ನು ಕಾರ್ಯಕರ್ತರು ಮನೆ ಮನೆಗೆ ತಲುಪಿಸಬೇಕು ಎಂದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಚ್.ಟಿ. ಬೈರಪ್ಪ ಮಾತನಾಡಿ, ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾದರೋ ಯಾವುದೇ ಅಭಿವೃದ್ಧಿ ಮಾಡಿಲ್ಲ. ಸಿದ್ದರಾಮಯ್ಯ ಸರ್ಕಾರ ಸುಳ್ಳು ಸರ್ಕಾರ. ಬಿಜೆಪಿ ಸರ್ಕಾರದಲ್ಲಿ ಹತ್ತು ಕೆಜಿ ಅಕ್ಕಿಯನ್ನು ನಾವು ಕೊಟ್ಟಿದೇವೆ ಅದರಲ್ಲೂ ಕರೋನಾ ಸಂದರ್ಭದಲ್ಲಿ ಜನರಿಗೆ ಅಕ್ಕಿ ನೀಡಿದೇವೆ. ಕಾಂಗ್ರೆಸ್ ಸರ್ಕಾರ ಈಗ ಕೇವಲ ಮೂರು ಕೆಜಿ ಅಕ್ಕಿ ನೀಡುತ್ತಿದೆ. ಆದ್ದರಿಂದ ಮುಂಬರುವ ದಿನಗಳಲ್ಲಿ ನಾವೆಲ್ಲರೂ ಸಹ ಮೋದಿ ಅವರ ಕೈಬಲಪಡಿಸಿ ಮುಂಬರುವ ಚುನಾವಣೆಗಳಿಗೆ ಸದಸ್ಯತ್ವ ಅಭಿಯಾನ ಹೆಚ್ಚಿಸಬೇಕು ಎಂದರು.ಇದೇ ಸಂದರ್ಭದಲ್ಲಿ ಜಿಲ್ಲಾ ರೈತಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದರಾಮಣ್ಣ , ಬಿಜೆಪಿ ತಾಲೂಕು ಉಪಾಧ್ಯಕ್ಷ ಎಕೆಪಿರಾಜು , ತಾಲುಕು ಪ್ರಧಾನ ಕಾರ್ಯದರ್ಶಿ ಯತೀಶ್ , ಮುಖಂಡರಾದ ವಕೀಲ ನಂಜುಂಡಪ್ಪ , ಅಜಯ್ ಕುಮಾರ್ ,ರಾಜ್ ಕುಮಾರ್ ,ಮಲ್ಲೇಶ್ ಸದಾಶಿವಯ್ಯ , ಉಮಾ ಮಹೇಶ್ ,ವಿಜಿಕುಮಾರ್ ,ಇದ್ದರು.