ಮುರುಕಣಿ ಗ್ರಾಮದಲ್ಲಿ ರೈತ ಸಂಘಕ್ಕೆ ಸದಸ್ಯತ್ವ ನೋಂದಣಿ

KannadaprabhaNewsNetwork |  
Published : Nov 13, 2025, 12:45 AM IST
ಕೆ ಕೆ ಪಿ ಸುದ್ದಿ, 02: | Kannada Prabha

ಸಾರಾಂಶ

ಕನಕಪುರ: ತಾಲೂಕಿನ ಕಸಬಾ ಹೋಬಳಿ ಮುರುಕಣಿ ಗ್ರಾಮದಲ್ಲಿ ರಾಜ್ಯ ರೈತ ಸಂಘದ ಶಾಖೆಯನ್ನು ಉದ್ಘಾಟಿಸಿ ರೈತ ಮುಖಂಡರನ್ನು ಸನ್ಮಾನಿಸಿ ಸಂಘಕ್ಕೆ ಸದಸ್ಯತ್ವ ನೋಂದಣಿ ಮಾಡಲಾಯಿತು.

ಕನಕಪುರ: ತಾಲೂಕಿನ ಕಸಬಾ ಹೋಬಳಿ ಮುರುಕಣಿ ಗ್ರಾಮದಲ್ಲಿ ರಾಜ್ಯ ರೈತ ಸಂಘದ ಶಾಖೆಯನ್ನು ಉದ್ಘಾಟಿಸಿ ರೈತ ಮುಖಂಡರನ್ನು ಸನ್ಮಾನಿಸಿ ಸಂಘಕ್ಕೆ ಸದಸ್ಯತ್ವ ನೋಂದಣಿ ಮಾಡಲಾಯಿತು.

ಸಂಘದ ಜಿಲ್ಲಾಧ್ಯಕ್ಷ ಅನುಕುಮಾರ್ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಡೆಸುತ್ತಿರುವ ಜನವಿರೋಧಿ, ರೈತ ವಿರೋಧಿ ನೀತಿಗಳನ್ನು ತಡಗಟ್ಟಿ ರೈತರ ಭೂಮಿ ಉಳಿಸಿಕೊಡಲು ರೈತ ಸಂಘಟನೆಯ ಅವಶ್ಯಕತೆ ಇದೆ ಎಂದರು.

ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಆಳುವ ಸರ್ಕಾರಗಳು ಶ್ರೀಮಂತರು ಮತ್ತು ಬಂಡವಾಳ ಶಾಹಿಗಳು, ಭೂಮಾಲೀಕರ ಪರ ಇಚ್ಛಾಶಕ್ತಿಯನ್ನು ಹೊಂದಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ಅನ್ನ ಬೆಳೆಯುವ ಮತ್ತು ಹಾಲು ಪೌಷ್ಟಿಕ ಆಹಾರಗಳನ್ನು ಒದಗಿಸುವ ರೈತರ ಕೃಷಿ ಭೂಮಿಯನ್ನು ಮಹತ್ವಾಕಾಂಕ್ಷೆ ಉದ್ದೇಶದ ಸೋಗಿನಲ್ಲಿ ಒಂದು ಲಕ್ಷ ಹೆಕ್ಟೇರ್‌ ಭೂಮಿಯನ್ನು ಗ್ರೇಟರ್ ಬೆಂಗಳೂರು, ಕರ್ನಾಟಕ ರಾಜ್ಯ ಗೃಹ ಮಂಡಳಿ ಮತ್ತು ವಿಮಾನ ನಿಲ್ದಾಣ, ಸ್ಮಾರ್ಟ್ ಸಿಟಿ ಇತ್ಯಾದಿ ಹೆಸರಿನಲ್ಲಿ ಭೂ ಸ್ವಾಧೀನ ಪಡಿಸಿಕೊಂಡು ರೈತರ ಬಾಯಿಗೆ ಮಣ್ಣು ಸುರಿದು ರೈತರನ್ನು ಬರಿಗೈ ದಾಸರನ್ನಾಗಿಸಿ ಬೀದಿ ಪಾಲು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಶಿವುಗೋಳಿಗೌಡ ಪದಾಧಿಕಾರಿಗಳಾದ ರಾಜೇಶ್ ಬಸವರಾಜು, ದಿಲೀಪ, ರವಿ, ಸುನೀಲ, ವೀರಭದ್ರೇಗೌಡ ಶ್ರೀಕಾಂತ, ಸುರೇಶ್, ರಾಜು ಮತ್ತಿತರರು ಹಾಜರಿದ್ದರು.

(ಫೋಟೋ ಕ್ಯಾಫ್ಷನ್‌) ಕನಕಪುರ ತಾಲೂಕಿನ ಮುರುಕಣಿ ಗ್ರಾಮದಲ್ಲಿ ರಾಜ್ಯ ರೈತ ಸಂಘದ ಶಾಖೆ ಉದ್ಘಾಟಿಸಿ ಸಂಘಕ್ಕೆ ಸದಸ್ಯತ್ವ ನೋಂದಣಿ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊಸ ವರ್ಷ: ದೇವಾಲಯಗಳಿಗೆ ಭಕ್ತರ ದಾಂಗುಡಿ
ಜಿ ರಾಮ್‌ ಜಿ, ಅನುದಾನ ಕಡಿತ ವಿರುದ್ಧ ಇಂದು ರಾಜ್ಯ ಸಂಪುಟದಲ್ಲಿ ನಿರ್ಣಯ?