ಸ್ಥಳೀಯ ಮುಖಂಡರಿಂದ ನೂರು ಜನರ ಸದಸ್ಯತ್ವ ಕಡ್ಡಾಯ: ಬಿಜೆಪಿ ರಾಜ್ಯ ಕೋಶಾಧ್ಯಕ್ಷ ಎ.ಎಚ್. ಬಸವರಾಜು

KannadaprabhaNewsNetwork |  
Published : Sep 23, 2024, 01:29 AM IST
22ಮಾಗಡಿ2 : ಮಾಗಡಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸದಸ್ಯತ್ವ ನೊಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಎ.ಎಚ್.ಬಸವರಾಜು ಮಾತನಾಡಿದರು. | Kannada Prabha

ಸಾರಾಂಶ

ಮಾಗಡಿ ಪುರಸಭಾ ಚುನಾವಣೆಗೆ ಬಿಜೆಪಿಯಿಂದ ಯಾರಿಗೆ ಮತ ಹಾಕಬೇಕೆಂಬ ಸೂಚನೆ ಬಿಜೆಪಿ ವರಿಷ್ಠರಿಂದ ಬಂದಿರಲಿಲ್ಲ, ಈ ಕಾರಣಕ್ಕಾಗಿ ನಾವು ಯಾವುದೇ ಪಕ್ಷದ ಪರವಾಗಿ ಮತಚಲಾಯಿಸದೆ ಚುನಾವಣೆಯಿಂದ ಗೈರು ಹಾಜರಾಗಿದ್ದೇವೆ. ಪಕ್ಷದಿಂದ ಸೂಚನೆ ಬಂದಿದ್ದರೆ ನಮ್ಮ ಪಕ್ಷದ ಪುರಸಭಾ ಸದಸ್ಯರಾದ ಭಾಗ್ಯಮ್ಮ ನಾರಾಯಣಪ್ಪನವರಿಂದ ಮತ ಹಾಕಿಸುತ್ತಿದ್ದೆ .

ಕನ್ನಡಪ್ರಭ ವಾರ್ತೆ ಮಾಗಡಿ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸೆಪ್ಟಂಬರ್ ತಿಂಗಳಿನಿಂದ ದೇಶಾದ್ಯಂತ ಬಿಜೆಪಿ ಪಕ್ಷದ ಸದಸ್ಯತ್ವ ಅಭಿಯಾನ ನಡೆಸಿದ್ದು, ನಮ್ಮ ಪಕ್ಷದಿಂದ ಸ್ಥಾನ ಪಡೆದಿರುವ ಮುಖಂಡರು ಕಡ್ಡಾಯವಾಗಿ ನೂರು ಜನ ಬಿಜೆಪಿ ಸದಸ್ಯತ್ವವನ್ನು ಮಾಡಿಸಬೇಕು ಎಂದು ಬಿಜೆಪಿ ಹಿಂದುಳಿದ ವರ್ಗದ ರಾಜ್ಯ ಕೋಶ ಅಧ್ಯಕ್ಷ ಎ.ಎಚ್.ಬಸವರಾಜು ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಬಿಜೆಪಿ ಸದಸ್ಯತ್ವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಿಜೆಪಿ ಪಕ್ಷ ಸಂಘಟನೆ ಹೆಚ್ಚಿಸಲು ಕಡ್ಡಾಯವಾಗಿ ಒಬ್ಬ ಮುಖಂಡನು 100 ಜನ ಬಿಜೆಪಿ ಸದಸ್ಯರನ್ನು ಮಾಡಬೇಕು. ಯಾರು ನೂರು ಜನರ ಸದಸ್ಯತ್ವವನ್ನು ಮಾಡುತ್ತಾರೋ ಅಂತಹವರಿಗೆ ದಸರಾ ಹಬ್ಬದ ಪ್ರಯುಕ್ತ ತಾಲೂಕು ಅಧ್ಯಕ್ಷರು ವಿಶೇಷ ಬಹುಮಾನ ನೀಡುತ್ತಾರೆ. ಬಿಜೆಪಿ ಪಕ್ಷ ಕಳೆದ ಬಾರಿ ದೇಶದಲ್ಲಿ 11 ಕೋಟಿ ಸದಸ್ಯತ್ವವನ್ನು ಹೊಂದಿತ್ತು, ಈ ಬಾರಿ 15 ಕೋಟಿ ಸದಸ್ಯತ್ವವನ್ನು ಹೊಂದುವ ಗುರಿಯನ್ನು ಇಟ್ಟುಕೊಂಡಿದ್ದು, ರಾಜ್ಯದಲ್ಲಿ 75 ಲಕ್ಷ ಹಿಂದುಳಿದ ವರ್ಗದವರ ಸದಸ್ಯತ್ವವನ್ನು ಹೊಂದುವ ಗುರಿಯನ್ನು ಇಟ್ಟುಕೊಂಡಿದ್ದು, ಚುನಾವಣೆಯಲ್ಲೂ ಹಿಂದುಳಿದ ವರ್ಗದ ಮತ ಮಹತ್ವವಾಗಿದ್ದು, ಈ ಹಿನ್ನೆಲೆ ಪಕ್ಷಕ್ಕೆ ಹಿಂದುಳಿದ ವರ್ಗದವರ ಶಕ್ತಿಯನ್ನು ಹೆಚ್ಚಿಸಬೇಕಿದೆ ಎಂದು ತಿಳಿಸಿದರು.

