ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ವಿತರಿಸಲಾದ ಕಳಪೆ ಮಟ್ಟದ ಶೂ ವಿತರಣೆ ಖಂಡಿಸಿ ಕರವೇ ತಾಲೂಕು ಘಟಕ ಹಾಗೂ ಹೊಸಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ವತಿಯಿಂದ ಯಲಬುರ್ಗಾ ಪಟ್ಟಣದ ಬಿಇಒ ಶ್ರೀನಿವಾಸ ಜಿ. ಬನ್ನಿಗೋಳ ಅವರಿಗೆ ಮನವಿ ಸಲ್ಲಿಸಲಾಯಿತು.
ಯಲಬುರ್ಗಾ: ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ವಿತರಿಸಲಾದ ಕಳಪೆ ಮಟ್ಟದ ಶೂ ವಿತರಣೆ ಖಂಡಿಸಿ ಕರವೇ ತಾಲೂಕು ಘಟಕ ಹಾಗೂ ಹೊಸಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ವತಿಯಿಂದ ಪಟ್ಟಣದ ಬಿಇಒ ಶ್ರೀನಿವಾಸ ಜಿ. ಬನ್ನಿಗೋಳ ಅವರಿಗೆ ಮನವಿ ಸಲ್ಲಿಸಲಾಯಿತು.
ಕರವೇ ತಾಲೂಕು ಘಟಕದ ಅಧ್ಯಕ್ಷ ಶಿವಕುಮಾರ ನಾಗನಗೌಡ್ರ ಮಾತನಾಡಿ, ತಾಲೂಕಿನ ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಸರ್ಕಾರದ ವತಿಯಿಂದ ಶೂ ವಿತರಿಸಲಾಗುತ್ತಿದೆ. ಆದರೆ ಈ ಶೂ ಕಳಪೆಯಾಗಿದೆ. ಕಂಪನಿಯ ಹೆಸರು ಕೂಡ ಇಲ್ಲ. ಅನೇಕ ಮಕ್ಕಳಿಗೆ ಶೂಗಳ ಗಾತ್ರವು ಸರಿಯಾಗಿ ಹೊಂದಿಕೆಯಾಗುತ್ತಿಲ್ಲ. ಕಳಪೆ ಗುಣಮಟ್ಟದ ಕಾರಣದಿಂದಾಗಿ ಶೂ ಧರಿಸಿದ ಕೆಲವೇ ದಿನಗಳಲ್ಲಿ ಹರಿದುಹೋಗುವ ಸ್ಥಿತಿಯಲ್ಲಿವೆ.ತಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಗುಣಮಟ್ಟ ಪರಿಶೀಲಿಸಬೇಕು. ಹಾಗೂ ನಮ್ಮ ಶಾಲೆಯ ಮಕ್ಕಳಿಗೆ ಸೂಕ್ತ ಗಾತ್ರದ ಮತ್ತು ಉತ್ತಮ ಗುಣಮಟ್ಟದ ಶೂಗಳನ್ನು ಪುನಃ ವಿತರಿಸಲು ಆಗ್ರಹಿಸುತ್ತೇವೆ. ಇಲ್ಲವಾದಲ್ಲಿ ಪಾಲಕರು ಮತ್ತು ಶಾಲಾ ಸಮಿತಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಭೀಮೇಶ ಬಂಡಿಬಡ್ಡರ್, ಎಸ್‌ಡಿಎಂಸಿ ಅಧ್ಯಕ್ಷ ಕಳಕನಗೌಡ ನಾಗನಗೌಡ್ರ, ಪ್ರಮುಖರಾದ ಪ್ರಕಾಶ, ಉಮೇಶ ಹರಿಜನ, ಸುರೇಶ ಹರಿಜನ, ಬಸವರಾಜ ಹರಿಜನ, ಚಂದ್ರು ರಾಜೂರ, ನಾಗರಾಜ, ಶಂಕರಗೌಡ ಕಂಠಪ್ಪಗೌಡ್ರ, ಬಸವರಾಜ ಹಡಗಲಿ, ಪವನಕುಮಾರ ಹಡಗಲಿ, ಮಹೇಶ, ಶರಣಯ್ಯ ಹಿರೇಮಠ, ಅನಿಲ ಹಡಪದ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.