ಬಿಜೆಪಿ ಸದಸ್ಯತ್ವ ಮೂರು ವರ್ಷಕ್ಕೆ ಮಾತ್ರ: ಮೂರು ವರ್ಷಗಳಿಗೆ ಒಮ್ಮೆ ಬಿಜೆಪಿ ಸದಸ್ಯತ್ವ ನವೀಕರಿಸುವ ಕೆಲಸವನ್ನು ನಮ್ಮ ಪಕ್ಷ ಮಾಡುತ್ತಿದ್ದು, ಬಿಜೆಪಿ ಪಕ್ಷದ ಸದಸ್ಯರು ಕಡ್ಡಾಯವಾಗಿ ತಮ್ಮ ಸದಸ್ಯತ್ವವನ್ನು ನವೀಕರಣಗೊಳಿಸಬೇಕು. ನಾವು ನೀಡಿರುವ ಸಂಖ್ಯೆಗೆ ಮಿಸ್ ಕಾಲ್ ಕೊಡುವ ಮೂಲಕ ಉಚಿತವಾಗಿ ಬಿಜೆಪಿ ಸದಸ್ಯತ್ವವನ್ನು ಪಡೆಯಬಹುದಾಗಿದ್ದು, ರಾಮನಗರ ಜಿಲ್ಲಾ ಉಸ್ತುವಾರಿಯಾಗಿ ಜಿಲ್ಲೆಯ ಎಲ್ಲಾ ತಾಲೂಕಿನಲ್ಲೂ ಬಿಜೆಪಿ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತನ್ನು ಕೊಡಲಾಗುತ್ತದೆ. ಮಾಗಡಿಯಲ್ಲಿ 15 ರಿಂದ 20 ಸಾವಿರ ಬಿಜೆಪಿ ಸದಸ್ಯತ್ವದ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಎ.ಎಚ್. ಬಸವರಾಜು ವಿವರಿಸಿದರು.

ಪುರಸಭೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಮ್ಯಾ ನರಸಿಂಹಮೂರ್ತಿ ರವರಿಗೆ ಶೀಘ್ರದಲ್ಲೇ ಬಿಜೆಪಿ ವತಿಯಿಂದ ಮನವಿ ಪತ್ರ ಸಲ್ಲಿಸಲಾಗುತ್ತದೆ. ಮಾಗಡಿ ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ರೈತ ಭವನ ಮತ್ತು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಗೆ ಪುರಸಭಾ ವ್ಯಾಪ್ತಿಯಲ್ಲಿ ನಿವೇಶನ ಕೊಡಬೇಕೆಂದು ಮನವಿ ಸಲ್ಲಿಸುವುದಾಗಿ ಬಸವರಾಜು ಹೇಳಿದರು.

ಪುರಸಭೆ ಚುನಾವಣೆಗೆ ಪಕ್ಷದಿಂದ ಸೂಚನೆ ಬಂದಿರಲಿಲ್ಲ:

ಬಿಜೆಪಿ ತಾಲೂಕು ಅಧ್ಯಕ್ಷ ವೀರಭದ್ರಯ್ಯ ಮಾತನಾಡಿ, ಮಾಗಡಿ ಪುರಸಭಾ ಚುನಾವಣೆಗೆ ಬಿಜೆಪಿಯಿಂದ ಯಾರಿಗೆ ಮತ ಹಾಕಬೇಕೆಂಬ ಸೂಚನೆ ಬಿಜೆಪಿ ವರಿಷ್ಠರಿಂದ ಬಂದಿರಲಿಲ್ಲ, ಈ ಕಾರಣಕ್ಕಾಗಿ ನಾವು ಯಾವುದೇ ಪಕ್ಷದ ಪರವಾಗಿ ಮತಚಲಾಯಿಸದೆ ಚುನಾವಣೆಯಿಂದ ಗೈರು ಹಾಜರಾಗಿದ್ದೇವೆ. ಪಕ್ಷದಿಂದ ಸೂಚನೆ ಬಂದಿದ್ದರೆ ನಮ್ಮ ಪಕ್ಷದ ಪುರಸಭಾ ಸದಸ್ಯರಾದ ಭಾಗ್ಯಮ್ಮ ನಾರಾಯಣಪ್ಪನವರಿಂದ ಮತ ಹಾಕಿಸುತ್ತಿದ್ದೆ ಎಂದು ಹೇಳಿದರು.

ಬಿಜೆಪಿ ವಿವಿಧ ಮೋರ್ಚಗಳಿಗೆ ಪದಾಧಿಕಾರಿಗಳ ನೇಮಕ ಮಾಡಿ ಆದೇಶ ಪತ್ರ ವಿತರಿಸಲಾಯಿತು. ಜೊತೆಗೆ ಸದಸ್ಯತ್ವ ಅಭಿಯಾನದ ಹಿನ್ನೆಲೆಯಲ್ಲಿ ಬಿಜೆಪಿಯ ಮುಖಂಡರು ಮಿಸ್ ಕಾಲ್ ಕೊಡುವ ಮೂಲಕ ಬಿಜೆಪಿ ಸದಸ್ಯತ್ವವನ್ನು ಪಡೆದುಕೊಂಡರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಆರ್. ರಾಘವೇಂದ್ರ, ತಾಲೂಕು ಪ್ರಧಾನ ಕಾರ್ಯದರ್ಶಿ ಜಯರಾಮಯ್ಯ, ಮಂಜುನಾಥ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಜಗನ್ನಾಥ್, ಪುರಸಭೆ ಸದಸ್ಯ ಭಾಗ್ಯಮ್ಮ, ಮುಖಂಡರಾದ ಹನುಮಂತೇಗೌಡ, ಬಿಡದಿ ಪ್ರಸನ್ನ, ಗಾಯತ್ರಮ್ಮ, ಭಾನುಪ್ರಕಾಶ್, ನಾಗರಾಜು, ಶಂಕರ್, ಭಾಸ್ಕರ್ ಕಿರಣ್, ಮಾರಪ್ಪ, ಹೊಸಪೇಟೆ ಅಂಜು, ಸ್ವಾಮಿ, ಕುದೂರು ಶೇಷಪ್ಪ, ಬಾಬು ಪ್ರಕಾಶ್ ಸೇರಿ ಅನೇಕ ಮುಖಂಡರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಟಿಯುನಿಂದ ಗುಣಮಟ್ಟದ ಎಂಜಿನಿಯರುಗಳ ನೀಡುವ ಭರವಸೆ
ನೀರಿಗೆ ತೊಂದರೆಯಾಗದಂತೆ ಕ್ರಮವಹಿಸಿ